ಲೋಕದರ್ಶನ ವರದಿ
ತಾಳಿಕೋಟೆ 11: ಆಲಮಟ್ಟಿ ಡ್ಯಾಂ ನಿಮರ್ಾಣಕ್ಕೆ ಜಿಲ್ಲೆಯ ಜನ ಭೂಮಿಯನ್ನು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ನೀರು ಇಲ್ಲವಾದರೆ ಡ್ಯಾಂ ನಿಮರ್ಾಣ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? ನೀರಿಗಾಗಿ ಎಲ್ಲ ರೈತರು ಸರಕಾರಗಳ ವಿರುದ್ಧ ಸಿಡಿದೇಳಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಯನ್ನು ಕೆರೆ ನೀರು ತುಂಬಿಸುವ ಕುರಿತು ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯನ್ನುದೇಶಿಸಿ ಮಾತನಾಡಿದರು.
ಆದರೆ ಸರಕಾರ ಐಸಿಸಿ ಸಭೆಯಲ್ಲಿ ನವೆಂಬರ್ 14 ರಂದು ಕಾಲುವೆಗೆ ನೀರು ಬಂದ್ ಮಾಡಲು ತೀಮರ್ಾನ ಮಾಡಿದೆ. ಈ ಸರಕಾರದ ನಿಧರ್ಾರವನ್ನು ಕಾದು ನೋಡಬೇಕಾಗಿದೆ. ಆಲಮಟ್ಟಿ ಆಣೆಕಟ್ಟಿನಿಂದ 130 ಟಿಎಮ್ಸಿ ನೀರನ್ನು ಹೆಚ್ಚುವರಿಯಾಗಿ ನಾರಾಯಣಪೂರ ಜಲಾಶಯಕ್ಕೆ ಬಿಡುಗಡೆ ಮಾಡಿದ್ದು ಅಲ್ಲದೇ ಜಿಲ್ಲೆಯ ರೈತರಿಗೆ ಹಂಚಿಕೆಯಾದ ನೀರನ್ನು ಸಹ ಕೊಟ್ಟಿಲ್ಲ. ಹಿಂಗಾರು ಬೆಳೆಗೆ ನೀರು ಹರಿಸಬೇಕು ಎನ್ನುವದು ರೈತರ ಒತ್ತಾಸೆಯಾಗಿದೆ. ಶಿವಾನಂದ ಪಾಟೀಲರು ನಮ್ಮ ಜಿಲ್ಲೆಯವರಾಗಿದ್ದು, ಜಿಲ್ಲೆಯ ರೈತರ ಭಾವನೆಗಳನ್ನು ಆರ್ಥ ಮಾಡಿಕೊಳ್ಳಬೇಕು ಎಂದರು.
ಮತಕ್ಷೇತ್ರದಲ್ಲಿರುವ ಕೆರೆಗಳನ್ನು ಭತರ್ಿ ಮಾಡಲು ಸ್ವತಃ ಆಸಕ್ತಿ ವಹಿಸಿ ಕೆರೆ ತುಂಬಿಸಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಮತಕ್ಷೇತ್ರದ 16 ಕೆರೆಗಳು ಕಾಲುವೆ ಮೂಲಕ ಯಾವುದೇ ಖಚರ್ು ಇಲ್ಲದೇ ಭತರ್ಿ ಮಾಡಲಾಗಿದೆ. ಚಿಮ್ಮಲಗಿ ಕಾಲುವೆಗಳ ನಿಮರ್ಾಣ ಸಮಯದಲ್ಲಿ ಕೆರೆಗಳನ್ನು ಭತರ್ಿ ಮಾಡಲು ಯಾವುದೇ ಯೋಜನೆ ರೂಪಿಸದಿರುವದರಿಂದ ಕೆರೆ ತುಂಬಿಸಲು ಅಡ್ಡಗಾಲಾಗುತ್ತಿದೆ. ಅಡ್ಡಿಗಳನ್ನು ಹಂತ ಹಂತವಾಗಿ ನಿವಾರಿಸಿಕೊಂಡು ಕೆರೆ ತುಂಬಿಸಲು ಕ್ರಮ ಕೈಕೊಳ್ಳಲಾಗಿದೆ. ತಮದಡ್ಡಿ ಕೆರೆ 180 ಎಕರೆ ವಿಶಾಲವಾದ ಕೆರೆಯಾಗಿದೆ. ಇದು ಕಾಲುವೆ ಮೂಲಕ ನೀರು ಹರಿಸಿದರೂ ಸಾಕು ಕೆರೆ ಭತರ್ಿ ಮಾಡಬಹುದಾಗಿದೆ. ಕೆರೆ ನಿಮರ್ಿಸಿ 30 ವರ್ಷಗಳು ಗತಿಸಿದರೂ ಇಲ್ಲಿಯವರೆಗೂ ಕೆರೆ ತುಂಬಿಸುವ ಯೋಜನೆ ಹಾಕಿದ್ದಿಲ್ಲ. ಗ್ರಾಮದ ಸಾರ್ವಜನಿಕರು ತಮದಡ್ಡಿ ಕೆರೆ ತುಂಬಲು ಮನವಿ ಮಾಡಿದ್ದರಿಂದ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬಳಗಾನೂರ, ವನಹಳ್ಳಿ, ತಮದಡ್ಡಿ ಕೆರೆಗಳು ಕಾಲುವೆ ಮೂಲಕ ಸಹಜವಾಗಿಯೇ ಕೆರೆಯನ್ನು ಭತರ್ಿ ಮಾಡಬಹುದಾಗಿದೆ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿಯೇ ಮೂರು ಕೆರೆಗಳನ್ನು ಭತರ್ಿ ಮಾಡಲು ಅಧಿಕಾರಿಗಳೊಂದಿಗೆ ಚಚರ್ಿಸಿ ಕ್ರಮ ಕೈಕೊಳ್ಳಲಾಗುವದು. ತಮದಡ್ಡಿ ಕೆರೆ ತುಂಬಿಸುವದರಿಂದ ತಮದಡ್ಡಿ, ಚೋಕಾವಿ, ಹಿರೂರ ಗ್ರಾಮದಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. ತಮದಡ್ಡಿ ಕೆರೆಯಿಂದ ನೀರಾವರಿ ಮಾಡಲು ಸಹ ಅನಕೂಲ ಪರಿಸ್ಥಿತಿ ಇದ್ದು, ಇದರಿಂದ 700-800 ಎಕರೆಗಳಿಗೆ ಕಾಲುವೆ ಇದೆ. 1000 ಹೆಕ್ಟರ್ ಅಂತರಜಲ ಮರುಸೃಷ್ಠಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ ನಿದರ್ೇಶಕ ಸೋಮನಗೌಡ ಪಾಟೀಲ, ತಾಪಂ ಸದಸ್ಯ ಗುರು ಕೊಪ್ಪದ ಸೇರಿದಂತೆ ತಮದಡ್ಡಿ, ಹಿರೂರ, ಚೋಕಾವಿ ಗ್ರಾಮದ ರೈತರು ಇದ್ದರು.