ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಮೊಬೈಲ್ ಎಟಿಎಂ ಸೇವೆ

ಬಳ್ಳಾರಿ17: ಲಾಕ್ಡೌನ್ನಿಂದಾಗಿ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕನರ್ಾಟಕ ಗ್ರಾಮೀಣ ಬ್ಯಾಂಕಿನಿಂದ ಮೊಬೈಲ್ ಎಟಿಎಂ ಸೇವೆ ಆರಂಭಿಸಲಾಗಿದೆ. 

     ಮಾಚರ್್ 24ರಿಂದ ಲಾಕ್ಡೌನ್ ಆದಾಗಿನಿಂದಲೂ ದಿನಸಿ ಹಾಗೂ ತರಕಾರಿ ಖರೀದಿ ಮಾಡಲು ಎಟಿಎಂಗಳಲ್ಲಿ ಹಣದ ಅಭಾವ ಅನುಭವಿಸುತ್ತಿರುವ ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಕನರ್ಾಟಕ ಗ್ರಾಮೀಣ ಬ್ಯಾಂಕ್ ಮೊಬೈಲ್ ಎಟಿಎಂ ಸೇವೆಯನ್ನು ಕಳೆದೊಂದು ವಾರದಿಂದ ಮುನಿಸಿಪಲ್ ಮೈದಾನ, ಬಸವೇಶ್ವರ ನಗರ, ನೆಹರು ಕಾಲೊನಿ, ಕಪ್ಪಗಲ್ಲು ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒದಗಿಸುತ್ತಿದೆ. ಚಿ

         ಮೊಬೈಲ್ ಎಟಿಎಂ ವಾಹನ ಗ್ರಾಹಕರಿಗೆ ತುತರ್ಾಗಿ ಹಣ ಒದಗಿಸುವ ಸೇವೆಯಲ್ಲಿ ತೊಡಗಿಕೊಂಡಿದೆ. ಈ ಸಂಬಂಧ ಕನರ್ಾಟಕ ಗ್ರಾಮೀಣ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಾಥ ಜೋಷಿ ಮಾತನಾಡಿ, ವಾರದಿಂದ ನಗರದಾದ್ಯಂತ ಮೊಬೈಲ್ ಎಟಿಎಂ ವಾಹನ ಸಂಚರಿಸುತ್ತಿದೆ. 

    ಈ ಎಟಿಎಂ ಕೇಂದ್ರದಲ್ಲಿ ಅಂದಾಜು 200 - 250 ಮಂದಿ ಗ್ರಾಹಕರು ಹಣ ಡ್ರಾ ಮಾಡುತ್ತಿದ್ದಾರೆ. ಅದರ ಸದ್ಬಳಕೆಯನ್ನು ಗ್ರಾಹಕರು ಮಾಡಿಕೊಂಡಿದ್ದಾರೆ. ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಎಟಿಎಂ ಮೊಬೈಲ್ ಸಂಚಾರ ವಾಹನಗಳು ಸಂಚರಿಸುತ್ತಿವೆ. ಆಥರ್ಿಕ ಸಂಕಷ್ಟ ಕಾಲದಲ್ಲೂ ಈ ಎಟಿಎಂ ವಾಹನ ಸೇವೆಯನ್ನು ಕನರ್ಾಟಕ ಗ್ರಾಮೀಣ ಬ್ಯಾಂಕ್ ನೀಡುತ್ತಿದೆ ಎಂದರು.