‘ಉಪ್ಪು ತಿಂದವನು ನೀರು ಕುಡಿಯಲೇಬೇಕು’, ‘ಉರಿಗೆ ಬಂದಾಕಿ ನೀರಿಗೆ ಬರಲೇಬೇಕು’ ಎಂಬ ಗಾದೆ ಇದೆ. ಕಳ್ಳ, ಆತ ಅದೆಷ್ಟೇ ಬುದ್ದಿವಂತ ಬಲಿಷ್ಠನಾಗಿರಲಿ, ಎಷ್ಟೋ ಬಾರಿ ಸುಳ್ಳು ಮೋಸತನದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿರಲಿ ಒಂದಲ್ಲೊಂದು ದಿನ ಆತ ಸಿಕ್ಕಿಹಾಕಿಕೊಳ್ಳುತ್ತಾನೆ. ಎಲ್ಲದಕ್ಕೂ ಸಮಯ ಅನ್ನೊದು ಬಂದೆ ಬರುತ್ತದೆ. ಆ ಸಮಯ ಇದೀಗ ಬಂದಿದೆ. ‘ನಿಮಗೆ ತಾಕತ್ ಇದ್ರೆ’, ಅವರಿಗೆ ಬುದ್ದಿಕಲಿಸಿ, ಆ ಸಂಘಟನೆಯನ್ನು ಬ್ಯಾನ್ ಮಾಡಿ ಅಂತ ಸವಾಲ್ ಎಸೆದಿದ್ದ ಅನೇಕರಿಗೆ ಉತ್ತರ ಸಿಕ್ಕಿದೆ.
ಸಂಘಟನೆಯ ಸೊಗಿನಲ್ಲಿ ಉಗ್ರವಾದ ನಡೆಸಿ ಸಮಾಜದ ಸಾಮರಸ್ಯವನ್ನು ಹಾಳುಮಾಡುತ್ತಿತ್ತು ಈ ಪಿ.ಎಫ್.ಐ ಸಂಘಟನೆ. ದೇಶದ ಭದ್ರತೆ, ಆಂತರಿಕ ಸುರಕ್ಷತೆಯ ಬಗ್ಗೆ ದಶ ದಿಕ್ಕುಗಳಿಂದಲೂ ಕೇಳಿ ಬರುತ್ತಿದ್ದ ಅನೇಕ ಪ್ರಶ್ನೆಗಳ ಸುತ್ತಲೂ ಸುತ್ತುತ್ತಿದ್ದ ಸಮಾಜ ಘಾತುಕ ಶಕ್ತಿಗಳಾದಂತಹ ಪಿ.ಎಫ್.ಐ ಹಾಗೂ ಅದರ ಉಪ ಸಂಘಟನೆಗಳ ಹೆಡೆಮುರಿಯನ್ನು ಕಟ್ಟಲಾಗಿದೆ. ಈ ನವರಾತ್ರಿಯ ವಿಜಯದಶಮಿಯಂದು ಪಿ.ಎಫ್.ಐ ಅನ್ನೊ ದುಷ್ಟ ಶಕ್ತಿಯ ಸಂಹಾರ ಮಾಡಿದ ಮೋದಿ ಸರಕಾರ ದೇಶದಲ್ಲಿ ಮತ್ತೊಂದು ಕ್ಷಿಪ್ರ ಕ್ರಾಂತಿಗೆ ಮುನ್ನುಡಿ ಬರೆದಿತ್ತು. ಈ ಪಿ.ಎಫ್.ಐ ಸಂಘಟನೆಯನ್ನು ಹಿಂದೆ ಯಾವತ್ತೋ ಬ್ಯಾನ್ ಮಾಡಬಹುದಿತ್ತು. ಆದರೆ, ಹಾಗೆ ಏಕಾ ಏಕಿ ಬ್ಯಾನ್ ಮಾಡಿದ್ದರೆ ಅದು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತಿತ್ತು. ಇದಕ್ಕೊಂದು ಸುವ್ಯವಸ್ಥಿತವಾದ ಕೆಡ್ಡಾ ತಯಾರಿಸಲು ವಿವಿಧ ವಿಭಾಗಗಳ ಅಧಿಕಾರಿಗಳೊಟ್ಟಿಗೆ ಮೂರು ನಾಲ್ಕು ತಿಂಗಳ ಕಾಲ ಸಭೆ ನಡೆಸಿ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಕಲೆಹಾಕಿದ್ದರು. ಅದರ ಕಾರಣಗಳನ್ನು ಪಟ್ಟಿಮಾಡಿದ ಎನ್. ಐ.ಎ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ತಮ್ಮ ಎಲ್ಲಾ ಸಭೆಗಳು ಮುಗಿದ ಬಳಿಕವೇ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಪಿ.ಎಫ್.ಐ ಮುಖಂಡರ ಹಿಂಬಾಲಕರಿಗೆ ಮುಂಚಿತವಾಗಿ ವಿಷಯ ಗೊತ್ತಾಗಿಬಿಟ್ಟರೆ ಅವರು ಹೇಗೆಲ್ಲ ತೊಂದರೆ ಉಂಟುಮಾಡಬಲ್ಲರು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಈಡಿ ಮತ್ತು ಎನ್.ಐ.ಎ ಅಧಿಕಾರಿಗಳು ಅನುಮಾನಿತ 250ಕ್ಕೂ ಹೆಚ್ಚು ಪಿ.ಎಫ್.ಐ ಮುಖಂಡರ ನಿವಾಸಗಳ ಮೇಲೆ ಮಧ್ಯರಾತ್ರಿ ಬಲೆ ಬಿಸಿ ತಮ್ಮ ಕೆಡ್ಡಾದೊಳಗೆ ಕೆಡವಿ ಬಿಟ್ಟಿದ್ದರು. ಅಧಿಕಾರಿಗಳ ಚಾಣಾಕ್ಷತೆ ಮತ್ತು ತಂತ್ರಗಾರಿಕೆ ಹೇಗಿತ್ತೆಂದರೆ, ಬಹಳ ಆಳಕ್ಕೆ ಬೇರೂರಿದ್ದ ಪಿ.ಎಫ್.ಐ ಯನ್ನು ಬ್ಯಾನ್ ಗೊಳಿಸಿದ ಮೇಲೂ ಕೂಡಾ ಒಂದೇ ಒಂದು ಅಹಿತಕರವಾದ ಘಟನೆಗಳು ನಡೆದಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಯೋಗಿಸಿದ್ದ ಬ್ಯಾನ್ ಅಸ್ತ್ರವನ್ನು ಮೆಚ್ಚಲೆಬೇಕು. ಆದರೆ ರೆಂಬೆಗಳನ್ನು ಕತ್ತರಿಸುವುದಕ್ಕಿಂತ ಅದರ ಬೇರುಗಳನ್ನೇ ಕತ್ತರಿಸಿದ್ದರೆ ಮತ್ತಷ್ಟು ಚನ್ನಾಗಿರುತ್ತಿತ್ತೆಂಬುದು ನನ್ನ ಅಭಿಪ್ರಾಯ.
