ಮುಂಗಾರು ಮಳೆ ಮುನ್ಸೂಚನೆ, ಕೃಷಿ ಭೂಮಿ ತಯಾರಿಕೆ ಬೆಳೆ ಯೋಜನೆ

ಧಾರವಾಡ: ಮುಂಗಾರು ಋತು ಸಮೀಪಿಸುತ್ತಿದ್ದು ಅತಿಯಾದ ತಾಪಮಾನ ಮತ್ತು ಮಳೆಯ ಅತಿಯಾದ ಅಭಾವ ರೈತರಲ್ಲಿ ಚಿಂತೆಯನ್ನುಂಟು ಮಾಡಿದೆ. ಕನರ್ಾಟಕ ರಾಜ್ಯದ ಸುಮಾರಾಗಿ ಎಲ್ಲ ಜಿಲ್ಲೆಗಳಲ್ಲಿ ಹಿಂಗಾರು ಮಳೆಯ ವೈಫಲ್ಯದಿಂದ ಅತಿಯಾಗಿ ನಷ್ಠ ಅನುಭವಿಸಿದ ರೈತರಿಗೆ ಇತ್ತೀಚೆಗೆ ಬಂದಿರುವ ಮುಂಗಾರು ಮಳೆಯ ಮುನ್ಸೂಚನೆ ಆಶಾದಾಯಕವಾಗಿ ಕಾಣುತ್ತಿಲ್ಲ. ಭಾರತ ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆ ಪ್ರಕಾರ ಮುಂಗಾರು ಮಳೆಯು ಕನರ್ಾಟಕವನ್ನು ವಾಡಿಕೆಗಿಂತ ಕನಿಷ್ಠ 6 ರಿಂದ 8 ದಿನಗಳಷ್ಟು ತಡವಾಗಿ ಬರುವ ಸಾದ್ಯತೆ ಇದೆ. ಇದರ ಜೊತೆ ಆರಂಭದ ಮುಂಗಾರು ಮಳೆಗಳು ದುರ್ಬಲವಾಗಿರುವ ಸಾದ್ಯತೆಯು ಹೆಚ್ಚಿದೆ ಎಂದು ಕೃಷಿ ವಿಶ್ವದ್ಯಾಲಯದ ಕೃಷಿ ಹವಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಚ್.ಪಾಟೀಲ್ ಹೇಳಿದರು.

        ಕೃಷಿ ವಿಶ್ವವಿದ್ಯಾಲಯ ಹಾಗೂ ಉತ್ತರ ಕನರ್ಾಟಕ ಹವಾಮಾನ ಮುನ್ಸೂಚನಾ ಕೇಂದ್ರದ ಸಹಯೋಗದಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ  ಅವರು ಮಾತನಾಡಿದರು 2019 ರ ಪೂರ್ವ ಮುಂಗಾರು ಋತುವಿನ (ಮಾರ್ಚ, ಎಪ್ರಿಲ್ ಮತ್ತು ಮೇ) ಮಳೆಯ ಹಂಚಿಕೆಯನ್ನು ಗಮನಿಸಿದಾಗ ವಾಡಿಕೆಯಂತೆ ದಕ್ಷಿಣ ಒಳನಾಡು ಭಾಗದಲ್ಲಿ 106.5 ಮಿ.ಮೀ., ಉತ್ತರ ಒಳನಾಡು ಪ್ರದೇಶದಲ್ಲಿ 59.7 ಮಿ.ಮೀ, ಮಲೆನಾಡಿನಲ್ಲಿ 108.2 ಮಿ.ಮೀ ಮತ್ತು ಕರಾವಳಿಯಲ್ಲಿ 118.5 ಮಿ.ಮೀ ಮಳೆ ಬರಬೇಕಾಗಿತ್ತು ಆದರೆ ಈ ವರ್ಷದ ಪೂರ್ವ ಮುಂಗಾರು ಋತುವಿನಲ್ಲಿ ಕೇವಲ 80.3, 23.5, 51.4 ಮತ್ತು 52.4 ಮಿ.ಮೀ ಕ್ರಮಾನುಗತವಾಗಿ ಮಳೆಯಾಗಿದೆ. ವಿಶೇಷವಾಗಿ ಉತ್ತರ ಒಳನಾಡನ್ನು ಗಮನಿಸಿದಾಗ ವಾಡಿಕೆಗಿಂತ ಶೇ.61.6 ರಷ್ಟು ಮಳೆಯ ಕೊರತೆಯನ್ನು ಗಮನಿಸಲಾಗಿದೆ.

