ಆರ್‌ಬಿಐ ಕ್ರಮಗಳಿಂದ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಪ್ರಯೋಜನಕರ-ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್ 27 ,ರೆಪೊ ದರ ಕಡಿತ, ಸಾಲಗಳ ಇಎಂಐ ಪಾವತಿ ಮುಂದೂಡಿಕೆ ಮತ್ತು ಹಣ ಪ್ರಸರಣ ಹೆಚ್ಚಿಸಲು ರಿಸರ್ವ್‍ ಬ್ಯಾಂಕ್ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ,  ಈ ಕ್ರಮಗಳು ಮಾರುಕಟ್ಟೆಯಲ್ಲಿ ಹಣ ಪ್ರಸರಣವನ್ನು ಹೆಚ್ಚಿಸುವುದಲ್ಲದೆ ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ನೆರವಾಗಲಿವೆ ಎಂದು ಹೇಳಿದ್ದಾರೆ. ಕರೋನವೈರಸ್ ಪರಿಣಾಮದಿಂದ ದೇಶದ ಆರ್ಥಿಕತೆ ಕಾಪಾಡಲು ಆರ್‌ಬಿಐ ದಿಟ್ಟ ಮತ್ತು ಮಹಾ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳಿಂದ ಹಣ ಪ್ರಸರಣ ಸುಧಾರಿಸುತ್ತದೆಯಲ್ಲದೆ ನಿಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಮಧ್ಯಮ ವರ್ಗ ಮತ್ತು ವಾಣಿಜ್ಯ-ವಹಿವಾಟುಗಳಿಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಕೊವಿದ್‍ -19 ನಿಂದ ಉಂಟಾಗುವ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಆರ್‌ಬಿಐ ಶುಕ್ರವಾರ ಹಲವಾರು ಕ್ರಮಗಳನ್ನು ಪ್ರಕಟಿಸಿದೆ.ರೆಪೊ ದರವನ್ನು  75 ಮೂಲಾಂಕ ತಗ್ಗಿಸಿ ಶೇ 4.4 ಕ್ಕೆ ಇಳಿಸಿರುವುದು ಇವುಗಳಲ್ಲಿ ಪ್ರಮುಖವಾಗಿದೆ.