ಕಾಗವಾಡ 20: ತಾಲೂಕಿನ ಮೋಳೆ ಗ್ರಾಮದ ಶ್ರೀ ಓಘ ಸಿದ್ದೇಶ್ವರ ದೇವರ 10ನೇ ಬೃಹತ್ ದನಗಳ ಜಾತ್ರೆ ಇಂದಿನಿಂದ ನಾಲ್ಕು ದಿನಗಳವರಗೆ ನಡೆಯಲಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿವಿಧ ಗ್ರಾಮಗಳ 5 ಪಲ್ಲಕ್ಕಿ ಕೂಡುತ್ತವೆ ನಂತರ ವೈಭವದ ದೇವರುಗಳ ಭೇಟಿ ಕಾರ್ಯಕ್ರಮ ನಡೆಯಲಿದೆ ರಾತ್ರಿ 9 ಗಂಟೆಗೆ ವಿವಿಧ ಡೊಳ್ಳಿನ ಗಾಯನ ಸಂಘಗಳಿಂದ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯಲಿದೆ, ಶನಿವಾರ ಫೆ.22 ರಂದು ಮುಂಜಾನೆ 6 ಗಂಟೆಗೆ ಶ್ರೀ ಓಘ ಸಿದ್ದೇಶ್ವರ ದೇವರ ಮಹಾಪೂಜೆ ಹಾಗೂ ನೈವೇದ್ಯ ನಡೆಯಲಿದೆ,ರಾತ್ರಿ 9 ಗಂಟೆಗೆ ಮಲ್ಲಿಕಾರ್ಜುನ ಹವ್ಯಾಸಿ ನಾಟ್ಯ ಸಂಘದಿಂದ "ಪತಿವೃತೆಯ ಪರೀಕ್ಷೆ" ನಾಟಕ ನಡೆಯಲಿದೆ, ರವಿವಾರ ಮುಂಜಾನೆ 9 ಗಂಟೆಗೆ ಒಂದು ಕುದುರೆ ಓಡಿಸುವ ಶರ್ಯತ್ತು, ಮಧ್ಯಾಹ್ನ 2 ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿರುವ ದೇವರ ಪಲ್ಲಕ್ಕಿಗಳ ಬಿಳ್ಕೊಡುವ ಸಮಾರಂಭ ನಡೆಯಲಿದೆ,ಸೋಮವಾರ ಮುಂಜಾನೆ 9 ಗಂಟೆಗೆ ಜೋಡು ಕುದುರೆ ಗಾಡಿ ಶರ್ಯತ್ತು ನಡೆಯಲಿದೆ,ಮಂಗಳವಾರ ಮುಂಜಾನೆ 9 ಗಂಟೆಗೆ ಜೋಡೆತ್ತಿನ ಗಾಡಿ ಶರ್ಯತ್ತು ನಡೆಯಲಿದೆ ಎಂದು ಜಾತ್ರಾ ಕಮೀಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೋಟೋ ಶೀರ್ಷಿಕೆ:20 ಕಾಗವಾಡ-1 ಮೋಳೆ ಗ್ರಾಮದ ಓಘ ಸಿದ್ದೇಶ್ವರ ದೇವರ ಚಿತ್ರ.