ಪ್ಯಾರಿಸ್, ಏ 17 (ಕ್ಸಿನುವಾ) ಜರ್ಮನಿಯ ಫಿಲಿಪ್ ಕೊಹ್ಲ್ ಸ್ಕ್ರೀಬರ್ ಅವರ ವಿರುದ್ಧ ತೀವ್ರ ಪೈಪೋಟಿ ಎದುರಿಸಿದ ವಿಶ್ವ ಅಗ್ರ ಟೆನಿಸ್ ತಾರೆ ನೊವಾಕ್ ಜೊಕೊವಿಚ್ಗೆ ಅಂತಿಮವಾಗಿ ಜಯ ಸಾಧಿಸಿ ಮಾಂಟೆ ಕಾರ್ಲೋ ಮಾಸ್ಟರ್ ಟೋರ್ನಿಯ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು. ಮಂಗಳವಾರ ತಡರಾತ್ರಿ 2 ಗಂಟೆ 36 ನಿಮಿಷ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಬರ್ಿಯಾ ತಾರೆ ಜೊಕೊವಿಚ್ 6-3, 4-6, 6-4 ಅಂತರದಲ್ಲಿ ಜರ್ಮನಿ ಆಟಗಾರನ ವಿರುದ್ಧ ಜಯ ಸಾಧಿಸಿದರು. ಮೂರನೇ ಸುತ್ತಿನಲ್ಲಿ ಡಿಯಾಗೊ ಹಾಗೂ ಟೇಲರ್ ಫ್ರಿಡ್ಜ್ ಅವರಲ್ಲಿ ಗೆದ್ದ ಆಟಗಾರನ ವಿರುದ್ಧ ಸೆಣಸಲಿದ್ದಾರೆ. "ಪಂದ್ಯದಲ್ಲಿ ಹಲವು ಏರಿಳಿತಗಳಾಗಿದ್ದು, ಅಂಗಳದಲ್ಲಿ ತುಕ್ಕು ಹಿಡಿದ ರೀತಿ ಅನುಭವವಾಯಿತು. ಆದರೆ, ಮುಂದಿನ ಸುತ್ತಿನಲ್ಲಿ ಇದನ್ನು ಸರಿಪಡಿಸಿಕೊಳ್ಳುತ್ತೇನೆಂಬ ವಿಶ್ವಾಸವಿದೆ. ಒಂದು ವೇಳೆ ಈ ಟೂನರ್ಿಯ ಸವಾಲನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದರೆ ನನ್ನ ಪ್ರದರ್ಶನ ಉತ್ತಮವಾಗಲಿದೆ" ಎಂದು ಜೊಕೊವಿಚ್ ಹೇಳಿದರು. ಮತ್ತೊಂದು ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಮಾರ್ಕೊ ಸೆಚ್ಚಿನಾಟೊ ಅವರು 2014ರ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕ ಅವರ ವಿರುದ್ಧ ಎರಡನೇ ಸುತ್ತಿನಲ್ಲಿ 0-6, 7-5, 6-3 ಅಂತರದಲ್ಲಿ ಜಯ ಸಾಧಿಸಿದರು.
ಮೊದಲ ಸೆಟ್ನಲ್ಲಿ 0-6 ಅಂತರದಲ್ಲಿ ಸೋಲು ಹಾಗೂ ಎರಡನೇ ಸೆಟ್ನಲ್ಲಿ 4-5 ಹಿನ್ನೆಡೆಯಲ್ಲಿದ್ದ ಸೆಚ್ಚಿನಾಟೊ ತೀವ್ರ ಒತ್ತಡಕ್ಕೆ ಒಳಗಾದರು. ಆದರೆ, ನಂತರ ಎಚ್ಚೆತ್ತುಕೊಂಡ ಅವರು ಎರಡನೇ ಸೆಟ್ ಅನ್ನು 7-5 ಅಂತರದಲ್ಲಿ ಗೆದ್ದರು. ಬಳಿಕ ಮೂರನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಎಂದಿನಂತೆ ತಮ್ಮ ಶೈಲಿಯ ಆಟ ಪ್ರದಶರ್ಿಸಿ 6-3 ಅಂತರದಲ್ಲಿ ವಾವ್ರಿಂಕ ಅವರನ್ನು ಮಣಿಸಿ ಮೂರನೇ ಸುತ್ತಿಗೆ ಪ್ರವೇಶ ಪಡೆದರು. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 7ನೇ ಶ್ರೇಯಾಂಕದ ಮರಿನ್ ಸಿಲಿಚ್ ಅವರು ಅಜರ್ೆಂಟೀನಾದ ಗೈಡೊ ಪೆಲ್ಲಾ ಅವರ ವಿರುದ್ಧ 6-3, 5-7, 6-1 ಅಂತರದಲ್ಲಿ ಸೋತು ಮಾಂಟೆ ಕಾರ್ಲೋ ಮಾಸ್ಟರ್ ಟೋರ್ನಿ ಯಿಂದ ಹೊರ ನಡೆದರು. ಗೆಲುವಿನೊಂದಿಗೆ ಪೆಲ್ಲಾ ಮೂರನೇ ಸುತ್ತಿಗೆ ಪ್ರವೇಶಿಸಿದರು.