ಹವಾಮಾನ ಇಲಾಖೆಯ ಪ್ರಕಾರ 2019 ರ ವಾಷರ್ಿಕ ಮಳೆಯ ಪ್ರಮಾಣವು ಸಾಮಾನ್ಯಕ್ಕೆ ಹತ್ತಿರ (ಟಿಜಚಿಡಿ ಟಿಠಡಿಟಚಿಟ: 93% ಣಠ 96%) ಇರುವದೆಂದು ಮುನ್ಸೂಚನೆ ಹೆಳುತ್ತಿದ್ದರೂ ಸಹ ಬೇಸಿಗೆ ತಿಂಗಳುಗಳಲ್ಲಿ ಅತಿ ಕನಿಷ್ಠ ಮಳೆಯಾಗಿದ್ದರಿಂದ ಬಹುಪಾಲು ರೈತರು ಮಣ್ಣಿನ ತೇವಾಂಶದ ಕೊರತೆಯಿಂದ ಅದರಲ್ಲೂ ಪ್ರಮುಖವಾಗಿ ಒಣಬೇಸಾಯ ರೈತರು ಕೃಷಿ ಭೂಮಿಯನ್ನು ಮಾಗಿ ಉಳಿಮೆ ಮಾಡದೆ ಹಾಗೆ ಬಿಟ್ಟಿದ್ದಾರೆ.

       ಇತ್ತೀಚಿನ ಮುಂಗಾರು ಮಳೆಯ ವಿಳಂಬ ಹಾಗೂ ದುರ್ಬಲ ಮುನ್ಸೂಚನೆಯು ರೈತರನ್ನು ಇನ್ನಷ್ಟು ಆತಂಕಕ್ಕೆ ಒಳಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಗಾರು ಋತುವಿಗೆ ಕೃಷಿ ಭೂಮಿ ತಯಾರಿಕೆಗೆ ಹಾಗೂ ಪಯರ್ಾಯ ಬೆಳೆ ಯೋಜನೆಗಳನ್ನು ತಯಾರು ಮಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ.

ಮುಂಬರುವ ಮುಂಗಾರು ಮಳೆಯ ಪೂರ್ಣ ಕಟಾವು ಮಾಡಿ ತೇವಾಂಶ ರಕ್ಷಣೆಯನ್ನು ಹೆಚ್ಚಿಸಲು ಚೌಕು ಮಡಿಗಳನ್ನು ಮಾಡುವದು ಅತೀ ಅವಶ್ಯಕ. ಇದರಿಂದ ಬಿದ್ದ ಮಳೆಯು ರೈತರ ಕೃಷಿ ಭೂಮಿಯಲ್ಲೇ ಶೇಖರಣೆಯಾಗಿ, ನಿಧಾನವಾಗಿ ಇಂಗಿ ಮಣ್ಣಿನ ತೇವಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚಿಗೆಯಾಗಿ ಗರಿಷ್ಠ ಸಸಿಗಳ ಸಂಖ್ಯೆಗಳನ್ನು ಕಾಪಾಡುವಲ್ಲಿ ಸಹಾಯವಾಗುತ್ತದೆ ಎಂದರು.

ಇದಲ್ಲದೇ ರೈತರು ಉಳಿದ ಒಂದೆರಡು ವಾರದಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಹಾಕಿಕೊಳ್ಳುವುದು ಮತ್ತು ಕೊಟ್ಟಿಗೆ ಗೊಬ್ಬರವನ್ನು ಹಾಕಿ ತೆಳುವಾಗಿ ಉಳುಮೆ ಮಾಡಿ ಬಿದ್ದ ಮಳೆಯನ್ನು ಹೆಚ್ಚಿಗೆ ಇಂಗಿಸುವಲ್ಲಿ ಅನುಕೂಲ ಮಾಡಿಕೊಳ್ಳಬೇಕು ಎಂದು ಸಲಹೇ ನೀಡಿದರು. 

ಕೃಷಿ ಹವಾಮಾನ ತಜ್ಞರಾದ ಡಾ. ಸುಮೇಶ, ಭಾರತ ಸರಕಾರದ ಹವಾಮಾನ ಇಲಾಖೆಯ ಡಾ.ರಾಜು ರೋಖಡೆ ಮತ್ತಿತರರು ಇದ್ದರು.