ಜಮ್ಮು, ಆ 18 ಜಮ್ಮುವಿನ ಐದು ಜಿಲ್ಲೆಗಳಲ್ಲಿ ಭಾನುವಾರ ಬೆಳಗ್ಗೆ ಮತ್ತೆ ಮೊಬೈಲ್ ಅಂತರ್ಜಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 4 ರಂದು ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಶುಕ್ರವಾರ ರಾತ್ರಿಯಷ್ಟೇ ಮತ್ತೆ ನೀಡಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಮತ್ತೆ ರದ್ದುಪಡಿಸಲಾಗಿದ್ದು ಪರಿಸ್ಥಿತಿ ಪರಾಮಶರ್ೆ ನಂತರವಷ್ಟೇ ಮತ್ತೆ ಸೇವೆ ಒದಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2 ಜಿ ವೇಗದ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಜಮ್ಮು ವಲಯದ ಐದು ಜಿಲ್ಲೆಗಳಿಗೆ ನೀಡಲಾಗಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನ ವಿಧಿ 370 ರದ್ದುಗೊಳಿಸುವ ಸರ್ಕಾರದ ಘೋಷಣೆಗೆ ಮುನ್ನ ಆಗಸ್ಟ್ 4 ರ ಮಧ್ಯರಾತ್ರಿಯಂದು ಮೊಬೈಲ್ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.