ಜೂನ್ 13ರೊಳಗೆ 1 ಲಕ್ಷ ಕ್ಕೂ ಹೆಚ್ಚು ಭಾರತೀಯರು ತವರಿಗೆ....!!

ನವದೆಹಲಿ, ಮೇ  27,ಕರೋನ  ಸಂಕಷ್ಟದಿಂದ  60 ರಾಷ್ಟ್ರಗಳಲ್ಲಿ ಸಿಲುಕಿರುವ  1 ಲಕ್ಷಕ್ಕೂ ಹೆಚ್ಚು   ಭಾರತೀಯರನ್ನು ತವರಿಗೆ  ಸುರಕ್ಷಿತವಾಗಿ  ಕರೆತರಲು  ಕೇಂದ್ರ ವಂದೇ ಭಾರತ್ ಮಿಷನ್  ಯೋಜನೆ ವಿಸ್ತರಣೆ ಮಾಡಿದೆ.  ವಂದೇ ಭಾರತ್ ಮಿಷನ್ ಸಂಪೂರ್ಣ ಯಶಸ್ವಿಯಾಗಿದೆ ಎರಡನೇ ಹಂತದ ಮಿಷನ್ ಇದೆ   22ಕ್ಕೆ ಅಂತ್ಯವಾಗಿದ್ದರೂ ಇದನ್ನು ಜೂನ್ 13 ರವರೆಗೂ  ಕೇಂದ್ರ ಸರ್ಕಾರ ವಿಸ್ತರಿಸಿದೆ.ಈ ಬೃಹತ್ ಸ್ಥಳಾಂತರ ಪ್ರಕ್ರಿಯೆಗಾಗಿ ತೊಡಗಿಸಿಕೊಳ್ಳುವ ಸಚಿವಾಲಯಗಳು ಮತ್ತು ಎಲ್ಲಾ ಏಜೆನ್ಸಿಗಳೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಭೆ ನಡೆಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್  ಮಾಡಿರುವ ಅವರು,  ಎರಡನೇ ಹಂತದಲ್ಲಿ 60 ರಾಷ್ಟ್ರಗಳಿಂದ 1 ಲಕ್ಷ ಪ್ರಯಾಣಿಕರನ್ನು ಸ್ವದೇಶಕ್ಕೆ ಕರೆತರುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.