ಆರಂಭದಲ್ಲಿ, ‘ನಮ್ಮದು ರಾಜಕೀಯ ಬೆಂಬಲಿತ ಸಂಘಟನೆ, ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ದ ನಾವು ಹೋರಾಟ ಮಾಡುತ್ತೇವೆ ಅಂತ ಪಿ.ಎಫ್.ಐ ನಾಟಕವಾಡುತ್ತ ತನ್ನ ಕೃತ್ಯಗಳ ಸುಳಿವುಗಳನ್ನು ಕಿಂಚಿತ್ತೂ ಬಿಟ್ಟುಕೊಡದೆ ತಪ್ಪಿಸಿಕೊಳ್ಳುತಿತ್ತು. ಅದೆಷ್ಟೋ ಗಲಭೆಗಳಲ್ಲಿ ಪಿ.ಎಫ್.ಐ ಕೈವಾಡವಿದ್ದರೂ ಅದನ್ನು ಸಾಬೀತು ಪಡಿಸಲು ಸಾಕ್ಷಿಗಳು ಇಲ್ಲದ ಕಾರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಸಾಮಾನ್ಯವಾಗಿ ಕಾನೂನಿನ ಪ್ರಕಾರ ಯಾವುದೇ ಒಂದು ಸಂಘಟನೆಯನ್ನು ಬ್ಯಾನ್ ಮಾಡಬೆಕೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ಅದರ ಪೂರ್ವ ಸಿದ್ಧತೆಗಳನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರು ಬಹಳ ಅಚ್ಚುಕಟ್ಟಾಗಿಯೇ ಮಾಡಿದ್ದರು. ಈ ಹಿಂದೆ ಅಮಿತ್ ಶಾ ಗುಜರಾತಿನಲ್ಲಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಸಿಮಿ ಮುಜಾಹಿದ್ದಿನ್ ಸಂಘಟನೆಗಳ ಚಲನವಲನಗಳ ಮಾಹಿತಿಯನ್ನು ಕಲೆಹಾಕುವಲ್ಲಿ ಬಹಳಷ್ಟು ಪರಿಶ್ರಮ ಪಟ್ಟು ಯಶಸ್ಸು ಕಂಡಿದ್ದರು.
ಇಂತಹ ಕಾರ್ಯಾಚರಣೆ ಬೇರೆ ಯಾವುದೇ ಸರಕಾರದ ಅವಧಿಯಲ್ಲಿ ನಡೆದಿದ್ದರೆ ಅಷ್ಟೊಂದು ಕಾಂಟ್ಟ್ರುವರ್ಷಿ ಆಗುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ಇಸ್ಲಾಮಿಕ್ ಸಂಘಟನೆಯೊಂದರ ಮೇಲೆ ದಾಳಿ ನಡೆಸಿ ಅದರ ಮುಖಂಡ, ಕಾರ್ಯಕರ್ತರನ್ನು ಬಂಧಿಸಿರುವ ಸಂಗತಿ ಸಹಜವಾಗಿಯೇ ಒಂದು ಕೊಮಿನ ಅಸಹನೆಗೆ ಕಾರಣವಾಗುತ್ತದೆ. ಅದರಲ್ಲೂ ಬಿಜೆಪಿಗೆ ಮಾತ್ರ ಹೇಳಿ ಕೇಳಿ ಮುಸ್ಲಿಂ ವಿರೋಧಿ ಅನ್ನೋ ಹಣೆಪಟ್ಟಿ ಎಂದಿನಿಂದಲೂ ಇದ್ದೆ ಇದೆ. ಆದರೆ, ಈಗ ಮಾತ್ರ ಹಾಗಾಗಲೇ ಇಲ್ಲ. ಪಿ.ಎಫ್.ಐ ವಿರುದ್ದದ ಕಾರ್ಯಾಚರಣೆಯನ್ನು ಅನೇಕ ಇಸ್ಲಾಮಿಕ್ ಸಂಘಟನೆಗಳೇ ಸ್ವಾಗತಿಸಿವೆ. ಈ ಎಲ್ಲಾ ಯಶಸ್ವಿ ಕಾರ್ಯಾಚರಣೆಯ ಹಿಂದೆ ಇದ್ದಿದ್ದು ಮಾತ್ರ ಭಾರತೀಯ ರಕ್ಷಣಾ ಸಲಹೆಗಾರರಾದ ಮಾಸ್ಟರ್ ಮೈಂಡ್ ಅಜೀತ್ ದೊವಲ್. ಇವರ ಚಾಣಾಕ್ಷತೆ ಹೇಗಿತ್ತೆಂದರೆ, ಒಂದಿಷ್ಟು ತನಿಖಾ ಅಧಿಕಾರಿಗಳು ಪಿ.ಎಫ್.ಐ ಸಂಘಟನೆಯ ಸದಸ್ಯರಾಗಿ ಇದರೊಳ ಹೊಕ್ಕು ಅದರ ಎಲ್ಲಾ ಅಂಗ ಸಂಸ್ಥೆಗಳಲ್ಲೂ ಕೆಲಸಕ್ಕೆ ಸೇರಿಕೊಳ್ಳುವರೀತಿ ನಾಟಕವಾಡಿ ಅಲ್ಲಿ ಸುಮಾರು ಮೂರು ತಿಂಗಳಕಾಲ ಕಾರ್ಯನಿರ್ವಹಿಸಿದ ಅಧಿಕಾರಿಗಳು ಪಿ.ಎಫ್.ಐ ಗೆ ಸಂಭಂದಿಸಿದ ಸಾಕಷ್ಟು ದಾಖಲೆಗಳು, ಅವರ ದುಷ್ಕೃತ್ಯದ ವಿವರ, ಅವರ ಹಣಕಾಸಿನ ಮೂಲಗಳು, ಅವರಿಗಿದ್ದ ಸಂಪರ್ಕ ಜಾಲ ಹೀಗೆ ಎಲ್ಲವನ್ನೂ ಪತ್ತೆ ಹಚ್ಚುವಲ್ಲಿ ಯಶಸ್ಸನ್ನು ಕಂಡಿದ್ದರು.
