ಮೊರಾರ್ಜಿ ದೇಸಾಯಿ ಒಬ್ಬ ಅಪ್ರತಿಮ ಸೇವಕ

ಲೋಕದರ್ಶನ ವರದಿ

ಅಥಣಿ 02: ಮೊರಾರ್ಜಿ  ದೇಸಾಯಿ ಒಬ್ಬ ಅಪ್ರತಿಮ ಸಮಾಜ ಸೇವಕ, ರಾಜಕಾರಣಿ, ಗಾಂಧಿವಾದಿಯಾಗಿದ್ದ ಇವರು ಇಂದಿನ ಯುವ ಪಿಳೀಗೆಗೆ ಅವರ ನಡೆದ ಮಾದರಿಯಾಗಿದೆ ಎಂದು ಗ್ರಾಮದ ಮೊರಾಜರ್ಿ ವಸತಿ ಶಾಲೆಯ ಪ್ರಾಚಾರ್ಯರಾದ ಬಿ.ವಿ.ಸೋಬಕ್ಕನವರ ಹೇಳಿದರು. ಅವರು ಮುರಗುಂಡಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಮೊರಾಜರ್ಿ ದೇಸಾಯಿ 124 ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  

     ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಲಾಭದಾಯಕ ಹುದ್ದೆಗಳು ಅವರಿಗೆ ಒದಗಿ ಬಂದಿದ್ದರೂ ಕೂಡ ಆ ಲಾಭದಾಯಕ ಹುದ್ದೆಗಳನ್ನು ತಿರಸ್ಕರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು ಮೊರಾರ್ಜಿ ದೇಸಾಯಿ ಎಂದರು.  1896 ರಲ್ಲಿ ಗುಜರಾತನಲ್ಲಿ ಜನಿಸಿದ ಮೊರಾರ್ಜಿ ದೇಸಾಯಿ ಪ್ರಥಮ ಕಾಂಗ್ರೆಸ್ಸೇತರ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಕೂಡ ಮೊರಾರ್ಜಿ  ದೇಸಾಯಿ ಯವರದ್ದಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಅಥಣಿ ಸಮಾಜ ಕಲ್ಯಾಣ ಇಲಾಖೆಯ ಬಿ.ಎಸ್.ಯಾದವಾಡ, ಬ್ರಿಟೀಷರ್ ವಿರುದ್ಧ ಹೋರಾಡಲು ಇಂಡಿಯನ್ ಸಿವ್ಹಿಲ್ ಸರ್ವಿಸ್ ಲಾಭದಾಯಕ ಹುದ್ದೆ ಬಿಟ್ಟುಕೊಟ್ಟು ಅಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡರು. 1952 ರಲ್ಲಿ ಸ್ವಾತಂತ್ರ್ಯದ ನಂತರ ಮುಂಬೈ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಗೃಹ ಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಉಪ ಪ್ರಧಾನಿ ಹಾಗೂ ಪ್ರಧಾನಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು ಮೊರಾರ್ಜಿ ದೇಸಾಯಿ ಎಂದು ಹೇಳಿದರು.  

      ಮೊರಾರ್ಜಿ ದೇಸಾಯಿಯವರ ಭಾವಚಿತ್ರಕ್ಕೆ ಗ್ರಾಮದ ಹಿರಿಯ ಹೊಳೆಪ್ಪ ಪೂಜಾರಿ ನೆರವೇರಿಸಿದರು, ಪ್ರಾಸ್ತಾವಿಕವಾಗಿ ಶಶಿಕಾಂತ ಶಿವನೂರ ಮಾತನಾಡಿದರು, ಸಂತೋಷ ಹೊನಖಾಂಡೆ, ಶೋಭಾ ಪಸಾರೆ, ಸುನೀಲ ಪವಾರ, ಶೋಭಾ ಡೊಳ್ಳಿ, ರಮೇಶ ತಿಗಡಿ, ಸಂತೋಷ ಜಂಬಗಿ, ಎಮ್.ಎಸ್.ಗದ್ಯಾಳ, ಪ್ರಕಾಶ ಕಾಂಬಳೆ ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಭಾಕರ ಕೊಂಡಿ ಸ್ವಾಗತಿಸಿದರು, ಶಿಕ್ಷಕ ಬಿರಾದಾರ ನಿರೂಪಿಸಿದರು, ಸಿದಗೌಡ ಪಾಟೀಲ ವಂದಿಸಿದರು.