ರೋಮ್, ಎಪ್ರಿಲ್ 28 (ಕ್ಸಿನ್ಹುವಾ) ಮರಣ ಮೃದಂಗವಾಗಿರುವ ಇಟಲಿಯಲ್ಲಿ ಕರೊನ ಸೋಂಕಿಗೆ ಮೃತಪಟ್ಟವರ ಸಂಖ್ಯೆ ಈವರೆಗೆ 26,977 ಕ್ಕೆ ಏರಿಕೆಯಾಗಿದೆ ಇದುವರೆಗಿನ ದೇಶದಲ್ಲಿ ಸೋಂಕಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದ್ದು, , ಒಟ್ಟು ಸೋಂಕಿತರ ಸಂಖ್ಯೆಯೂ 199,414 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 333 ಹೊಸ ಸಾವು-ನೋವುಗಳು ಸಂಭವಿಸಿವೆ ಎಂದು ನಾಗರಿಕ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಏಂಜೆಲೊ ಬೊರೆಲ್ಲಿ ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ನಡುವೆ ಉತ್ತರ ಲೊಂಬಾರ್ಡಿ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗವು ಮೊದಲು ಭುಗಿಲೆದ್ದ ನಂತರ ಒಟ್ಟು 1,696 ಹೊಸ ಚೇತರಿಕೆಯೊಂದಿಗೆ ಈ ವರಗೆ 66,624 ಜನರು ಗುಣಮುಖರಾಗಿದ್ದಾರೆ ಎಂದರು.
ರೋಗಲಕ್ಷಣವಿಲ್ಲದ ಅಥವಾ ಸೌಮ್ಯ ರೋಗಲಕ್ಷಣಗಳೊಂದಿಗೆ 83,504 ಜನರು ಮನೆಯಲ್ಲೇ ಪ್ರತ್ಯೇಕತೆಗೆ ಒಳಗಾಗಿದ್ದಾರೆ. ಐಸಿಯುಗಳಿಗಾಗಿ ವೆಂಟಿಲೇಟರ್‌ಗಳನ್ನು ಖರೀದಿಸಲು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣಾತ್ಮಕ ಉಪಕರಣ ಖರೀದಿಸಲು ಇಲ್ಲಿಯವರೆಗೆ 79 ಮಿಲಿಯನ್ ಯುರೋಗಳಷ್ಟು (85.5 ಮಿಲಿಯನ್ ಯು.ಎಸ್. ಡಾಲರ್) ಖರ್ಚು ಮಾಡಲಾಗಿದೆ ಎಂದು ಬೊರೆಲ್ಲಿ ಹೇಳಿದ್ದಾರೆ.ಇಟಲಿಯ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಐಎಸ್ಎಸ್) ಅಧ್ಯಕ್ಷ ಸಿಲ್ವಿಯೊ ಬ್ರೂಸಾಫೆರೊ ಮಾತನಾಡಿ, ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿಡಲು ಮುಂದಿನ ವಾರಗಳಲ್ಲಿ ಅಳವಡಿಸಿಕೊಳ್ಳುವ ಕಾರ್ಯತಂತ್ರದ ವಿವರ ನೀಡಿದರು.