ಬಾಗಲಕೋಟೆ, ಜ. 6 ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸಂವಾದ ನಡೆಸಲು ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಶಾಲೆಯ ಬಾಲೆಯೊಬ್ಬಳು ಆಯ್ಕೆಗೊಂಡಿದ್ದಾಳೆ.
ಜಿಲ್ಲೆಯ ಇಳಕಲ್ ತಾಲೂಕಿನ ಜಂಬಲದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಪ್ರಧಾನಿಯೊಂದಿಗೆ ಸಂವಾದಕ್ಕೆ ಆಯ್ಕೆಯಾದ ಬಾಲಕಿ.
ಬಾಲಕಿಗೆ ಇದೇ ಜ.20ರಂದು ದೆಹಲಿಯಲ್ಲಿ ನಡೆಯಲಿರುವ ಪರೀಕ್ಷಾಪೇ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ.
ಈಕೆ ಆನ್ಲೈನ್ನಲ್ಲಿ ಎಗ್ಸಾಮಿಂಗ್ ಎಗ್ಸಾಂ ವಿಷಯದ ಬಗ್ಗೆ ಪ್ರಬಂಧ ಬರೆದಿದ್ದಳು. ಈಕೆಯ ಪ್ರಬಂಧ ಆಯ್ಕೆಯಾಗಿದ್ದರಿಂದ ಈ ಬಾಲಕಿಗೆ ಜನವರಿ 16 ರಂದು ವರದಿ ಮಾಡಿಕೊಳ್ಳುವಂತೆ ಕರ್ನಾಟಕ ಸಮಗ್ರ ಶಿಕ್ಷಣ ಕಾರ್ಯಕ್ರಮ ಅಧಿಕಾರಿಯಿಂದ ಮಾಹಿತಿ ಬಂದಿದ್ದು, ಬಾಲಕಿ ಬಗ್ಗೆ ಇ-ಮೇಲ್ ಮೂಲಕ ಮಾಹಿತಿ ಕಳುಹಿಸುವಂತೆ ಶಾಲೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಜೊತೆ ಗ್ರಾಮೀಣ ಬಾಲಕಿ ಪೂಣರ್ಿಮಾ ಭಾಗವಹಿಸುತ್ತಿರುವುದಕ್ಕೆ ಶಾಲೆಯ ಶಿಕ್ಷಕ ವೃಂದ್ಧ, ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.