ಪಿ.ಎಫ್.ಐ ಸಂಘಟನೆಯ ಮೂಲ ಮತ್ತು ಅವರ ಉದ್ದೇಶ:-
ಪಿ.ಎಫ್.ಐ ಸಂಘಟನೆ ಈ ಹಿಂದೆ ನಿಷೇಧಿಸಲಾಗಿದ್ದ ‘ಸಿಮಿ’ ‘ಖಣಣಜಜಟಿಣ ಟಚಿಟಛಿ ಟಠಜಟಜಟಿಣ ಠ ಟಿಜಚಿ’ ಸಂಘಟನೆಯ ರೂಪಾಂತರಿ. ಇಂದಿನ ಎಸ್.ಡಿ.ಪಿ.ಐ ರಾಜಕೀಯ ಪಕ್ಷದ ಅಧ್ಯಕ್ಷನಾದ ಅಬುಬಕ್ಕರ್, 1982ರ ಸಂದರ್ಭದಲ್ಲಿ ಕೇರಳ ಸಿಮಿ ಸಂಘಟನೆಯ ಮುಖ್ಯಸ್ಥನಾಗಿದ್ದ. ಪಿ.ಎಫ್.ಐ. ನ ಉಪಾಧ್ಯಕ್ಷನಾಗಿರುವ ಅಬ್ದುಲ್ ರಹಿಮಾ ಕೂಡಾ 1982 ರಿಂದ 1993ರ ಅವಧಿಯಲ್ಲಿ ಸಿಮಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ. ಹೀಗೆ ಸಿಮಿ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ಇಂದು ಪಿ.ಎಫ್.ಐ ನಲ್ಲಿ ಸದಸ್ಯ ಹಾಗೂ ಅದರ ಮುಖಂಡರಾಗಿದ್ದಾರೆ. 2001 ರಲ್ಲಿ ಸಿಮಿ ಸಂಘಟನೆ ನಿಷೇಧಕ್ಕೊಳಪಟ್ಟ ನಂತರ ತಮ್ಮ ಅಸ್ಥಿತ್ವವನ್ನು ಉಳಿಸುಕೊಂಡು ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮುಂದುವರಿಸಲು ಇವರೆಲ್ಲ ಬೇರೆ ಬೇರೆ ಸಂಘಟನೆಗಳನ್ನು ಕಟ್ಟಿಕೊಂಡಿದ್ದರು. ಆ ಎಲ್ಲಾ ಸಂಘಟನೆಗಳು ಮತ್ತೆ ಒಟ್ಟಾಗಿದ್ದರ ಪರಿಣಾಮ 2007ರಲ್ಲಿ ಪಿ.ಎಫ್.ಐ ಹುಟ್ಟಿಕೊಂಡಿತ್ತು. ಸಮಾಜದ ವಿವಿಧ ವಲಯದ ಜನರನ್ನು ತಲಪುವುದಕ್ಕಾಗಿ ಪಿ.ಎಫ್.ಐ ತನ್ನ ಎಂಟು ಉಪ ಸಂಘಟನೆಗಳನ್ನು ರಚಿಸಿಕೊಂಡಿತ್ತು. ಇವೆಲ್ಲವೂ ಮೇಲ್ನೋಟಕ್ಕೆ ಮಾತ್ರ ಸಮಾಜ ಸುಧಾರಣೆ ಹಾಗೂ ರಾಜಕೀಯ ಅಜೆಂಡಾ ಹೊಂದಿದ್ದು, ಆಳದಲ್ಲಿ ಇವರ ಉದ್ದೇಶ ಬೇರೆಯೇ ಇದೆ. 2047ರ ಹೊತ್ತಿನಲ್ಲಿ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕರಣ ಮಾಡಲು ತಯಾರಿಸಿದ ಇವರ ಸೀಕ್ರೆಟ್ ಮಿಷನ್ ‘ಘಜ್ವಾ ಎ ಹಿಂದ್’ ಎಂಬ ಎಂಟು ಪುಟಗಳ ಕೈಪಿಡಿ ಪಿ.ಎಫ್.ಐ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರ ಮನೆಗಳಲ್ಲಿದೆ. ಸಂವಿಧಾನ ಹಾಗೂ ಅಂಬೇಡ್ಕರ್ ಹೆಸರನ್ನು ಮುಂದಿಟ್ಟುಕೊಂಡು ಈ ಸಮಾಜದಲ್ಲಿ ಅಶಾಂತಿ, ಗದ್ದಲ, ಗೊಂದಲಗಳನ್ನು ಹೇಗೆಲ್ಲ ಸೃಷ್ಟಿಸಬೇಕೆಂಬ ಅಂಶಗಳನ್ನು ಒಳಗೊಂಡಿದ್ದ ಆ ಕೈಪಿಡಿ ತನಿಖಾ ಅಧಿಕಾರಿಗಳ ಕೈಗೆ ಸಿಕ್ಕಿತ್ತು. ಇವರ ಕರಾಳ ಕೃತ್ಯಗಳ ಅಂಶಗಳನ್ನು ಅಧ್ಯಯನ ಮಾಡಿದ ಈಡಿ, ಎನ್.ಐ.ಎ ಅಧಿಕಾರಿಗಳೆ ಆಶ್ಚರ್ಯ ಚಕಿತರಾಗಿದ್ದರು.
ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಪಿ.ಎಫ್.ಐ ನಂಟು ಹಾಗೂ ಹಣದ ಮೂಲ:- ನೆಟ್ವರ್ಕ18 ವರದಿ ಹೇಳುವಂತೆ, ಪಿ.ಎಫ್.ಐ, ಸಂಘಟನೆಯು ಬಾಂಗ್ಲಾದೇಶದ ‘ಜಮಾತ್ ಉಲ್ ಮುಜಾಹಿದಿನ್’, ಅಫ್ಘಾನಿಸ್ತಾನದ ತಾಲಿಬಾನ್, ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯಾದ ಐಎಸ್. ಐಎಸ್ ಜೊತೆ ನಿಕಟವಾಗಿ ಸಂಪರ್ಕ ಹೊಂದಿತ್ತು. ಅಲ್ಲದೆ ಗಲ್ಫ್ ರಾಷ್ಟಗಳಲ್ಲಿ ತನ್ನ ಹಲವು ಸಂಘಟನೆಗಳ ಮೂಲಕ ಕಾರ್ಯ ನಿರ್ವಹಿಸುತ್ತ, ಅಲ್ಲಿನ ಅಕ್ರಮ ಹಣವನ್ನು ಇಲ್ಲಿಗೆ ತಂದು ಅದನ್ನು ಭಾರತದಲ್ಲಿ ಕೋಮು ಗಲಭೆಗಳಿಗೆ ಬಳಸುತ್ತಿದ್ದರು. ಅಲ್ಲಿಂದ ಬರುವ ಹಣವನ್ನು ಪಿ.ಎಫ್.ಐ ಹವಾಲಾ ಮೂಲಕ ಸ್ವೀಕರಿಸಿ ಅದನ್ನು ರಿಯಲ್ ಎಸ್ಟೇಟ್ ಹಾಗೂ ಇನ್ನಿತರೆ ವ್ಯಾಪಾರಗಳಲ್ಲಿ ವ್ಯಯಿಸುತ್ತಿತ್ತು. ಸೌದಿ ಅರೇಬಿಯಾದಲ್ಲಿ ‘ಋಜಚಿಟಿ ಠಚಿಟ ಜಿಠಣಟ’ ಹಾಗೂ ‘ಋಜಚಿಟಿ ಜಿಜಣಚಿಡಿಟಿಣಥಿ ಜಿಠಣಟ’ ಗಳು ಅಲ್ಲಿನ ಭಾರತೀಯರನ್ನು ತಮ್ಮತ್ತ ಸೆಳೆದು, ಮತದ ಹೆಸರಿನಲ್ಲಿ ಅವರಿಂದ ಹಣಕಾಸಿನ ನೆರವು ಪಡೆಯುತ್ತಿತ್ತು. ಹಾಗೆ ಪಡೆದ ಆ ಹಣವನ್ನು ಗೋಲ್ಡ್ ಆಗಿ ಪರಿವರ್ತಿಸಿ ಆ ಚಿನ್ನವನ್ನು ವಾಮ ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತದೆ. ಮತ್ತೊಂದಿಷ್ಟು ರಾಷ್ಟ್ರಗಳಲ್ಲಿ ಧಾರ್ಮಿಕ ಚಟುವಟಿಕೆಗಳ ಹೆಸರಿನಲ್ಲಿ ಸಂಗ್ರಹವಾದ ಹಣವನ್ನು ಇ-ವ್ಯಾಲೇಟ್ ಗಳ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗುತ್ತದೆ. ಒಮನ್, ಟರ್ಕಿ, ಕುವೈತ್, ಕತಾರ್, ಮಾರಿಸ್ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ದೇಶಗಳಲ್ಲಿ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಗಳು ಸೊಸಿಯಲ್ ಫೊರಮ್ ನ್ನು ಸ್ಥಾಪಿಸಿಕೊಂಡಿದ್ದಾರೆ. ಅದರಿಂದ ಸಂಗ್ರಹವಾದ ಹಣವನ್ನು ಭಾರತಕ್ಕೆ ತಂದು ಸಮಾಜ ಘಾತುಕ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಪಿ.ಎಫ್ ಐ ಮುಖಂಡ ‘ಶಫೀಕ್ ಪಾಯತ್’ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಎನ್.ಐ.ಎ ಗೆ ಅವನ ಅಕೌಂಟ್ ಗಳ ಮೂಲಕ ಕತಾರ್ ಹಾಗೂ ಇನ್ನಿತರೆ ಅರಬ್ ರಾಷ್ಟ್ರಗಳಿಂದ 120 ಕೋಟಿ ಹಣ ಭಾರತಕ್ಕೆ ವರ್ಗಾವಣೆ ಆಗಿರುವ ವಿಷಯ ಪತ್ತೆ ಆಗಿತ್ತು.
