ಲೋಕದರ್ಶನ ವರದಿ
ಕಾರಟಗಿ 14: ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಶಾಲಾ ಸಂಸ್ಥೆಗಳು ನೈತಿಕ ಶಿಕ್ಷಣ ನೀಡಬೇಕಾದ ಅವಶ್ಯಕತೆಯಿದೆ ಎಂದು ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ ಸುಬ್ಬರಾವ್ ಮಂದಾ ಅಭಿಪ್ರಾಯ ಪಟ್ಟರು.
ಅವರು ಕಾರಟಗಿ ತಾಲೂಕು ಮರ್ಲಾನಹಳ್ಳಿ ಗ್ರಾಮದ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ ಪಾಲಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ನಮ್ಮ ಮಕ್ಕಳಿಗೆ ನಾವು ಬಾಲ್ಯಾವಸ್ಥೆಯಲ್ಲಿ ಎನು ಕಲಿಸಿಕೊಡುತ್ತೇವೆಯೋ ಅದು ಮಕ್ಕಳ ಮನಸಲ್ಲಿ ಬೇರೂರುತ್ತದೆ. ಆದ್ದರಿಂದ ನಾವು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ನೈತಿಕ ಶಿಕ್ಣಣದ ಜೊತೆಗೆ ಹೇಗೆ ಬದುಕಬೇಕೆಂಬ ಅರಿವನ್ನೂ ಮೂಡಿಸಬೇಕು. ಶಾಲಾ ಸಂಸ್ಥೆಗಳು ಮಕ್ಕಳಿಗೆ ಪಾಠದ ಜೊತೆಯಲ್ಲೆ ಉತ್ತಮ ಸಂಸ್ಕಾರ ಹಾಗೂ ಆದರ್ಶ ಜೀವನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ಅವರು ಅಭಿಪ್ರಾಯಪಟ್ಟರು. ನಂತರ ನಡೆದ ಕಾರ್ಯಕ್ರಮದಲ್ಲಿ ಬೇಬಿ ಕ್ಲಾಸ್, ಎಲ್ ಕೆ ಜಿ ಹಾಗೂ ಯು ಕೆ ಜಿ ಮಕ್ಕಳಿಂದ ಅವರವರ ಪಾಲಕರಿಗೆ ಪಾದ ಪೂಜೆ ಜರುಗಿತು.
ನಂತರ ಮಕ್ಕಳ ಪಾಲಕರಿಗೆ ಆಟೋಟ ಸ್ಪಧರ್ೆ ಏರ್ಪಡಿಸಲಾಗಿತ್ತು ಸ್ಪರ್ದೇಯಲ್ಲಿ ಮಕ್ಕಳ ಪಾಲಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥೆಯ ಕಾರ್ಯದಶರ್ಿ ಸೀತಾರಾಮ ಲಕ್ಷ್ಮೀ, ಮುಖ್ಯೋಪಾದ್ಯಾಯ ವಿಶ್ವನಾಥ, ಶಿಕ್ಷಕರಾದ ಪ್ರೀಯಾಂಕಾ, ಶ್ರೀದೇವಿ, ಸರಿತಾ, ಕುಸುಮಾ, ಶರೀಫಾ, ಶ್ರೀಕಾಂತ, ಪ್ರಶಾಂತ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.