ಗುಳೇದಗುಡ್ಡ: ನರೇಗಾ ಯೋಜನೆಯ ಕೂಲಿ ಕೆಲಸ ಮಾಡಿದ ಕಾಮರ್ಿಕರ ಬ್ಯಾಂಕ್ ಖಾತೆಗೆ ಹಣ ಹಾಕುವ ಬದಲು ಕೂಲಿ ಕೆಲಸಕ್ಕೆ ಬಾರದವರ ಖಾತೆಗೆ ಹಣ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದದ್ದು ಸಮೀಪದ ಕೋಟೆಕಲ್ ಗ್ರಾಮ ಸಭೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯತಿಯಲ್ಲಿ ನಡೆದ ಗ್ರಾಮ ಸಭೆಯ ಆರೋಪ, ಪ್ರತ್ಯಾರೋಪಗಳು ಹಾಗೂ ಗದ್ದಲ ಗಲಾಟೆಯೊಂದಿಗೆ ಗೊಂದಲದ ಗೂಡಾಗಿ ಪರಿಣಮಿಸಿತು. ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಮತ್ತು ಸ್ಮಶಾನ ಅಭಿವೃದ್ಧಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ನರೇಗಾದಲ್ಲಿ ಕೂಲಿ ಕೆಲಸ ಮಾಡಿದವರ ಬ್ಯಾಂಕ್ ಖಾತೆಗೆ ಹಣ ಹಾಕುವ ಬದಲು ಕೂಲಿ ಕೆಲಸಕ್ಕೆ ಬರದವರ ಖಾತೆಗೆ ಹಣ ಹಾಕಿದ್ದಾರೆ. ಬೇಕಾಬಿಟ್ಟಿಯಾಗಿ 40 ಸಾವಿರ ಬಿಲ್ ತೆಗೆದು ಖಚರ್ು ಹಾಕಿದ್ದಾರೆ ಎಂದು ಗ್ರಾಮದ ಹಿರಿಯ ಹುಚ್ಚಪ್ಪ ಕಡಪಟ್ಟಿ ದೂರಿದರು.
ಗ್ರಾಮ ಪಂಚಾಯತಿ ಅಧಿಕಾರಿಗಳು ವಾರ್ಡ ಸಭೆ ಕರೆಯದೇ ಗ್ರಾಮ ಸಭೆ ನಡೆಸುವುದು ಸರಿಯಲ್ಲ. ಗ್ರಾಮ ಪಂಚಾಯತಿ ಸಿಬ್ಬಂದಿ ನಮ್ಮ ಮನೆಗಳ ಕಂಪ್ಯೂಟರ್ ಉತಾರ ಮಾಡಿಕೊಡುತ್ತೇವೆ ಎಂದು ಹೇಳಿ 5 ಸಾವಿರ ಪಡೆದರೂ, ಇದುವರೆಗೂ ಒಬ್ಬರಿಗೂ ಉತಾರ ಕೊಟ್ಟಿಲ್ಲ ಎಂದು ಗ್ರಾಮಸ್ಥರು ದೂರಿದರು.
ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಟಾಪಟಿ ನಡೆಯಿತು. ಗಲಾಟೆ ಮೀತಿ ಮೀರಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದು ತಲುಪಿತು. ಆಗ ಸ್ಥಳದಲ್ಲಿಯೇ ಇದ್ದ ಪೋಲೀಸರು ಹಾಗೂ ತಾ.ಪಂ. ಸಹಾಯಕ ಅಧಿಕಾರಿ ಸತೀಶ ನಾಯಕ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಸೀತಿಮನಿ, ಎ.ಎಸ್.ಮಡಿವಾಳರ, ನಾಗರಾಜ ರಾಜನಾಳ, ಪಿಡಿಓ ಎಲ್.ಜಿ.ಶಾಂತಗೇರಿ ಇದ್ದರು.