ಬಾಗಲಕೋಟೆ೧೯: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸದೃಡ ಭಾರತಕ್ಕಾಗಿ ಫಿಟ್ ಇಂಡಿಯಾ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಬಿವಿವ ಸಂಘದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಸಜ್ಜನ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಗರದ ಬಿವಿವ ಸಂಘದ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ದೈಹಿಕವಾಗಿ ಸದೃಡವಾಗಿಸುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಹ ಮತ್ತು ಮನಸ್ಸನ್ನು ಸದೃಡವಾಗಿರಲು ನಾವೇಲ್ಲರೂ ಪ್ರತಿಜ್ಞೆ ಮಾಡಬೇಕು. ದೇಶದ ಅಭಿವೃದ್ದಿಯಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರು ಪಾಲುದಾರರಾಗಬೇಕೆಂದು ತಿಳಿಸಿದರು.
ಸೈಕಲ್ ಜಾಥಾ ಬಿವಿವಿ ಸಂಘದ ಮುಂಭಾಗ ಬೀಳೂರು ಅಜ್ಜನ ಗುಡಿಯಿಂದ ಬಸವೇಶ್ವರ ವೃತ್ತ, ಮಾಕರ್ೇಟ, ಅಂಬೇಡ್ಕರ ವೃತ್ತ, ಕಲಾದಗಿ ರಸ್ತೆ ಮಾರ್ಗವಾಗಿ ಮರಳಿ ಬೀಳೂರು ಅಜ್ಜನ ಗುಡಿಗೆ ಮುಕ್ತಾಯಗೊಂಡಿತು. ಸುಮಾರು 5 ಕೀ.ಮೀ ವರೆಗೆ ನಡೆದ ಈ ಸೈಕಲ್ ಜಾಥಾದಲ್ಲಿ ಸೈಕ್ಲಿಂಗ್ ವಿದ್ಯಾರ್ಥಿ ಗಳು, ಯುವಕರು ಸೇರಿ ಒಟ್ಟು 150 ಜನ ಪಾಲ್ಗೊಂಡಿದ್ದರು. ನಗರದ ಮುಖ್ಯ ರಸ್ತೆಗಳಲ್ಲಿ ಘೋಷಣೆಯ ಫಲಕಗಳನ್ನು ಪ್ರದರ್ಶಸುತ್ತಾ ಘೋಷಣೆಗಳನ್ನು ಕೂಗಿದರು.
ಜಾಥಾದಲ್ಲಿ ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಶರಣು ನಾವಲಗಿ, ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವಿ.ಎಸ್.ಕಟಗಿಹಳ್ಳಿ, ನೆಹರು ಯುವ ಕೇಂದ್ರದ ಆಯ್ಕೆ ಸಮಿತಿ ಸದಸ್ಯ ನಬಿ ನದಾಫ್, ಲೆಕ್ಕಾಧಿಕಾರಿ ರಾಮರಾವ ಬಿರಾದ್ದಾರ ಸೇರಿದಂತೆ ವಿವಿಧ ಕಾಲೇಜು ಪ್ರಾಂಶುಪಾಲರು, ದೈಹಿಕ ನಿದರ್ೇಶಕರು, ಶಾಲೆಯ ಮುಖ್ಯಗುರುಗಳು, ಅಕ್ಕಮಹಾದೇವಿ ಮಹಿಳಾ ಕಾಲೇಜು ಮುಖ್ಯಸ್ಥರು, ಎರಾಷ್ಟ್ರೀಯ ಯುವ ಕಾರ್ಯಕರ್ತರು ಪಾಲ್ಗೋಂಡಿದ್ದರು.