ಪಿ.ಎಫ್.ಐ ನ ಹಿಂಸಾತ್ಮಕ ದುಶ್ ಕೃತ್ಯಗಳು
ಕಳೆದ ಹತ್ತಾರು ವರ್ಷಗಳಿಂದ ಪಿ.ಎಫ್.ಐ ಕರ್ನಾಟಕ, ಕೇರಳ, ತಮಿಳು ನಾಡು, ಮಹಾರಾಷ್ಟ್ರ ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹೀಗೆ ದೇಶದ ಅನೇಕ ಕಡೆಗಳಲ್ಲಿ ಹಿಂಸಾಚಾರ, ಅಪರಾಧ, ಕಾನೂನು ಬಾಹಿರ ಚಟುವಟಿಕೆಗಳು, ಮತ್ತು ಭಯೋತ್ಪಾದನೆಯಂತಹ ವಿಧ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಧಾರ್ಮಿಕ ಗುಂಪುಗಳಲ್ಲಿನ ಶಾಂತಿ, ಸೌಹಾರ್ದತೆಯನ್ನು ಹಾಳು ಮಾಡಿದ್ದರು. ತಮಿಳುನಾಡಿನ ರಾಮನಾಥ ಪುರಂ ಜಿಲ್ಲೆಯ ಎಸ್.ಡಿ.ಪಿ.ಐ ಅಧ್ಯಕ್ಷನಿಂದ ಸಮುದ್ರಮಾರ್ಗಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುವ ಸಾಧನಗಳಾದ ವಾಯರ್ ಲೆಸ್, ಮುಂತಾದವುಗಳನ್ನು ವಶಪಡಿಸಿಕೊಂಡಿದ್ದರು. 2010ರ ಸಂದರ್ಭದಲ್ಲಿ ಪ್ರವಾದಿಯನ್ನು ನಿಂದಿಸಿದ್ದ ಆರೋಪದ ಮೇಲೆ ಕೇರಳದ ಪ್ರೊಫೆಸರ್ ಟಿ.ಜೆ ಜೋಷೆಪ್ ಅವರ ಕೈ ಕತ್ತರಿಸಿದ್ದರು, ಆರೆಸ್ಸೆಸ್ ಕಾರ್ಯಕರ್ತ ಸಂಜೀತ್ ಕೊಲೆ ಸೇರಿದಂತೆ ಕೇರಳ ಒಂದರಲ್ಲೇ 2010 ರಿಂದ 2021ರ ಅವಧಿಯಲ್ಲಿ 31ಕ್ಕೂ ಹೆಚ್ಚು ರಾಜಕೀಯ ಕೊಲೆಗಳು ನಡೆದು 86ಕ್ಕೂ ಹೆಚ್ಚು ಕೊಲೆ ಪ್ರಯತ್ನದ ಪ್ರಕರಣದಲ್ಲಿ ಹಾಗೂ 2016 ದೆಹಲಿಯ ಶಾಹಿನ್ ಬಾಗ್‌ನಲ್ಲಿ ನಡೆದಿದ್ದ ಮಹಿಳೆಯರ ಪ್ರತಿಭಟನೆಯ ಹಿಂದೆಯೂ ಕೂಡಾ ಪಿ.ಎಫ್.ಐ ನವರದ್ದೇ ಪಾತ್ರವಿತ್ತು. ಇನ್ನು ಕರ್ನಾಟಕದಲ್ಲಿ 2015 ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ, ಶರತ್ ಮಡಿವಾಳ, ನವೀನ್ ಪೂಜಾರಿ, ಇತ್ತೀಚಿನ ಹರ್ಷಾ ಹತ್ಯೆಯ ಹಿಂದೆ ಪಿ.ಎಫ್.ಐ ನರರಾಕ್ಷಸರ ನೆರಳಿತ್ತು.
2019ರಲ್ಲಿ ಉತ್ತರ ಪ್ರದೇಶ ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ಪೌರತ್ವ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆಯ ಹೆಸರಿನಲ್ಲಿ ಪಿ.ಎಫ್.ಐ ಗಲಭೆ ಎಬ್ಬಿಸಿ ಹಿಂಸಾಚಾರ ನಡೆಸಿತ್ತು. 2020ರ ಸಂದರ್ಭದಲ್ಲಂತೂ ರಾಜ್ಯವನ್ನು ಬೆಚ್ಚಿಬಿಳಿಸಿದ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟಿರುವುದಲ್ಲದೆ, ಸಂಭ್ರಮದ ರಾಮನವಮಿಯ ಹೊತ್ತಲ್ಲಿ ಎಂಟಕ್ಕೂ ಅಧಿಕ ರಾಜ್ಯದಲ್ಲಿ ನಡೆದ ಹಿಂಸಾಚಾರ ಸೆರಿದಂತೆ ಸಾಲು ಸಾಲು ಗಲಭೆಗಳಿಗೆ ಈ ಪಿ.ಎಫ್.ಐ ದ್ರೋಹಿಗಳೇ ಕಾರಣರಾಗಿದ್ದರು.
