ಲೋಕದರ್ಶನ ವರದಿ
ಗೋಕಾಕ 12: ಇಲ್ಲಿಯ ಲಯನ್ಸ್ ಮತ್ತು ಲಯನೆಸ್ಸ್ ಸಂಸ್ಥೆ ಹಾಗೂ ಹುಬ್ಬಳಿಯ ಎಮ್.ಎಮ್.ಜೋಶಿ ನೇತ್ರ ಚಿಕಿತ್ಸಾಲಯ ಮತ್ತು ಆರೋಗ್ಯ ಇಲಾಖೆ ನಿವೃತ್ತರ ಹಿತವರ್ಧಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ 42ನೇ ಮಾಸಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ಶನಿವಾರದಂದು ನಗರದ ಡಾ. ಮುರಗೋಡ ಆಸ್ಪತ್ರೆಯಲ್ಲಿ ಜರುಗಿತು.
ಈ ಶಿಬಿರದಲ್ಲಿ 36 ಜನರ ನೇತ್ರಗಳನ್ನು ತಪಾಸಣೆ ನಡೆಸಿ, 16 ಜನರ ನೇತ್ರ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿ ನೇತ್ರ ಚಿಕಿತ್ಸಾಲಯಕ್ಕೆ ಕಳುಹಿಸಲಾಗುವುದು. ಇದೂವರೆಗೆ 1280ಕ್ಕೂ ಹೆಚ್ಚು ಜನರ ನೇತ್ರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಸಲಾಗಿದೆ ಎಂದು ಸಂಘಟಕ ಜಿ.ಎಸ್.ಸಿದ್ದಾಪೂರಮಠ ಪತ್ರಿಕೆಗೆ ತಿಳಿಸಿದರು. ಈ ಶಿಬಿರದಲ್ಲಿ ಎಮ್.ಎಮ್.ಜೋಶಿ ನೇತ್ರ ಚಿಕಿತ್ಸಾಲಯದ ಡಾ. ಸಚೀನ ಮಹಾಂತವರ, ಡಾ. ಅಶೋಕ ಮುರಗೋಡ, ಡಾ. ಅಶೋಕ ಪಾಟೀಲ, ಡಾ. ಆರ್.ಡಿ.ಪಾಟೀಲ, ಡಾ.ಅಮರ ಮುರಗೋಡ ಸೇರಿದಂತೆ ಅನೇಕರು ಇದ್ದರು.