`ತಿರುವನಂತಪುರಂ, ಅ.ಸ) - ಕೇರಳದಲ್ಲಿ ಮುಂಗಾರು ಮಳೆಯ ಅಬ್ಬರದ ಪ್ರವಾಹಕ್ಕೆ ಭಾರತೀಯ ಸೇನೆ ಸೈನಿಕರು ಅಡ್ಡಿಯಾಗಿ ನಿಂತು ಸಂತ್ರಸ್ಥರಾದ ನೂರಾರು ಮಂದಿಯನ್ನು ರಕ್ಷಿಸಿದ್ದಾರೆ.
ಈವರೆಗೂ ನಡೆದ ವಿವಿಧ ರೀತಿಯ ಮಳೆ ದುರಂತದಲ್ಲಿ 79 ಮಂದಿ ಸಾವನ್ನಪ್ಪಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಸಾವಿರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಅಪಾಯದಲ್ಲಿರುವವರನ್ನು ಭಾರತೀಯ ಸೇನೆಯ ಸೈನಿಕರು ಮತ್ತು ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇನ್ನು ಕೇರಳದ ಪ್ರವಾಹ ಪೀಡಿತ ಮಲಪ್ಪುಳದಲ್ಲಿ ಭಾರತೀಯ ಸೇನೆ ಮತ್ತೊಮ್ಮೆ ತನ್ನ ತಾಕತ್ತು ಪ್ರದಶರ್ಿಸಿದ್ದು, ಪ್ರವಾಹದಿಂದಾಗಿ ಬಾಹ್ಯ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡು ಅಪಾಯಕ್ಕೆ ಸಿಲುಕಿದ್ದ ಒಂದಿಡೀ ಗ್ರಾಮದ ಜನರನ್ನು ಗುರುತಿಸಿ ರಕ್ಷಿಸಿದ್ದಾರೆ.
ಕೇರಳದ ಮಲಪ್ಪುಳದ ವಲಿಯಕಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೀಕರ ಪ್ರವಾಹದಿಂದಾಗಿ ವಲಿಯಕಾಡು ಗ್ರಾಮದ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರು ಅಪಾಯಕ್ಕೆ ಸಿಲುಕಿದ್ದರು.
ಈ ವೇಳೆ ಇಲ್ಲಿ ರಕ್ಷಣಾ ಕಾಯರ್ಾಚರಣೆ ನಿಮಿತ್ತ ಆಗಮಿಸಿದ ಸೈನಿಕರಿಗೆ ಗ್ರಾಮಸ್ಥರ ಇರುವಿಕೆ ತಿಳಿದಿದ್ದು, ಕೂಡಲೇ ರಕ್ಷಣಾ ಕಾಯರ್ಾಚರಣೆ ಆರಂಭಿಸಿದ್ದಾರೆ.
ಗ್ರಾಮಸ್ಥರನ್ನು ರಕ್ಷಿಸಲು ಪ್ರವಾಹದ ನೀರಿಗೆ ಅಡ್ಡಲಾಗಿ ಸ್ಥಳದಲ್ಲೇ ಸುಮಾರು 35 ಅಡಿ ಉದ್ದದ ಸೇತುವೆ ನಿಮರ್ಿಸಿದ ಸೈನಿಕರು ಅದರ ಮೂಲಕ ಒಬೊಬ್ಬರನ್ನಾಗಿ ಸುಮಾರು 100 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ. ಈ ಹಿಂದೆ ಉತ್ತರಾಖಂಡದಲ್ಲೂ ಇದೇ ರೀತಿಯ ಸಾಹಸ ಪ್ರದಶರ್ಿಸಿದ್ದ ಸೈನಿಕರು ಅಲ್ಲಿಯೂ ಸಾವಿರಾರು ಮಂದಿಯನ್ನು ರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.