ಬೆಳಗಾವಿ 22: ಇಂದು ಶಿಕ್ಷಣ ಸಂಸ್ಥೆಗಳು ಹೇಗೆ ಹಣ ಗಳಿಸಿಕೊಡಬೇಕೆಂಬುದನ್ನು ಕಲಿಸುವ ಸಂಸ್ಥೆಗಳಾಗಿವೆ. ಸಾಂಸ್ಕೃತಿಕ ಚಟುವಟಿಗಳನ್ನು ಕಡೆಗಣಿಸುತ್ತಲಿವೆ. ಸಾಹಿತ್ಯ, ಸಂಗೀತ, ಕ್ರೀಡೆಗಳಿಂದ ಮನುಷ್ಯ ಕ್ರಿಯಾಶೀಲನಾಗಿರುತ್ತಾನೆ. ಗುರು ಹಿರಿಯರನ್ನು ಪ್ರೀತಿಸಬೇಕು, ರಾಷ್ಟ್ರವನ್ನು ಗೌರವಿಸಬೇಕೆಂಬ ನೈತಿಕ ಶಿಕ್ಷಣವಿಂದು ಮರೆಯಾಗುತ್ತಿದೆ ಆದರೂ ಅಮೃತ ವಿದ್ಯಾಲಯಂ ಸಂಸ್ಥೆಯಲ್ಲಿ ನೈತಕ ನೆಲೆಯಾಧಾರಿತ ಶಿಕ್ಷಣ ನೀಡುತ್ತಿದ್ದು. ಇಲ್ಲಿ ನೀಡುವ ಶಿಕ್ಷಣ ಪದ್ಧತಿ ಕುರಿತಂತೆ ನನಗೆ ಅಭಿಮಾನವಿದೆ ಎಂದು ಶಾಸಕ ಅಭಯ ಪಾಟೀಲ ಇಂದಿಲ್ಲಿ ಹೇಳಿದರು.
ನಗರದ ಅಮೃತ ವಿದ್ಯಾಲಯಂ ದ ಹೊರಾವರಣದ ವೇದಿಕೆ ಮೇಲೆ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಾಲಿನ ಶಾಲೆ ವಾಷರ್ಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಭಯ ಪಾಟೀಲ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಚಾರ್ಟರ್ಡ ಅಕೌಂಟಂಟ್ ಎಸ್. ಎನ್. ಶಿವಣಗಿಯವರು ಅಧಮ್ಯ ಚೇತನಾ ಶಕ್ತಿಯಾದ ಮಾತಾ ಅಮೃತಾನಂದಮಯಿ ಆಶಿವರ್ಾದ ನಿಮಗೆಲ್ಲರಿಗೂ ಇರುವುದರಿಂದ ನಿಮ್ಮ ಜೀವನ ಯಶಸ್ವಿಯಾಗವುದರಲ್ಲಿ ಸಂಶಯವಿಲ್ಲವೆಂದು ಹೇಳಿದರು.
ಶಾಲಾ ಆಡಳಿತಾಧಿಕಾರಿ ಪ್ರೊ. ಜಿ .ಕೆ. ಕುಲಕಣರ್ಿ ಅಮೃತಾನಂದಮಯಿ ಅಮ್ಮನ ಸಾಧನೆಗಳ ಕುರಿತಂತೆ ಸಭೆಗೆ ತಿಳಿಸಿ. ಪಾಲಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಹೇಳಿದರು. ಶಾಲೆಯ ಪ್ರಾಂಶುಪಾಲರಾದ ಸುಷ್ಮಾ ಚರಂತಿಮಠ ವಾಷರ್ಿಕ ವರದಿವಾಚನ ಮಾಡಿದರು. ಡಾ. ಸುರೇಶನ್ ಮೋತೆದಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.