ಲೌ ಜಿಹಾದ್ ಹಿಂದೆ ಕೂಡಾ ಇವರದ್ದೇ ಕೈವಾಡವಿದೆ. ಮುಸ್ಲಿಂ ಯುವಕರಿಗೆ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ಹಿಂದೂ ಯುವತಿಯರನ್ನು ಮೋಸದ ಜಾಲಕ್ಕೆ ಕೆಡವಿ ಅವರನ್ನು ಮದುವೆಯ ಹೆಸರಿನಲ್ಲಿ ಮತಾಂತರಿಸುವ ಕೆಲಸಕ್ಕೆ ಬೇಕಾದ ಹಣಕಾಸಿನ ನೆರವನ್ನು ಪಿ.ಎಫ್.ಐ ಮಾಡುತ್ತ ಬಂದಿದೆ. ಕೇರಳದಲ್ಲಿ ಹೀಗೆ ಮತಾಂತರಗೊಂಡ ಯುವತಿಯರು ಸಿರಿಯಾ, ಸೌದಿ ಅರೇಬಿಯಾ, ಅಫ್ಘಾನಿಸ್ತಾನ ಮುಂತಾದ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದಾರೆ.
ಹಿಂದೆ ಬ್ಯಾನ್ ಆದ ಸಂಘಟನೆಗಳ ಕರಾಳ ಮುಖ
ಈ ಹಿಂದೆ ಸಾಕಷ್ಟು ಸಮಾಜ ಘಾತುಕ ಸಂಘಟನೆಗಳ ಮೇಲೆ ಈ ರೀತಿ ಬ್ಯಾನ್ ಅಸ್ತ್ರಗಳನ್ನು ಪ್ರಯೋಗಿಸಿದ್ದರು. ಖಲಿಸ್ತಾನ್ ಹೋರಾಟಕ್ಕೆ ಸ್ಥಾಪಿಸಲಾಗಿದ್ದ ‘ಟಿಣಜಡಿಟಿಚಿಣಠಚಿಟ ಞಞ ಥಿಠಣ ಜಿಜಜಜಡಿಚಿಣಠ’, ’ಞಚಿಟಣಚಿಟಿ ದಟಿಜಚಿಛಚಿಜ ಜಿಠಛಿಜ’, ‘ಞಚಿಟಣಚಿಟಿ ಛಿಠಟಚಿಟಿಜಠ ಜಿಠಛಿಜ’, ಈ ಎಲ್ಲಾ ಸಂಘಟನೆಗಳು ಖಲಿಸ್ತಾನ್ ಚಳುವಳಿಗೋಸ್ಕರ ಹೋರಾಟದ ನೆಪದಲ್ಲಿ ವಿದ್ರೋಹಕ ಕೃತ್ಯಗಳನ್ನು ಎಸಗುತ್ತಿದ್ದವು. ಹಾಗಾಗಿ ಇವುಗಳನ್ನು ಬ್ಯಾನ್ ಮಾಡಲಾಗಿತ್ತು. ಅದೇ ರೀತಿ ‘ಣಟಿಣಜಜ ಟಛಜಡಿಚಿಣಠ ಜಿಡಿಠಣ ಠ ಛಿಠ ಣಟಜಿಚಿ’ ಚಟುವಟಿಕೆಗಳಲ್ಲಿ ತೊಡಗಿ ಸಶಸ್ತ್ರ ಹೋರಾಟದ ಮೂಲಕ ದೇಶದ ಆಂತರಿಕ ಭದ್ರತೆಗೆ ದಕ್ಕೆಯನ್ನುಂಟು ಮಾಡಿತ್ತು. ಆದ್ದರಿಂದ ಈ ಸಂಘಟನೆಯನ್ನು ನಿಷೇಧ ಮಾಡಲಾಗಿತ್ತು.
