ಕೆಪಿಸಿಸಿ ಅಧ್ಯಕ್ಷ ನೇಮಕದಲ್ಲಿ ಇನ್ನಷ್ಟು ವಿಳಂಬ ಸರಿಯಲ್ಲ: ದಿನೇಶ್ ಗುಂಡೂರಾವ್

dinesh gundurao

ಬೆಂಗಳೂರು,ಜ 16: ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನು ವಿಳಂಬ ಸರಿಯಲ್ಲ, ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನೂ ವಿಳಂಬ ಮಾಡಕೂಡದು. ವಿಳಂಬವಾದರೆ ಗೊಂದಲ ಹೆಚ್ಚಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಆದಷ್ಟು ಬೇಗ ಮಾಡಿ ಇದಕ್ಕೆ ಇತಿಶ್ರೀ ಹಾಡಬೇಕು. ಬೇಗ ನೇಮಕ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು.

ಮೂಲ ಹಾಗೂ ವಲಸೆ ಕಾಂಗ್ರೆಸಿಗರ ಬಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಮೂಲ-ವಲಸಿಗರು ಅನ್ನೋ ಭೇದವಿಲ್ಲ.ಮೂಲ ಕಾಂಗ್ರೆಸಿಗರು, ವಲಸಿಗರು ಎಂಬುದು ಕೆಲವರ ಸೃಷ್ಟಿ ಅಷ್ಟೇ ಎಂದು ಕಿಡಿ ಕಾರಿದರು.

ಕೆಲವು ನಾಯಕರಿಗೆ ಬೇರೆ ವಿಚಾರ ಪ್ರಸ್ತಾಪ ಮಾಡುವುದಕ್ಕೆ ಇಲ್ಲ. ಬೇರೆ ಯಾವುದೇ ವಿಚಾರಗಳಿಲ್ಲದ ಕಾರಣಕ್ಕೆ ಮೂಲ ವಲಸಿಗ ಗೊಂದಲ ಸೃಷ್ಟಿ ಮಾಡಿದ್ದಾರೆ. ನಮ್ಮ ಸಿದ್ದಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ನಮ್ಮವರೇ ಎಂದು ಸ್ಪಷ್ಟಪಡಿಸಿದರು.