ಟರ್ಕಿಯಲ್ಲಿ ಒಂದೇ ದಿನ 1,100ಕ್ಕೂ ಹೆಚ್ಚು ಕೊರೊನಾ ಪ್ರಕರಣ

ನವದೆಹಲಿ, ಮೇ 25, ಟರ್ಕಿಯಲ್ಲಿ ಒಂದೇ ದಿನ 1,100ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, 30 ರೋಗಿಗಳು ಜೀವ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,56,827 ಏರಿಕೆ ಆಗಿದ್ದು, ಕಳೆದ 24 ಗಂಟೆಗಳಲ್ಲಿ 1,141 ಪ್ರಕರಣ ವರದಿಯಾಗಿವೆ. ಇನ್ನು ಟರ್ಕಿಯಲ್ಲಿ 4,340 ಜನ ಜೀವ ಕಳೆದುಕೊಂಡಿದ್ದಾರೆ. ಮಹಾಮಾರಿ ರೋಗದಿಂದ 1,18,700 ಜನ ಚೇತರಿಸಿಕೊಂಡಿದ್ದು, ಭಾನುವಾರ 1000 ಜನ ಗುಣಮುಖರಾಗಿದ್ದಾರೆ. ಭಾನುವಾರ, ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಮತ್ತು ಅವರ ಇರಾನಿನ ಅಧಿಕಾರಿ ಹಸನ್ ರೂಹಾನಿ ಅವರೊಂದಿಗೆ ಚರ್ಚೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ರಸ್ತೆ ಮತ್ತು ವಾಯು ಸೇವೆ ಪುನಃ ಆರಂಭಿಸುವ ಬಗ್ಗೆ ಚರ್ಚಿಸಿದರು. ಪ್ರಸ್ತುತ ಪರಿಸ್ಥಿತಿಗಳಲ್ಲಿ ವ್ಯಾಪಾರ ಪುನರಾರಂಭ ಮತ್ತು ಸರಕುಗಳ ಚಲನೆ ಅವಶ್ಯಕವಾಗಿದೆ ಎಂದು ರೂಹಾನಿ ಎರ್ಡೊಗನ್‌ಗೆ ತಿಳಿಸಿದರು.ಮಾರ್ಚ್ 25ರ ಬಳಿಕ ಟರ್ಕಿಯಲ್ಲಿ ಶುಕ್ರವಾರ (952) ಪೀಡಿತರ ಸಂಖ್ಯೆ ಇಳಿ ಮುಖವಾಗಿತ್ತು.