ನವದೆಹಲಿ, ದೇಶದ ಶಾಸನ ಸಭೆಗಳಲ್ಲಿ ಅಡಚಣೆ ರಹಿತ ಕಲಾಪ ಖಾತರಿ ಪಡಿಸಲು ನೀತಿ ಸಂಹಿತೆಯೊಂದನ್ನು ರೂಪಿಸಬೇಕು ಎಂಬುದು ಎಲ್ಲ ರಾಜ್ಯ ವಿಧಾನಸಭೆ ಸ್ಪೀಕರ್ ಗಳ ಏಕಾಭಿಪ್ರಾಯವಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ ತಿಳಿಸಿದ್ದಾರೆ.
ದೇಶದ ಶಾಸನ ಸಭೆಗಳ ಪೀಠಾಸೀನ ಅಧಿಕಾರಿಗಳ ಸಮಾರೋಪ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಶಾಸನ ಸಭೆಗಳಲ್ಲಿ ರಚನಾತ್ಮಕ ಚರ್ಚೆಗಳು ನಡೆಯಬೇಕು ಎಂಬುದು ಎಲ್ಲ ಸ್ಪೀಕರ್ ಗಳು ಹಾಗೂ ಪೀಠಾಸೀನ ಅಧಿಕಾರಗಳ ಒಮ್ಮತಾಭಿಪ್ರಾಯವಾಗಿದೆ ಎಂದರು.
ವಿಧಾನಸಭೆಗಳಲ್ಲಿ ಕಲಾಪ ಅಡ್ಡಿಯನ್ನು ತಡೆಯುವಂತಹ ಮಾದರಿ ನೀತಿ ಸಂಹಿತೆ ರಚಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಓಂ ಬಿರ್ಲಾ ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ 30 ವಿಧಾನಸಭೆಗಳ ಪೀಠಾಸೀನ
ಅಧಿಕಾರಿಗಳು ಪಾಲ್ಗೊಂಡಿದ್ದರು
ಸಭೆಯಲ್ಲಿ, ವಿಧಾನಸಭೆ ಅಧಿವೇಶನಗಳಲ್ಲಿ ಸಮಯದ ಸದುಪಯೋಗ ಹಾಗೂ ಮಿತ ವ್ಯಯ ಕುರಿತು ಚರ್ಚೆ ನಡೆಸಲಾಯಿತು. ಬರುವ ನವೆಂಬರ್ ತಿಂಗಳಲ್ಲಿ ಡೆಹ್ರಾಡೂನ್ ನಲ್ಲಿ ನಡೆಯಲಿರುವ ಶಾಸನಸಭೆಗಳ ಪೀಠಾಸೀನ ಅಧಿಕಾರಿಗಳ ಸಭೆಯಲ್ಲಿ ಈ ಪ್ರಸ್ತಾವನೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಓಂ ಬಿರ್ಲಾ ಹೇಳಿದರು.