ವಿದ್ಯಾರ್ಥಿ ಜೀವನ ನೈತಿಕ ಮೌಲ್ಯಗಳಿಂದ ಕೂಡಿರಬೇಕು: ನ್ಯಾಯಾಧೀಶ ರಾಜೇಶ್

ಲೋಕದರ್ಶನ ವರದಿ

ರಾಣೇಬೆನ್ನೂರು06: ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಬಹುತೇಕವಾಗಿ ಕಳೆದುಹೋಗುತ್ತಿರುವುದು ಈ ನಾಡಿನ ಮತ್ತು ದೇಶದ ಬಹು ದೊಡ್ಡ ದುರಂತದ ಸಂಗತಿಯಾಗಿದೆ ಎಂದು 1ನೇ ಹೆಚ್ಚುವರಿ ಜೆಎಂಎಫ್ಸಿ ಹಿರಿಯ ದಿವಾಣಿ ನ್ಯಾಯಾಧೀಶ ರಾಜೇಶ್ ಎಂ ಕಮತೆ ವಿಷಾಧಿಸಿದರು. 

ಅವರು ಗುರುವಾರ ನಗರದ ಹೊರವಲಯದ ಕೆ.ವಿ.ಪಾಲಿಟೆಕ್ನಿಕ್ ಎಜ್ಯುಕೇಷನ್ ಸೊಸೈಟಿ ಸಭಾಭವನದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಶಾಶ್ವತ ಲೋಕ್ ಅದಾಲತ್, ಮದ್ಯಸ್ಥಿಕೆ, ಪೋಕ್ಸೋ ಬಾಲ ನ್ಯಾಯ ಕಾಯ್ದೆಗಳ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ವಿಧ್ಯಾಥರ್ಿ ಜೀವನ ಬಹು ಸುಂದರವಾಗಿರುತ್ತದೆ. ಅಷ್ಟೇ ಕಠಿಣವಾಗಿದೆ. ಆದರೆ ಶಿಕ್ಷಣ ಪಡೆಯುವಾಗ ಏಕಚಿತ್ತದಿಂದ ಅಧ್ಯಯನ ಮಾಡಬೇಕು. ಇದರಿಂದ ವಿದ್ಯಾರ್ಥಿ ಬದುಕು ಬಹು ಸುಂದರವಾಗಲಿದೆ. ಕಾನೂನು ಎಲ್ಲರಿಗೂ ಒಂದೇ ಈ ದೇಶದ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕಾನೂನಿನ ಅಡಿಯಲ್ಲಿ ನಮ್ಮ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾಗಬೇಕು ಎಂದು ಕರೆ ನೀಡಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ 1ನೇ ಹೆಚ್ಚುವರಿ ವ ಜೆಎಂಎಫ್ಸಿ ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನು ಸೇವಾ ಸಮಿತಿಯ ಕಾರ್ಯದಶರ್ಿಗಳು ಆದ ಪಿ.ಶಿವರಾಜ್ ಅವರು ಮಾತನಾಡಿ, ಭಾರತದ ಪರಂಪರೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿ ಹಂತದಲ್ಲಿಯೂ ಶಿಕ್ಷಣದ ಜೊತೆ ಜೊತೆಗೆ ತಮ್ಮದೆಯಾದ ಸಾಧನೆಯನ್ನು ಮಾಡಿದ ಇತಿಹಾಸವಿದೆ. ಭವಿಷ್ಯದ ರೂವಾರಿಗಳು. ಇಂದಿನ ವಿದ್ಯಾಥರ್ಿಗಳು. ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯನ್ನು ಮಾಡದೇ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವುದರ ಮೂಲಕ ವ್ಯಕ್ತಿತ್ವವನ್ನು ನಿಮರ್ಿಸಿಕೊಳ್ಳಲು ಮುಂದಾಗಬೇಕು ಎಂದರು. 

ಕಾಲೇಜು ಪ್ರಾಂಶುಪಾಲ ವಾಸುದೇವ ಎಂ ಐರಣಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗೌಡಪ್ಪ ಗೌಡ್ರ, ಉಪಾಧ್ಯಕ್ಷ ವಿಠ್ಠಲ್ ವಾಯ್ ಪುಠಾಣಿಕರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಆರ್.ಬ್ಯಾಡಗಿ, ಕಾರ್ಯದಶರ್ಿ ಅಭಿಲಾಷ್ ಬ್ಯಾಡಗಿ  ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 ಕಾನೂನು ಅರಿವು-ನೆರವು ಶಿಬಿರದಲ್ಲಿ ಗ್ರಾಮೀಣ ಸಿ.ಪಿ.ಐ ಸುರೇಶ್ ಸಗರಿ ಮತ್ತು ನ್ಯಾಯವಾಧಿ ಆರ್.ಡಿ.ಗೊರವರ ಅವರುಗಳು ಪೋಕ್ಸೊ ಬಾಲನ್ಯಾಯಕಾಯ್ದೆ, ಶಾಶ್ವತ ಲೋಕ್ ಅದಾಲತ್ ಮತ್ತು ಮಧ್ಯಸ್ಥಿಕೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕ ಪ್ರವೀಣ ಬಡಿಗೇರ ಪ್ರಾಥರ್ಿಸಿದರು. ಇನ್ನೋರ್ವ ಉಪನ್ಯಾಸಕ ರವಿ ತಳವಾರ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕಿ ಬಿ.ಜ್ಯೋತಿ ವಂದಿಸಿದರು. ಕಾಲೇಜಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.