ನವದೆಹಲಿ,25: ಪಕ್ಷಾತೀತವಾಗಿರ ಬೇಕಾಗಿರುವ ರಾಜ್ಯಪಲರೊಬ್ಬರು, ನಾವೆಲ್ಲ ಬಿಜೆಪಿಯವರು, ನರೇಂದ್ರ ಮೋದಿಯವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದು ಕರೆ ನೀಡಿರುವ ಮೂಲಕ ತೀವ್ರ ಚಚರ್ೆಗೆ ಕಾರಣರಾಗಿದ್ದಾರೆ.
ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು, ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ. ನಾವೆಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದು, ಬಿಜೆಪಿ ಗೆಲುವು ಪಡೆಯುವುದನ್ನು ನೋಡಲು ಉತ್ಸುಕರಾಗಿದ್ದೇವೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕು. ಇದು ದೇಶದ ಅಭಿವೃದ್ಧಿಗೆ ಬಹುಮುಖ್ಯ ಎಂದು ಕಲ್ಯಾಣ್ ಸಿಂಗ್ ತಿಳಿಸಿದ್ದಾರೆ.
ಸಾಂವಿಧಾನತ್ಮಾಕ ಹುದ್ದೆಯಲ್ಲಿರುವ ರಾಜ್ಯಪಾಲರು, ಪಕ್ಷಾತೀತವಾಗಿ ಇರುವ ಮೂಲಕ ಆ ಸ್ಥಾನಕ್ಕೆ ಗೌರವ ನೀಡಬೇಕು. ಆದರೆ ಗವರ್ನರ್ ಆಗಿದ್ದುಕೊಂಡು ಕಲ್ಯಾಣ್ ಸಿಂಗ್ ಈ ರೀತಿ ಹೇಳಿಕೆ ನೀಡಿರುವುದು ದೇಶಾದ್ಯಂತ ಚಚರ್ೆಗೆ ಗ್ರಾಸವಾಗಿದೆ.