ಲೋಕದರ್ಶನ ವರದಿ
ಮುದ್ದೇಬಿಹಾಳ,30: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೂಢಗಿಯಲ್ಲಿ ವಿನೂತನ ಕಾರ್ಯಕ್ರಮ.ವಿವಿಧ ರೀತಿಯ ಅಡುಗೆ ತಯಾರಿಸುವ ಸ್ಪಧರ್ೆ.
ಇಂದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಗೆ ಭಾರತೀಯ ಸಂಸ್ಕೃತಿಯ ಪ್ರಕಾರ ವಿವಿಧ ಬಗೆಯ ರುಚಿಯ ಕಾಯಿಪಲ್ಯ ಸೊಪ್ಪುಗಳು ಪ್ರಧಾನವಾದ ಭಕ್ಷ್ಯಗಳನ್ನು ತಯಾರಿಸುವ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು ಅದರಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದವು ಅತ್ಯುತ್ತಮವಾಗಿ ತಯಾರಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಖಆಒಅ ಅದ್ಯಕ್ಷರಾದ ಶ್ರೀ ಬಸವರಾಜ ಈಳಗೇರ ಗ್ರಾ ಪಂ ಸದಸ್ಯರಾದ ಶ್ರೀ ಲಕ್ಷ್ಮಣ ಬೊಮ್ಮನಗಿ ಮತ್ತು ಶ್ರೀ ನೀಲಪ್ಪ ವಂದಾಲ ಹಾಗೂ ಪಾಲಕರು ಮತ್ತು ಯುವಕ ಮಿತ್ರರು ಭಾಗವಹಿಸಿದ್ದರು ಶಿವಾನಂದ ಬೇಲಾಳ ಹಾಗೂ ಶ್ರೀ ಎಮ್ ಎಚ್ ಚೌಡಕೇರ ಮಾತನಾಡಿ ವಿದ್ಯಾಥರ್ಿಗಳಿಗೆ ಸತ್ವಬರಿತ ಆಹಾರದ ಬಗ್ಗೆ ಮತ್ತು ಪಾಕಶಾಸ್ತ್ರದ ಬಗ್ಗೆ ಮಾಹಿತಿ ನೀಡಿದರು
ಶಾಲೆಯಲ್ಲಿ ಹೊಸದಾಗಿ ರೂಪುಗೊಂಡ ಸುಂದರ ಪರಿಸರ ಹಾಗೂ ಔಷಧೀಯ ಸಸ್ಯ ಮತ್ತು ಅಲಂಕಾರಿಕ ಸಸ್ಯಗಳ ತೋಟದ ಬಗ್ಗೆ ಮೆಚ್ಚುಗೆ
ಮಕ್ಕಳಿಗೆ ಪರಿಸರ ಪ್ರಜ್ಞೆ ಮತ್ತು ಪರಿಸರ ಸ್ನೇಹಿ ಭೊದನೆಯ ಪಲವಾಗಿ
ಶಾಲಾ ಆವರಣದಲ್ಲಿ ವಿದ್ಯಾಥರ್ಿಗಳ ಶಿಕ್ಷಕರ ಮತ್ತು ಊರಿನ ನಾಗರಿಕರ ಯುವಕರ ಪರಿಶ್ರಮದಿಂದ ಅನೇಕ ಬಗೆಯ ಔಷಧೀಯ ಸಸ್ಯ ಹೂವಿನ ಹಣ್ಣಿನ ಅಲಂಕಾರಿಕ ಸಸ್ಯಗಳು ಶಾಲಾ ಆವರಣದಲ್ಲಿ ಕಂಗೊಳಿಸುತ್ತ ಸುಂದರ ಪರಿಸರ ನಿಮರ್ಾಣವಾಗಿ ವಿದ್ಯಾಥರ್ಿಗಳ ಕಲಿಕೆಗೆ ಅನುಕೂಲ ಕಲ್ಪಿಸುತ್ತದೆ ಮಕ್ಕಳು ಸಂತೋಷದಿಂದ ಶಾಲಾ ಚಟುವಟಿಕೆಯಲ್ಲಿ ತೊಡಗಿ ಸಸ್ಯಗಳನ್ನು ದತ್ತು ತೆಗೆದುಕೊಂಡು ಅವುಗಳ ಪೋಷಣೆ ಮಾಡುತ್ತಾರೆ.
ಸದರಿ ಕಾರ್ಯಕ್ರಮಗಳನ್ನು ಟಿ ಪಿ ಮುತ್ತಿನ ನಿರೂಪಿಸಿದರು ಬಿ ಎಸ್ ಚಲವಾದಿ ವಂದಿಸಿದರು.