ಜನಸಂಖ್ಯಾ ನಿಯಂತ್ರಣ ಕಾಯ್ದೆ ನಿಯಂತ್ರಣ ಕಾನೂನಿನ ಪರ ಮೋಹನ್ ಭಾಗ್ವತ್ ಬ್ಯಾಟಿಂಗ್

ಮೊರಾದಾಬಾದ್, ಜ 17 :      ಜನಸಂಖ್ಯಾ ನಿಯಂತ್ರಣ ಕಾನೂನಿನ ಪರ ಬ್ಯಾಟಿಂಗ್ ಮಾಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ವಿಷಯವನ್ನು ಸಂಘದ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ  ಆದಾಗ್ಯೂ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಕೇಂದ್ರಕ್ಕೆ ಬಿಟ್ಟಿದ್ದು ಎಂದಿದ್ದಾರೆ. 

 ಗುರುವಾರ ಸಂಜೆ ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳ ಸದಸ್ಯರೊಂದಿಗೆ ಸಭೆ ನಡೆಸಿದ ಭಾಗ್ವತ್, ದೇಶದ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ ಸಂಘದ ದೃಷ್ಟಿಕೋನವು ಯಾವಾಗಲೂ ಇಬ್ಬರು ಮಕ್ಕಳ ಪರವಾಗಿದೆ, ಆದರೆ ಕಾಯ್ದೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. 

 ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ನಂತರ ಉದ್ಭವಿಸಿದ ಪರಿಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ದೇಶದ ಹಿತದೃಷ್ಟಿಯಿಂದ ಜಾರಿಯಾಗಿದ್ದರೂ, ಕೆಲವರು ವಿರೋಧಿಸುತ್ತಿದ್ದಾರೆ. 

 "370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ದೇಶದಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸದ ವಾತಾವರಣವಿತ್ತು. ಅದರ ನಂತರ, ಸಿಎಎ ರೂಪಿಸಲಾಯಿತು.  ಸಿಎಎ ವಿರುದ್ಧ ಪ್ರತಿಭಟನೆಗಳು ನಡೆದಿದ್ದು, . ಇದರ ಬಗ್ಗೆ ಅನುಮಾನವಿರುವ ಜನರಿಗೆ ವಾಸ್ತವಿಕತೆಯ ಅರಿವು ಮೂಡಿಸಬೇಕು ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ಸಿಎಎ ಜಾರಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. 

 ಅಲ್ಲದೆ 370 ನೇ ವಿಧಿಯನ್ನು ರದ್ದುಪಡಿಸುವ ಬಗ್ಗೆ ಅಥವಾ ಸಿಎಎ ಅನುಷ್ಠಾನಗೊಳಿಸುವ ಬಗ್ಗೆ ಇರಲಿ, ಸಂಘವು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಎಂದ ಅವರು, ಈ ವಿಷಯದ ಬಗ್ಗೆ ಜಾಗೃತಿ  ಮೂಡಿಸುವಂತೆ 'ಸ್ವಯಂ ಸೇವಕರಲ್ಲಿ ಮನವಿ ಮಾಡಿದ್ದಾರೆ.