ದಕ್ಷಿಣ ಭಾರತದಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ, ಕರ್ನಾಟಕ ಹಾಗೂ ಆಂದ್ರ್ರದೇಶದಲ್ಲಿ ’ದೀನ್ ದಾರ್ ಅಂಜುಮನ್ ಚನ್ನಬಸವೇಶ್ವರ ಸಿದ್ದಕಿ’ ಎನ್ನುವ ಸಂಘಟನೆ ಹುಟ್ಟಿತ್ತು. ಇಂದು ಪಿ.ಎಫ್.ಐ ಹೇಗೆ ದಲಿತ - ಮುಸ್ಲಿಂ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ದಲಿತರನ್ನು ಮುಂದಿಟ್ಟುಕೊಂಡು ಹೊರಟಿತ್ತೊ, ಹಾಗೆಯೇ ಅವತ್ತು ಈ ’ದೀನ್ ದಾರ್ ಅಂಜುಮನ್ ಚನ್ನಬಸವೇಶ್ವರ ಸಿದ್ದಕಿ’ ಅನ್ನೊ ಸಂಘಟನೆ ’ಇಸ್ಲಾಂ ಮತ್ತು ಲಿಂಗಾಯತ’ ಅನ್ನೊ ಕಾನ್ಸೆಪ್ಟ್ ಇಟ್ಟುಕೊಂಡಿತ್ತು. ಆರಂಭಿಕ ದಿನಗಳಲ್ಲಿ ಸಾಕಷ್ಟು ಪ್ರವಚನಗಳ ಮೂಲಕ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಜನರ ವಿಶ್ವಾಸ ಗಳಿಸುವ ಪ್ರಯತ್ನವನ್ನು ಮಾಡುತ್ತ ಸಾಮರಸ್ಯದ ಮಾತುಗಳನ್ನು ಆಡುತ್ತಿತ್ತು. ಕೆಲವು ತಿಂಗಳಲ್ಲಿ ಅದು ತನ್ನ ನೈಜ ರೂಪವನ್ನು ಪ್ರದರ್ಶಿಸಿಯೇ ಬಿಟ್ಟಿತ್ತು. ಬೆಂಗಳೂರಿನ ಪಾದರಾಯನಪೂರ ಹಾಗೂ ವಾಡಿ ಜಂಕ್ಷನ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ತನಿಖಾ ಏಜನ್ಸಿಗಳಿಗೆ ಈ ಕೃತ್ಯದ ಹಿಂದೆ, ’ದೀನ್ ದಾರ್ ಅಂಜುಮನ್ ಚನ್ನಬಸವೇಶ್ವರ ಸಿದ್ದಕಿ’ ಸಂಘಟನೆ ಕೈವಾಡ ಇರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆಗ ಆ ಸಂಘಟನೆಯನ್ನು ಬ್ಯಾನ್ ಮಾಡಲಾಯಿತು. ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ‘ಕಜಠಟಜ ತಿಚಿಡಿ ರಡಿಠಠಿ’ ಅನ್ನೋ ನಕ್ಸಲ್ ಸಂಘಟನೆಯ ಮೇಲೂ ಕೂಡಾ ನಿಷೇಧ ಹೇರಲಾಗಿತ್ತು. ರಾಜೀವ್ ಗಾಂಧಿಯ ಹತ್ಯೆಯ ನಂತರ ಎಲ್.ಟಿ.ಟಿ.ಎಫ್ ಉಗ್ರ ಸಂಘಟನೆ ಅಂತ ಪರಿಗಣಿಸಿ ಭಾರತ ಸರಕಾರ ಇದರ ಮೇಲೆ ನಿಷೇಧ ಹೇರಿತ್ತು. ಭಾರತದಲ್ಲಿ ಈ ರೀತಿಯ ಒಟ್ಟು 39 ಸಂಘಟನೆಗಳನ್ನು ನಿಷೇಧಿಸಲಾಗಿತ್ತು. ಇದೀಗ ಆ ಪಟ್ಟಿಯಲ್ಲಿ ಪಿ.ಎಫ್.ಐ ಕೂಡಾ ಸೇರಿಕೊಂಡಿದೆ. ಸಧ್ಯಕ್ಕೆ, ಇಡೀ ದೇಶಾದ್ಯಂತ ಪಿ.ಎಫ್.ಐ ಮುಖಂಡರನ್ನು ಬಂಧಿಸಿ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಅವರ ಕಛೇರಿಗಳನ್ನೆಲ್ಲ ಸೀಜ್ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ, ಮುಸ್ಲಿಮರನ್ನು ಧಮನ ಮಾಡುವ ಪ್ರಯತ್ನ ಅಂತ ಪಿ.ಎಫ್.ಐ ಪ್ರೇರಿತ ರಾಜಕೀಯ ಸಂಘಟನೆ ಎಸ್.ಡಿ.ಪಿ.ಐ ಆರೋಪಿಸುತ್ತಿದೆ.
ಇದನ್ನು ರಾಜಕೀಯ ಲೆಕ್ಕಾಚಾರಗೊಳಿಸುವ ಪ್ರಯತ್ನಗಳಾದರೆ:- ಸಧ್ಯಕ್ಕೆ ಕೇಂದ್ರದಲ್ಲಿ ಯಾವ ಚುನಾವಣೆಗಳು ಇಲ್ಲ. ಕರ್ನಾಟಕ ಸೇರಿದಂತೆ ಒಂದಿಷ್ಟು ರಾಜ್ಯದ ಚುನಾವಣೆಗಳಿಗೆ ಕೆಲವೇ ತಿಂಗಳು ಬಾಕಿ ಇದೆ. ಒಂದು ವೇಳೆ ಪಿ.ಎಫ್.ಐ ಬ್ಯಾನ್ ಆಗಿರುವುದನ್ನು ರಾಜಕೀಯ ಗೊಳಿಸುವ ಪ್ರಯತ್ನವೇನಾದರೂ ನಡೆದರೆ ಅದರ ಲಾಭ ಬಿಜೆಪಿಗೆ ಆಗುತ್ತದೆ. ಇದೀಗ ಪಿ.ಎಫ್.