ಮೊಹ್ಮದ ರಫಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಯಕ ರಫೀಕ್ ಶೇಖ್ ಹಳೆ ಗಾಯಕರನ್ನು ಮರೆಯುತ್ತಿರುವುದು ಖೇದಕರ

"ಫ್ಯಾನ್ ಕ್ಲಬ್ ಆಫ್ ಓಲ್ಡ್ ಫಿಲ್ಮ ಸಾಂಗ್ಸ್" ಕಲಾವಿದರು



ಬೆಳಗಾವಿ 1: ಇಂದಿನ ಜನಾಂಗ ಹಳೆ ಗಾಯಕರುಗಳಾದ ಮೊಹ್ಮದ ರಫಿ,  ಮುಕೇಶ, ಕಿಶೋರಕುಮಾರ, ಲತಾ ಮಂಗೇಶ್ವರ ಮುಂತಾದವರನ್ನೆಲ್ಲ ಮರೆಯುತ್ತಿರುವುದು ಖೇದದ ಸಂಗತಿ. ಫ್ಯಾನ್ ಕ್ಲಬ್ ಆಫ್ ಓಲ್ಡ ಫಿಲ್ಮ ಸಾಂಗ್ಸ ದ ರುವಾರಿಗಳಾದ ಡಾ. ಎ. ಎಲ್. ಕುಲಕಣರ್ಿಯವರು ಜವಾಬ್ದಾರಿ ತೆಗೆದುಕೊಂಡು ಅವರನ್ನೆಲ್ಲ ನೆನಪು ಮಾಡಿಕೊಳ್ಳುತ್ತಿರುವುದು ನನಗೆ  ತುಂಬ ಸಂತೋಷ ತಂದಿದೆ ಎಂದು ರಫೀಕ್ ಶೇಖ್ ಹರ್ಷ ವ್ಯಕ್ತಪಡಿಸಿದರು.

"ಫ್ಯಾನ್ ಕ್ಲಬ್ ಆಫ್ ಓಲ್ಡ್ ಫಿಲ್ಮ ಸಾಂಗ್ಸ್" ದವರು  ಜುಲೈ 31 ಸಾ. 6 ಗಂಟೆಗೆ ತಿಲಕವಾಡಿ 2 ನೇ ಗೇಟ್ ಹತ್ತಿರವಿರುವ ವಾರೇಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಹಿನ್ನಲೆ ಗಾಯಕ ಮೊಹ್ಮದ ರಫಿ 38 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. 

 "ಸೌ ಬಾರ ಜನಮ ಲೇಂಗೆ......" "ತೇರಿ ಆಂಖೋ ಕೆ ಶಿವಾ ದುನಿಯಾ ಮೆ ರಖಾ ಕ್ಯಾ ಹೈ....." ಮಂತಾದ ಮೊಹ್ಮದ ರಫಿ ಗೀತೆಗಳನ್ನು ಹಾಡುಗಳನ್ನು ಹಾಡಿ ಜನರ ಗಮನ ಸೆಳೆದರು.

ಕಾರ್ಯಕ್ರಮ ಸಂಯೋಜಕ  ಡಾ. ಎ. ಎಲ್. ಕುಲಕಣರ್ಿ ಅವರು ಮಾತನಾಡಿ - "ಫ್ಯಾನ್ ಕ್ಲಬ್ ಆಫ್ ಓಲ್ಡ್ ಫಿಲ್ಮ ಸಾಂಗ್ಸ್" ಇದೊಂದು ಕನ್ನಡ, ಮರಾಠಿ, ಹಿಂದಿ ಭಾಷೆಗಳ ಹಳೆ ಚಿತ್ರಗೀತೆಗಳಿಗಾಗಿಯೇ  ಮೀಸಲಾಗಿರುವ  ವಾಟ್ಸಾಪ್ ಗ್ರುಪ್ ಆಗಿದ್ದು ಇದರಲ್ಲಿ ಬೆಳಗಾವಿಯ ಹೆಚ್ಚಿನ ಸದಸ್ಯರಿದ್ದಾರಲ್ಲದೇ  ದೇಶದ ಬೇರೆ ಬೇರೆ ಸ್ಥಳಗಳಿಂದ ಇನ್ನೂರಕ್ಕೂ ಹೆಚ್ಚು ಸಂಗೀತಾಸಕ್ತ ಸದಸ್ಯರಿದ್ದಾರೆ. ಹೊರಗಡೆ ನಾವು ಕಾರ್ಯಕ್ರಮ ನೀಡುತ್ತಿರುವುದಿದು ಪ್ರಥಮ ಕಾರ್ಯಕ್ರಮ ಇದಾಗಿದ್ದು ಇನ್ನು ಪ್ರತಿ ಮೂರು ತಿಂಗಳಿಗೊಂದು ಬೇರೆ ಬೇರೆ ಗಾಯಕರನ್ನು ನೆನಪಿಸಿಕೊಳ್ಳುವ ವಿಶೇಷ ಕಾರ್ಯಕ್ರಮಗಳನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಿರಣ ಜೋರಾಪುರ, ಗಿರೀಶ ಜುಮ್ಮಾಯಿ, ಚಂದ್ರಜ್ಯೋತಿ ದೇಸಾಯಿ, ನಿರ್ಮಲಾ ಪ್ರಕಾಶ,  ಡಾ. ಸಪ್ನಾ ಕುಲಕಣರ್ಿ,  ಅರ್ಚನಾ ಕುಲಕಣರ್ಿ, ಪೂಣರ್ಿಮಾ ಕುಲಕಣರ್ಿ, ಅಂತರಾ ಕುಲಕಣರ್ಿ, ಅಮಿತ ಕುಲಕಣರ್ಿ, ಸ್ವಸ್ತಿ ಮಾಳಗಿ ಕಲಾವಿದರು ಭಾಗವಹಿಸಿ 'ದೂರ ರಹ ಕರ ನಾಕರು ಬಾತ್ 'ಎಹಸಾನ್ ತೇರಾ ಹೋ ಮುಜಪರ' 'ಮೈ  ಜಿಂದಗಿ ಕಾ ಸಾಥ ನಿಭಾನಾ...'  ಸುಹಾನಿ ರಾತ  ಢಲ ಚುಕಿ'  'ಮೇರೆ ಮಹಬೂಬ ತುಜೆ ಮೊಹಬತ್ ಕಿ ಕಸಮ್..' 'ಮೈ ಕಹಿ ಕವಿ ನ ಬನ್ ಜಾವು' 'ತೇರೆ ಮೇರೆ ಸಪನೆ ಅಬ್ ಏಕ ರಂಗ ಹೈ' 'ಮನ ತಡ ಪತ ಹರಿಹರ...' ಒಟ್ಟು ಇಪ್ಪತ್ತೈದು  ಮೊಹ್ಮದ್ ರಫಿ ಹಾಡಿರುವ ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ದಿಲೀಪ ಮಾಳಗಿ ಉಪಸ್ಥಿತರಿದ್ದರು. ಅರುಣ ಬಾಳೇಕುಂದ್ರಿ ಗಿಟಾರ ಹಾಗೂ ತಬಲಾ ನಾರಾಯಣ ಗಣಾಚಾರಿ ಸಾಥ ನೀಡಿದರು.