ಮೆಲ್ಬೋರ್ನ್, ಡಿ 26, ಕ್ವಿನ್ಸ್
ಲೆಂಡ್ ಸ್ಪಿನ್ನರ್ ಮಿಚೆಲ್ ಸ್ವೀಪ್ಸನ್ ಅವರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆಸ್ಟ್ರೇಲಿಯಾ
ತಂಡದ ಅಂತಿಮ 11 ರಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಆಯ್ಕೆದಾರರು ಸ್ಪಷ್ಟಪಡಿಸಿದ್ದಾರೆ. ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಿಮಿತ್ತ
ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತಂಡದೊಂದಿಗೆ ಇವರು ಕಾಣಿಸಿಕೊಂಡಿದ್ದರು.
“ಸನ್ನಿವೇಶದ ಬೇಡಿಕೆಗೆ ಎರಡನೇ ವಿಶೇಷ ಸ್ಪಿನ್ನರ್ ಆಗಿ ಮಿಚೆಲ್ ಸ್ವೀಪ್ಸನ್ ಆಡಿಸಲಾಗುತ್ತದೆ,” ಎಂದು ಮುಖ್ಯ ಆಯ್ಕೆದಾರ ಟ್ರಾವೆರ್ ಹೋನ್ಸ್ ಅಧಿಕೃತ ಹೇಳಿಕೆಯಿಂದ
ತಿಳಿದುಬಂದಿದೆ. ಕಳೆದ 2017ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ
ಪ್ರವಾಸದ ಟೆಸ್ಟ್ ಸರಣಿಗಳಿಗೆ ಸ್ವೀಪ್ಸನ್ ಸ್ಥಾನ ಪಡೆದಿದ್ದರು. 2018ರಲ್ಲಿ ಎಜ್ ಬಾಸ್ಟನ್ ನಲ್ಲಿ
ಇಂಗ್ಲೆಂಡ್ ವಿರುದ್ಧ ಆಡಿದ್ದ ಚೊಚ್ಚಲ ಟಿ-20 ಪಂದ್ಯದಲ್ಲಿ ಎರಡು ವಿಕೆಟ್ ಕಿತ್ತಿದ್ದರು. ಪ್ರಸ್ತುತ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ
ಗಾಯಾಳು ಜೋಶ್ ಹೇಜಲ್ ವುಡ್ ಸ್ಥಾನದಲ್ಲಿ ಜೇಮ್ಸ್ ಪ್ಯಾಟಿನ್ಸನ್ ಆಡುತ್ತಿದ್ದಾರೆ. ಹಿರಿಯ ವೇಗಿ ಪೀಟರ್
ಸಿಡ್ಲೆ ಅವರನ್ನು ಅಡಿಲೇಡ್ ಸ್ಟ್ರೈಕರ್ ಪರ ಬಿಗ್ ಬ್ಯಾಷ್ ಲೀಗ್ ಆಡಲು ಬಿಡುಗಡೆ ಮಾಡಲಾಗಿದೆ.