ರಾಷ್ಟ್ರೀಯ ಸಂಚಾರಿ ಅರಿವು ಮಾಹೆ ನಿಮಿತ್ತ ಅಣಕು ಪ್ರದರ್ಶನ
ಬಳ್ಳಾರಿ 20: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ ಮತ್ತು ಪೊಲೀಸ್ ಇಲಾಖೆ, ಬಳ್ಳಾರಿ ಇವರ ವತಿಯಿಂದ ದಿನಾಂಕ:20.12.2024 ರಂದು “ರಾಷ್ಟ್ರೀಯ ಸಂಚಾರಿ ಅರಿವು ಮಾಹೆ” ಅಂಗವಾಗಿ “ಸೋಶಿಯಲ್ ಎಮರ್ಜೆನ್ಸಿ ರೆಸ್ಪಾನ್ಸ್ ವಾಲಂಟಿಯರ್ಸ” ಇವರಿಂದ ರಸ್ತೆ ಅಪಘಾತಗಳ ಬಗ್ಗೆ “ಅಣಕು ಪ್ರದರ್ಶನ” (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತು.
ಬೆಳಿಗ್ಗೆ 10.00 ಗಂಟೆಗೆ ಶ್ರೀ.ಕನಕ ದುರುಗಮ್ಮ ಗುಡಿ ವೃತ್ತದಲ್ಲಿ ರಸ್ತೆ ಅಪಘಾತ ಬಗ್ಗೆ ಅಣಕು ಪ್ರದರ್ಶನ (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತು. ವಿಶ್ವದಲ್ಲಿ ಪ್ರತಿ ವರ್ಷ 1.50 ಲಕ್ಷ ಜನರು ರಸ್ತೆ ಅಪಘಾತದಿಂದ ಅವರ ಅಮೂಲ್ಯವಾದ ಜೀವವನ್ನು ಕಳೆದುಕೋಡ್ಡುತ್ತಿದ್ದಾರೆ. ಅಂದರೆ ಪ್ರತಿದಿನ ಸುಮಾರು 410 ಜನ ಅಪಘಾತದಿಂದ ಸಾಯುತ್ತಿದ್ದಾರೆ. ಇಂತಹ ಅಪಘಾತಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅಣಕು ಪ್ರದರ್ಶನವನ್ನು ನಡೆಸಲಾಯಿತು. ಈ ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿ ಅಪಘಾತ ಆದನಂತರ ಗಾಯಾಳುಗೆ ಆಸ್ಪತ್ರೆ ಕಳುಹಿಸುವ ಮುಂಚಿತವಾಗಿ ಅಪಘಾತ ಆದಾ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೇಗೆ ಜೀವರಕ್ಷಣೆ ಮಾಡಿ ಮತ್ತು ಆಂಬುಲೆಂನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸುವುದರ ಮೂಲಕ “ಸರ್ವ್” ತಂಡದವರು ಅಣಕು ಪ್ರದರ್ಶನವನ್ನು ನೀಡಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ .ಬಿ.ಎಸ್.ಲೊಕೇಶ್ ಕುಮಾರ್, ಭಾ.ಪೊ.ಸೇ. ಮಾನ್ಯ ಪೊಲೀಸ್ ಮಹಾ ನೀರೀಕ್ಷಕರು, ಬಳ್ಳಾರಿ ವಲಯ, ಬಳ್ಳಾರಿ ಡಾ..ಶೋಭಾ ರಾಣಿ ವಿ.ಜೆ, ಭಾ.ಪೋ.ಸೇ, ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ ಇವರು ಚಾಲನೆ ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ.ಎಂ.ಎ.ಷಕೀಬ್, ಇವರ ನೇತೃತ್ವದಲ್ಲಿ ಸರ್ವ್ ತಂಡದ.ಬಿ.ದೇವಣ್ಣ, ಜಂಟಿ ಕಾರ್ಯದರ್ಶಿ, ರೆಡ್ ಕ್ರಾಸ್ ಸಂಸ್ಥೆ ಮತ್ತು ಉಮಾಮಹೇಶ್ವರಿ,.ವಾಸು.ಪಿ.,.ನಿಸಾರ ಅಹಮದ್.ಎಂ.ಐ.,.ಮಹಬೂಬ್ ಬಾಷಾ,.ದಿವಾಕರ್,.ಮಹಮ್ಮದ್ ರಫಿ,.ಸಮೀರ್ ಸೇಟ್, ತಹೆರ ಸೇಟ್,.ಶಿವ ಸಾಗರ್,.ಬಜರಂಗ್ ಶರ್ಮ,.ಮಹಮ್ಮದ್ ಅಲಿ,.ಎಂ.ವಲಿ ಬಾಷಾ, ಮತ್ತು ಅನೇಕ ಸರ್ವ್ ತಂಡದವರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರದ ಸುಮಾರು 500 ಜನ ವಿಧ್ಯಾರ್ಥಿಗಳು ಭಾಗವಹಿಸಿರು.