ಯುವತಿ ಕಾಣೆ: ಪತ್ತೆಗೆ ಮನವಿ

Missing young woman: Appeal to trace

ಯುವತಿ ಕಾಣೆ: ಪತ್ತೆಗೆ ಮನವಿ 

ಬಳ್ಳಾರಿ 30: ಸಿರುಗುಪ್ಪ ಪಟ್ಟಣದ ನಿವಾಸಿ ಗಾಯತ್ರಿ ಎನ್ನುವ 22 ವರ್ಷದ ಯುವತಿ ನ.18 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. 

*ಯುವತಿಯ ಚಹರೆ:* 

ಎತ್ತರ 5.5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಹಣೆಗೆ ಹಚ್ಚೆ ಗುರುತು ಇರುತ್ತದೆ. ಯುವತಿ ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣದ ಚುಕ್ಕೆ ಇರುವ ನೈಟಿ ತೊಟ್ಟಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.ಮೇಲ್ಕಂಡ ಚಹರೆ ಗುರುತುಗಳುಳ್ಳ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ದೂ.08396-220333, ಸಿರುಗುಪ್ಪ ವೃತ್ತದ ಸಿಪಿಐ ದೂ.08396-220003, ಸಿರುಗುಪ್ಪ ಉಪ ವಿಭಾಗದ ಡಿಎಸ್‌ಪಿ ದೂ.08392-276000 ಅಥವಾ ಬಳ್ಳಾರಿ ಎಸ್‌ಪಿ ಅವರ ಕಚೇರಿ ದೂ.08392-25400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.