ಲೋಕದರ್ಶನ ವರದಿ
ವಿಜಯಪುರ 25: ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮುಖ್ಯಂಮತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಜಯಪುರ ತಾಲೂಕಿನ ಕಗ್ಗೋಡದ ಶ್ರೀ ರಾಮನಗೌಡ ಬಾಪುಗೌಡ ಪಾಟೀಲ (ಯತ್ನಾಳ್ ) ಗೋರಕ್ಷಾ ಕೇಂದ್ರದ ಆವರಣದಲ್ಲಿ ಭಾರತ ವಿಕಾಸ ಸಂಗಮ ಶ್ರೀ ಸಿದ್ದೇಶ್ವರ ಸಂಸ್ಥೆ ವಿಜಯಪುರ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಭಾರತೀಯ ಸಂಸ್ಕೃತಿ ಉತ್ಸವದ ಮಾತೃ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ಸಂಸ್ಕೃತಿಯನ್ನು ನಮ್ಮ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಬರುವ ಯೋಗಾಭ್ಯಾಸ ವಿಶ್ವದಾದ್ಯಂತ ನಮ್ಮ ಸಂಸ್ಕೃತಿಯನ್ನು ಪಸರಿಸಿದೆ. ಹಿರಿಯರು ಹಾಕಿ ಕೊಟ್ಟ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಕ ಉತ್ಸವಗಳು ನಿತ್ಯವೂ ನಡೆಯುತ್ತಿರಬೇಕು. ನಮ್ಮ ಪೂರ್ವಜರು ಸಂಸ್ಕೃತಿಯ ಉಳಿವಿಗೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಗೋ ಪೂಜೆಯೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ನಮ್ಮ ಸಂಸ್ಕೃತಿಯ ಪ್ರತೀಕವಾದ ಗೋವುಗಳ ರಕ್ಷಣೆಯೂ ಆಗಬೇಕಿದೆ. ಗೋರಕ್ಷಣೆ ಮಾಡುವುದು ನಮ್ಮ ಜವಾಬ್ದಾಬ್ದಾರಿಯಾಗಬೇಕು ಎಂದು ಸಲಹೆ ನೀಡಿದ ಅವರು ಕಗ್ಗೋಡದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಗೋ ರಕ್ಷಣೆ ಮಾಡುತ್ತಿರುವ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದರು.
ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡಿ, ನಾವು ಜಗತ್ತಿಗೆ ಜ್ಯೋತಿಯಾಗಿ ಬೆಳಗಬೇಕಾದರೆ ತಾಯಿಯ ಪಾತ್ರ ಬಹುಮುಖ್ಯ. ತಾಯಿಯ ಪ್ರೋತ್ಸಾಹ, ಮಾರ್ಗದರ್ಶನದಿಂದಲೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ತಾಯಂದಿರು ಈ ದೇಶಕ್ಕೆ ಉತ್ಕೃಷ್ಟ ಮಕ್ಕಳನ್ನು ಕೊಡಬೇಕು.
ಕಾರ್ಯಕ್ರಮದಲ್ಲಿಪ್ರಜಾಪಿತ ಬ್ರಹ್ಮಕುಮಾರಿಈಶ್ವರಿಯ ವಿಶ್ವವಿದ್ಯಾಲಯದರಾಜಯೋಗಿನಿ ಬಿ. ಕೆ ಉಷಾಜಿ ಮಾತನಾಡಿ, ಎಲ್ಲಿ ತಾಯಿಗೆ ಗೌರವವಿದೆಯೋಅಲ್ಲಿ ಜಗತ್ತಿನ ಒಡೆಯ ಮಗುವಾಗಿ ತಾಯಿಯ ಮಡಿಲಲ್ಲಿ ನಿವಾಸವಾಗುತ್ತಾನೆ. ಭಾರತದ ಪ್ರತಿ ಮಗುವೂ ಸುರಕ್ಷವಾಗಿರಬೇಕಾದರೆ ಉತ್ತಮ ಜ್ಞಾನ ಮತ್ತು ಸಂಸ್ಕೃತಿಯನ್ನುತಾಯಿ ಮಗುವಲ್ಲಿ ಮೂಡಿಸಿ, ಆತ್ಮವಿಶ್ವಾಸ ತುಂಬಬೇಕು ಎಂದರು.
ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಜಿ, ಸುತ್ತೂರಿನ ಜಗದ್ಗುರು ವೀರ ಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಸ್ವಾಮಿ ವಿವೇಕಾನಂದ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಭಾರತ ವಿಕಾಸ ಸಂಗಮ ಸಂಸ್ಥಾಪಕ ಕೆ. ಎನ್ ಗೋವಿಂದಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಭಾರತ ವಿಕಾಸ ಸಂಗಮ ಸಂರಕ್ಷಕ ಬಸವರಾಜ ಪಾಟೀಲ ಸೇಡಮ್, ಶಾಸಕ ವೀರಣ್ಣ ಚರಂತಿಮಠ, ಡಾ. ನೀರಜ್ ಪಾಟೀಲ ಮುಂತಾದ ಗಣ್ಯರು ವೇದಿಕೆ ಮೇಲಿದ್ದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ(ಯತ್ನಾಳ್) ಸ್ವಾಗತಿಸಿದರ