ಐ ಬ್ಯಾನ್ ವಿರುದ್ದ ಕಾಂಗ್ರೆಸ್ ಏನನ್ನೂ ಮಾತನಾಡುವುದಿಲ್ಲ. ಯಾಕೆಂದರೆ ಪಿ.ಎಫ್.ಐ ಸಂಘಟನೆಯ ಕರಾಳ ಮುಖ ಅವರಿಗೆ ಗೊತ್ತಿದ್ದೆ ಇದೆ. ಈ ಹಿಂದೆ ರಾಹುಲ್ ಗಾಂಧಿ ಮತ್ತು ಇನ್ನುಳಿದ ಕಾಂಗ್ರೆಸ್ ಮುಖಂಡರು, ಮತೀಯವಾದದ ವಿಷ ಬೀಜ ಬಿತ್ತುವ ಸಂಘಟನೆಗಳನ್ನು ಮಟ್ಟಹಾಕಬೇಕು ಅಂತ ನೇರವಾಗಿಯೇ ಗುಡುಗಿದ್ದ ಉದಾಹರಣೆ ನಮ್ಮ ಕಣ್ಮುಂದೆ ಇದೆ. ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ ಹಾಗೂ ಅಖಂಡ ಶ್ರೀನಿವಾಸ ಮೂರ್ತಿಯ ಮೇಲೆ ನಡೆದ ದಾಳಿಯ ಹಿಂದೆ ಪಿ.ಎಫ್.ಐ ಸಂಚಿರುವುದು ಕೂಡಾ ಕಾಂಗ್ರೆಸ್ ನವರಿಗೆ ಗೊತ್ತಿದೆ, ಹಾಗಾಗಿ ಅವರು ಇದನ್ನು ವಿರೋಧಿಸುವ ಗೋಜಿಗೆ ಹೋಗುವುದಿಲ್ಲ. ಇನ್ನು ಜೆ.ಡಿ.ಎಸ್ ಕೂಡಾ ಸಮಾಜದ ಸಾಮರಸ್ಯ ಹಾಳುಮಾಡುವವರನ್ನು ಯಾವತ್ತಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ವಿರುದ್ದ ಮುಸ್ಲಿಮ್ ಮತದಾರರನ್ನು ಎತ್ತಿಕಟ್ಟಿ ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಒಂದಿಷ್ಟು ಮುಸ್ಲಿಂ ಮತಗಳನ್ನು ಒಡೆದರೆ ಅದರ ಲಾಭ ನೇರವಾಗಿ ಬಿ.ಜೆ.ಪಿಯವರಿಗೇ ಆಗುತ್ತದೆ. ‘ಪೇ ಸಿಎಮ್’ ಅಭಿಯಾನದ ಮೂಲಕ ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದು ಬಿಜೆಪಿಯ ವಿರುದ್ದ ಜನಾಭಿಪ್ರಾಯ ಮೂಡಿಸಲು ಹೊರಟಿದ್ದ ಕಾಂಗ್ರೆಸ್ ಪ್ರಯತ್ನಗಳು ವಿಫಲ ಆಗಿಸಲು ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರೊಂದಿಗೆ ಮುಸ್ಲಿಮರ ಮತಗಳನ್ನು ದೃವಿಕರಿಸುವ ಕೆಲಸ ಮಾಡಬಹುದು. ಹೀಗಾಗಿ ಇದೀಗ ಮುಸ್ಲಿಂ ಮುಖಂಡರು ಮತ್ತು ಅಲ್ಲಿನ ಬುದ್ದಿವಂತರು ಹೇಗೆಲ್ಲ ವರ್ತಿಸುತ್ತಾರೆ, ಮತ್ತು ಎಸ್.ಡಿ.ಪಿ.ಐ ನ ರಾಜಕೀಯ ಆಕಾಂಕ್ಷಿಗಳ ಪರಿಸ್ಥಿತಿ ಏನಾಗಬಹುದೆಂಬುದನ್ನು ಕಾದು ನೋಡಬೇಕಿದೆ.
ವಾಸ್ತವವಾಗಿ ಆಗಬೇಕಿರುವುದು, ಭಾರತದಲ್ಲಿ ಅನೇಕ ಮುಸಲ್ಮಾನರು ಇಂದಿಗೂ ಈ ದೇಶದಲ್ಲಿ ಸಾಕಷ್ಟು ಬಡತನದಲ್ಲಿದ್ದಾರೆ. ಅವರಿಗಿರುವ ಆಹಾರ ಕೊರತೆಯನ್ನು ನಿಗಿಸಿ, ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಇಸ್ಲಾಮಿಕ್ ಸಂಘಟನೆಗಳು ಕೆಲಸ ಮಾಡಿದ್ದರೆ ಬಡ ಮುಸ್ಲಿಮರ ಬದುಕು ಬಂಗಾರವಾಗುತ್ತಿತ್ತು. ಹಾಗೆ ಮಾಡದೆ, ಬಡ ಮುಸ್ಲಿಂ ಯುವಕರಿಗೆ ಹಣದ ಆಮಿಸೆ ತೋರಿಸಿ ಅವರ ತಲೆಯಲ್ಲಿ ಧರ್ಮದ ಅಫೀಮು ತುಂಬಿ ಅವರಿಂದ ವಿದ್ರೋಹಕ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ. ಇದಕ್ಕೆಲ್ಲ ಇತಿಶ್ರಿ ಹಾಡಬೇಕಿದ್ದವರು ಮುಸ್ಲಿಂ ಸಮುದಾಯದಲ್ಲಿರುವ ಸಾಕಷ್ಟು ದೇಶಭಕ್ತ ಬಂಧುಗಳು. ಅವರಿಗೆ ಬದುಕಿನ ಅರಿವನ್ನು ಮೂಡಿಸಿ ಧರ್ಮಕ್ಕಿಂತ ದೇಶ ದೊಡ್ಡದೆಂಬ ಭಾವನೆಯನ್ನು ಮೂಡಿಸಿ, ಅವರಲ್ಲಿ ಬದಲಾವಣೆಗಳನ್ನು ತರುವ ಪ್ರಯತ್ನಗಳನ್ನು ಮಾಡಲೆಂದು ಆಶಿಸೋಣ.
- * * * -