ಅಟಲ್ಗೆ ಭಾವನಾತ್ಮಾಕ ನುಡಿನಮನ ಸಲ್ಲಿಸಿದ ಮೋಹನ ಭಾಗವತ್


ನವದೆಹಲಿ 17: ಅಟಲ್ ಬಿಹಾರಿ ವಾಜಪೇಯಿ ಅವರಂತಹವರು ಶತಮಾನಗಳಲ್ಲಿ ಒಬ್ಬರು ಮಾತ್ರ ಜನಿಸುತ್ತಾರೆ. ಮತ್ತು ಅವರು ಅಮರವಾಗಿ ಉಳಿಯುತ್ತಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್  ಮಾಜಿ ಪ್ರಧಾನಿ ನಿವಾಸದಲ್ಲಿನ ಸಂದರ್ಶನ ಪುಸ್ತಕದಲ್ಲಿ ತಮ್ಮ ಅನಿಸಿಕೆಯನ್ನು  ಬರೆದಿದ್ದಾರೆ. 

ಅಟಲ್ ವಾಜಪೇಯಿ ಅವರ ನಿಧನ ನಮ್ಮ ಹೃದಯದಲ್ಲಿ ಅನೂಜರ್ಿತವಾಗಿದೆ. ಅದನ್ನು  ಯಾರಿಂದಲೂ ತುಂಬಲು ಸಾಧ್ಯವಿಲ್ಲ . ಅಂತಹವರು ಶತಮಾನದಲ್ಲಿ ಒಬ್ಬರು ಮಾತ್ರ ಜನಿಸುತ್ತಾರೆ ಎಂದು ಜನರು ಇಷ್ಟಪಡುತ್ತಾರೆ ಎಂದು ಅವರ ಭಾವನಾತ್ಮಾಕ ನುಡಿ ನಮನ ಸಲ್ಲಿಸಿದ್ದಾರೆ. 

ವಾಜಪೇಯಿ ಅವರ ದೇಹ ನಿರ್ಗಮನದೊಂದಿಗೆ ಒಂದು ಯುಗದ ಅಂತ್ಯವಾಗಿದೆ. ಘನತೆವೆತ್ತ ಗುಣ ಬೆಳೆಸುವಲ್ಲಿ ಅವರು ಬುನಾದಿ ಹಾಕಿದರು. ಅವರ ದೊಡ್ಡ ಸಾಧನೆ ನಮ್ಮೊಂದಿಗೆ ಉಳಿಯುತ್ತದೆ. ಅಟಲ್ ಜೀ ಸತ್ತಿಲ್ಲ. ಆದರೆ ಅವರು ಅಮರರಾಗಿ ಉಳಿಯುತ್ತಾರೆ ಎಂದು ಅವರು ಹೇಳಿದ್ದಾರೆ. 

ವಾಜಪೇಯಿ ಜಗತ್ತಿನಾದ್ಯಂತ ಸ್ವಿಕರಿಸಲ್ಪಟ್ಟ ನಾಯಕರಾಗಿದ್ದು, ಸಾರ್ವಜನಿಕ ಜೇವನದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಂತಹ ಉನ್ನತ ಆದರ್ಶಗಳನ್ನು ಬೆಳೆಸಿದ್ದರು. ಅವರು ಎಂದಿಗೂ ನಿಧನರಾಗಿಲ್ಲ. ಅವರು ಎಂದೆಂದಿಂಗೂ ಅಮರವಾಗಿಯೇ ಉಳಿಯಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿಯೂ ಭಾಗವತ್   ನುಡಿ ನಮನ ಸಲ್ಲಿಸಿದ್ದಾರೆ.