ಭಾರತಕ್ಕೆ ಭೇಟಿ ನೀಡಲು ಬೋರಿಸ್ ಜಾನ್ಸನ್ ಗೆ ಮೋದಿ ಆಹ್ವಾನ

ನವದೆಹಲಿ, ಡಿಸೆಂಬರ್ 19 ಇತ್ತೀಚಿನ ಚುನಾವಣೆಯಲ್ಲಿ  ಗೆಲುವು ಸಾಧಿಸಿದ ಕಾರಣಕ್ಕಾಗಿ  ಪ್ರಧಾನಿ ನರೇಂದ್ರ ಮೋದಿ ಅವರು  ಬ್ರಿಟಿಷ್ ಪ್ರಧಾನಿ   ಬೋರಿಸ್ ಜಾನ್ಸನ್ ಅವರನ್ನು  ದೂರವಾಣಿ ಮೂಲಕ ಅಭಿನಂದಿಸಿದ್ದಾರೆ.ಜೊತೆಗೆ  ಭಾರತಕ್ಕೆ ಭೇಟಿ ನೀಡುವಂತೆಯೂ  ಆಹ್ವಾನವನ್ನು ನೀಡಿದ್ದಾರೆ.ಆಹ್ವಾನವನ್ನು ಬ್ರಿಟನ್ ಸ್ವೀಕರಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ  ತಿಳಿಸಲಾಗಿದೆ. ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯಾಗಿ ಪುನರಾಯ್ಕೆಯಾಗಿರುವುದು ದೇಶದ  ಜನರು ಮತ್ತು ಕನ್ಸರ್ವೇಟಿವ್ ಪಕ್ಷದದ ಮೇಲೆ ವಿಶ್ವಾಸ ,  ನಂಬಿಕೆಯನ್ನು "ಪ್ರತಿಬಿಂಬಿಸಿದೆ  ಎಂದು ಪ್ರಧಾನಿ ಸಂದೇಶದಲ್ಲಿ ತಿಳಿಸಿದ್ದಾರೆ. "ಭಾರತದ ಜನರ ಪರವಾಗಿ  ಶುಭಾಶಯ  ತಿಳಿಸಿದ ಪ್ರಧಾನಿ, ತಮ್ಮ ಸಮರ್ಥ ನಾಯಕತ್ವದಲ್ಲಿ, ಭಾರತ ಮತ್ತು ಯುಕೆ ನಡುವಿನ ಕಾರ್ಯತಂತ್ರದ ಸಹಭಾಗಿತ್ವವು ಮತ್ತಷ್ಟು ಬಲಗೊಲಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ , ಬ್ರಿಟಿಷ್ ಪ್ರಧಾನಿ  ಪ್ರತಿಕ್ರಿಯಿಸಿ,  ವ್ಯಾಪಾರ, ಭದ್ರತೆ ಮತ್ತು ರಕ್ಷಣೆಯಂತಹ ವಿಷಯಗಳ ಬಗ್ಗೆ  ಎರಡೂ ದೇಶಗಳು  ವಾಗಿ ಕೆಲಸ ಮಾಡುವುದಾಗಿಯೂ   ಮುಂದಿನ ವರ್ಷದ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಹವಾಮಾನ ಶೃಂಗಸಭೆಗೆ ಮುಂಚಿತವಾಗಿ ಹವಾಮಾನ ಬದಲಾವಣೆಯ ಕುರಿತು ಪರಸ್ಪರ  ಸಹಕಾರ  ಕೋರುವುದಾಗಿ ಬ್ರಿಟನ್ ಪಿಎಂ ಹೇಳಿದ್ದಾರೆ.