ಮೀರಾ ತಟಗಾರಗೆ ಅತ್ಯುತ್ತಮ ವರದಿಗಾರ ಪ್ರಶಸ್ತಿ
Mira Tatagara wins best reporter award
ಮಹಾಲಿಂಗಪುರ 16: ಪತ್ರಿಕಾ ವರದಿಗಾರ ಮೀರಾ ತಟಗಾರ ಅವರಿಗೆ ರಬಕವಿ - ಬನಹಟ್ಟಿ ತಾಲೂಕ ಸ್ವಾತಂತ್ರೋತ್ಸವ ಪ್ರಶಸ್ತಿ ಮತ್ತು ಸನ್ಮಾನ ಲಭಿಸಿದ ಪ್ರಯುಕ್ತ ಸ್ಥಳೀಯ ಪುರಸಭೆಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಉತ್ತಮ ವರದಿಗಾರಿಕೆಗೆ ತಾಲೂಕ ಆಡಳಿತದಿಂದ ನೀಡುವ ಸ್ವಾತಂತ್ರ್ಯೋತ್ಸವ ಪ್ರಶಸ್ತಿಯನ್ನು ಶಾಸಕ ಸಿದ್ದು ಸವದಿ ಪ್ರದಾನ ಮಾಡಿದರು.
ಸದಾ ಸಮಾಜ ಸೇವೆ, ಧಾರ್ಮಿಕ ಆಧ್ಯಾತ್ಮಿಕ ಸೇವೆಗಳಲ್ಲಿ ತಮ್ಮನ್ನು ತಾವು ನಿರಂತರ ತೊಡಗಿಸಿಕೊಂಡು ಸರ್ವರೊಳಗೊಂದಾಗಿ, ಸ್ನೇಹಜೀವಿಯಾಗಿ ಸರ್ವರ ಹಿತವನ್ನೇ ಬಯಸುತ್ತಾ ಸಕಲರಿಗೂ ಒಳ್ಳೆಯದನ್ನ ಮತ್ತು ಕೈಲಾದಷ್ಟು ಸಹಾಯವನ್ನು ಮಾಡುತ್ತಾ ಇಂದು ಭಿನ್ನವಾಗಿ ನಿಲ್ಲುವ ಪತ್ರಕರ್ತರಾಗಿ ಪತ್ರಕರ್ತ ಮೀರಾ ತಟಗಾರ ನಮಗೆ ಕಾಣಿಸುತ್ತಾರೆ.
ಯಾವುದೇ ಒಂದು ಧರ್ಮ ಅಥವಾ ಪಕ್ಷಕ್ಕೆ ಸೀಮಿತವಾಗದೆ ಸರ್ವ ಸುದ್ದಿಗಳನ್ನು ಯಾವುದೇ ಒತ್ತಡಕ್ಕೂ ಮತ್ತು ಆಮಿಷಕ್ಕೂ ಮಣಿಯದೆ ನಿಷ್ಪಕ್ಷವಾಗಿ, ವಸ್ತುನಿಷ್ಠವಾಗಿ ಸುದ್ದಿ ಮಾಡುತ್ತಾ ಸರ್ವಧರ್ಮ ಮತ್ತು ಸರ್ವ ಪಕ್ಷಗಳ ಹಿರಿ ಕಿರಿಯರಿಗೆ, ಗಣ್ಯಮಾನ್ಯರಿಗೆ ಪ್ರೀತಿ ಪಾತ್ರವಾಗಿರುವ ಮೀರಾ ತಟಗಾರ ಅವರಿಗೆ ಈ ಸಲ ಸ್ವಾತಂತ್ರ್ಯೋತ್ಸವ ಸನ್ಮಾನ ಮತ್ತು ಸ್ವಾತಂತ್ರ್ಯೋತ್ಸವ ಪ್ರಶಸ್ತಿ ದೊರಕಿರುವುದು ಖುಷಿ ತಂದಿದೆ.
ಸುದ್ದಿಯನ್ನು ಸುದ್ದಿಯಾಗಿಯೇ ಸುದ್ದಿಗಾಗಿಯೇ ಮಾಡುವ ಅಪರೂಪದ ಪತ್ರಕರ್ತ ಮೀರಾ ತಟಗಾರ ಯಾರಿಂದಲೂ ಏನನ್ನು ಬಯಸದೆ ಸುದ್ದಿಯನ್ನು ಮಾಡುತ್ತಲೇ ಸಕಲರ ಹೃದಯ ಗೆದ್ದು ಮನೆಮಾತಾಗಿರುವುದು ಈಗ ಅವರಿಗೆ ತಾಲೂಕ ಪ್ರಶಸ್ತಿ ದೊರಕಿರುವುದು ಅವರ ಹಿರಿಮೆಗೆ ಗರಿ ಮೂಡಿದೆ.
ಕಾನಿಪ ಅಧ್ಯಕ್ಷ ಮಹೇಶ ಮಣ್ಣಯ್ಯನವರಮಠ, ಕಾರ್ಯದರ್ಶಿ ಹನುಮಂತ ನಾವಿ, ಪತ್ರಕರ್ತರಾದ ಮಹೇಶ ಆರಿ, ನಾರನಗೌಡ ಉತ್ತಂಗಿ,ಲಕ್ಷ್ಮಣ ಕಿಶೋರಿ, ರಾಘವೇಂದ್ರ ನೀಲನ್ನವರ, ಕೆ .ಎಂ ಕುಲಗೋಡ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಮುಖಂಡರಾದ ಸಂಗಪ್ಪ ಹಲ್ಲಿ, ಅನಿಲ್ ಕವಾಸಿ,ಇತರರಿದ್ದು ಅಭಿನಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 