ಯುವಕರಲ್ಲಿ ಮೊಬೈಲ್ ಗೀಳು ದೂರವಾಗಲಿ: ಶಿವಶಂಕರ ಶ್ರೀ

ಲೋಕದರ್ಶನವರದಿ

ಗುಳೇದಗುಡ್ಡ: ಯುವಕರಲ್ಲಿ  ಮೊಬೈಲ್ ಗೀಳು ಹೆಚ್ಚಾಗಿದ್ದು ಅದರಿಂದ  ನಮ್ಮ ಸಂಸ್ಕೃತಿ, ಸಂಸ್ಕಾರ ಹಾಳಾಗುತ್ತಿದೆ. ಗುರು-ಹಿರಿಯರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ ಎಂದು ಹುಬ್ಬಳ್ಳಿ ವೀರಭಿಕ್ಷಾವತರ್ಿ ನೀಲಕಂಠಮಠ ಕುರುಹಿನಶೆಟ್ಟಿ ನೇಕಾರ ಗುರುಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

       ಅವರು ಪಟ್ಟಣದ ಕುರುಹಿನಶೆಟ್ಟಿ ನೀಲಕಂಠೇಶ್ವರ ದೇವಸ್ಥಾನ ಜೀಣರ್ೋದ್ಧಾರ ಟ್ರಸ್ಟ್ ಸಮಿತಿ ವತಿಯಿಂದ ಶ್ರೀ ನೀಲಕಂಠೇಶ್ವರ ದೇವಸ್ಥಾನ ಕಾರ್ತಿರ್ಕತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಹಾಸ್ಯ ಸಂಗೀತ ಸಿಂಚನ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿ, ಶಿಕ್ಷಣವಿಲ್ಲದೇ ಇಂದಿನ ಸಮಾಜದಲ್ಲಿ ಏನು ಇಲ್ಲ ಆದ್ದರಿಂದ  ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ  ಶಿಕ್ಷಣ ಕೊಡಿಸಬೇಕು. ಸಮಾಜ ಸಂಘಟನೆಗೆ ಪ್ರತಿಯೊಬ್ಬರು ಒಂದಾಗಬೇಕು. ಆಗಲೇ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

        ನಮ್ಮ ಸಮಾಜ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗಬೇಕಿದೆ. ನೇಕಾರಿಕೆ ವೃತ್ತಿಗೆ ಸರಕಾರದ ಅಗತ್ಯ ಸೌಲಭ್ಯ ಕೊಡಬೇಕು. 

  ನೇಕಾರಿಕೆಗೆ ಪ್ರೋತ್ಸಾಹ ಸಿಗದಿರುವದಕ್ಕೆ ಇಂದು ಆ ವೃತ್ತಿ ನಶಿಸುತ್ತಿದೆ. ದೇಶಕ್ಕೆ ರೈತ, ಸೈನಿಕ ಹೇಗೆ ಅವಶ್ಯವಿದೆ. ಹಾಗೇ ನೇಕಾರನು ಮುಖ್ಯವಾಗಿಬೇಕು. ಸರಕಾರ ನೇಕಾರಿಕಾ ವೃತ್ತಿಗೆ ಪೂರಕವಾದ ಹೊಸ ಯೋಜನೆಗಳನ್ನು ಜಾರಿಗೆ ತರಬೇಕೆಂದು ಹೇಳಿದರು 

     ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣ ನೀಡಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. 

  ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ನೇಕಾರರ ಬದುಕು ಬವಣೆಯ ಬಗ್ಗೆ ಮಾತನಾಡಿ, ನೇಕಾರರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಇಂದು ಕಷ್ಟ ಪಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

  ಸಂಜೆ ಸಹಸ್ರ ದೀಪೋತ್ಸವ, ಹಾಸ್ಯ ಕಲಾವಿದ ಗೋಪಾಲ ಇಂಚಗೇರ ಅವರ ತಂಡದಿಂದ ಹಾಸ್ಯ ಸಂಗೀತ ಸಿಂಚನ ಕಾರ್ಯಕ್ರಮ ಜರುಗಿತು. 

   ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭಾಗವಹಿಸಿದ್ದರು. ಟ್ರಸ್ಟ್ನ ಅಧ್ಯಕ್ಷ ತಿರುಗುಣೆಪ್ಪ ಗಾಳಿ ಅಧ್ಯಕ್ಷತೆ ವಹಿಸಿದ್ದರು.  ಲಕ್ಷ್ಮೀ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವೀರಣ್ಣ ಕುರಹಟ್ಟಿ, ಪುರಸಭೆ ಸದಸ್ಯರಾದ ಉಮೇಶ ಹುನಗುಂದ, ಪ್ರಶಾಂತ ಜವಳಿ, ಅಮರೇಶ ಕವಡಿಮಟ್ಟಿ, ಸುಮಿತ್ರಾ ಕೊಡಬಳಿ, ಶ್ರೀಧರ ಶೆಟ್ಟರ, ಜವಳಿ ಉದ್ಯಮಿ ಸಂಗಮೇಶ ಹುನಗುಂದ, ಡಾ.ಎಚ್.ಕೆ.ಶ್ಯಾವಿ, ಅಯ್ಯಪ್ಪ ಅರಕಾಲಚಿಟ್ಟಿ, ನಾಗೇಶ ಹಳ್ಳಿ, ಹೆಸ್ಕಾಂ ಎಇಇ ಪ್ರಕಾಶ ಪೋಚಗುಂಡಿ, ಗೋಪಾಲ ಹಳ್ಳೂರ ಸೇರಿದಂತೆ ಇತರರು ಇದ್ದರು. ಮಾಗುಂಡಪ್ಪ ಹನಮಸಾಗರ ನಿರೂಪಿಸಿದರು. ಸುಭಾಸ ಸಮಗಂಡಿ ಸ್ವಾಗತಿಸಿದರು. ವಸಂತ ಅರಬಿ ವಂದಿಸಿದರು.