ಜನರಲ್ಲಿ ತಪ್ಪು ತಿಳುವಳಿಕೆ ನೀಡಿ ಗೊಂದಲ ಸೃಷ್ಟಿ: ವಿಶ್ವನಾಥ

ಲೋಕದರ್ಶನ ವರದಿ

ಬೈಲಹೊಂಗಲ  24:  ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಲ್ಲಿ ತಪ್ಪು ತಿಳುವಳಿಕೆ ನೀಡಿ ಗೊಂದಲ ಸೃಷ್ಟಿ ಮಾಡಿ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿರುವುದು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ,  ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

    ಅವರು ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನ ದೇಶಗಳಲ್ಲಿ ಹಿಂದೂ, ಕ್ರಿಶ್ವಿಯನ್, ಜೈನ, ಇನ್ನಿತರ ಧರ್ಮದವರು ತುಳಿತಕ್ಕೆ ಒಳಗಾಗಿ ಮೂಲಸೌಲಭ್ಯದಿಂದ ವಂಚಿತಗೊಂಡು ಅಂತವರು ಭಾರತಕ್ಕೆ ಬಂದು ಹಲವಾರು ವರ್ಷ ಬೀಡು ಬಿಟ್ಟಿದ್ದಾರೆ. ಅವರನ್ನು ಗುರುತಿಸಿ ಪೌರತ್ವ ಕಾಯ್ದೆ ಅಡಿಯಲ್ಲಿ ಅವರಿಗೆ ಭಾರತದ ಪೌರತ್ವವನ್ನು ನೀಡಲಾಗಿದೆ ಎಂದರು.

ವಿನಾಕಾರಣ ಪ್ರತಿಪಕ್ಷದವರು ಪೌರತ್ವ ಕಾಯ್ದೆ ಕುರಿತು ಜನರಲ್ಲಿ ಆತಂಕ ಮೂಡುಸುತ್ತಿರುವ ಪರಿಣಾಮ ಅಶಾಂತಿ ಉಂಟಾಗಿ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಉಂಟಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಪ್ರತಿಭಟನೆ ಶಾಂತಿಯುತವಾಗಿ ಸರಕಾರದ ಗಮನ ಸೆಳೆಯುವಂತಾಗಬೇಕು.    ಬೈಲಹೊಂಗಲ ನಾಡಿನಲ್ಲಿ ಎಲ್ಲ ಜನಾಂಗದವರು ಸಹೋದರತ್ವ ಭಾವನೆಯಿಂದ ಜೀವನ ಸಾಗಿಸುತ್ತಿರುವುದು ಶ್ಲಾಘನೀಯ.ಎನ್ಆರ್ಸಿ ಕುರಿತು ಪ್ರಾಯೋಗಿಕವಾಗಿ ಆಸ್ಸಾಂ ರಾಜ್ಯದಲ್ಲಿ ಪ್ರಯೋಗ ಮಾಡಲಾಗಿದೆ. ಇದನ್ನು  ದೇಶವ್ಯಾಪ್ತಿ ಕಾನೂನು ತರಲು ಪ್ರಯತ್ನಿಸಲಾಗುತ್ತಿದೆ ಎಂದರು. 

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸರಿಯಾದ ಮಾಹಿತಿ ಕೊಡದೇ ಪ್ರಚೋದನೆ ಮಾಡುತ್ತಿದ್ದಾರೆ. ಕಾಯ್ದೆ ಬಗ್ಗೆ ಯಾರಿಗೂ ಗೊಂದಲ ಇರಬಾರದು. 

ಪೌರತ್ವ ಕಾಯ್ದೆ ಬಗ್ಗೆ ತಿಳುವಳಿಕೆ ಇಲ್ಲದವರು ಏನೇನೋ ಮಾತನಾಡುತ್ತಿದ್ದಾರೆ ಎಂದರು. ಪೌರತ್ವ ಕಾಯ್ದೆ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅತೀ ಅವಶ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗುರುಪಾದ ಕಳ್ಳಿ, ಮಡಿವಾಳಪ್ಪ  ಹೋಟಿ, ರಾಜು ಭರಮಗೌಡರ, ಆಯ್.ಎಲ್.ಪಾಟೀಲ, ರುದ್ರಪ್ಪ ಹೊಸಮನಿ,ಮುರಗೇಪ್ಪ ಗುಂಡ್ಲೂರ, ಚನಬಸ್ಸು ಇಟಿ, ಚಂದ್ರು ಪಟ್ಟೇದ, ಜಗದೀಶ ಕೊತಂಬ್ರಿ, ಬಸನಗೌಡ ಸಂಗನಗೌಡರ, ಶಿವಾನಂದ ಕೊಲಕಾರ, ರಾಜು ಕುಡಸೋಮನ್ನವರ, ಇತರರು ಇದ್ದರು.