ಹಾವೇರಿ17: ಸ್ಥಳೀಯ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯಯನ್ನು ಬೇಗನೆ ಪೂರ್ಣಗೊಳಿಸುವಂತೆ ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರು ಮುಂದಾಗಬೇಕು ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯಉಡಚಪ್ಪ ಮಾಳಗಿ ಸಚಿವರನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯ ಬಹುಪಾಲು ತಾಲೂಕಗಳಲ್ಲಿ ಪೌರ ಕಾರ್ಮಿಕರ ನೇಮಕಾತಿಯನ್ನು ಮಾಡಲಾಗಿದ್ದು, ಜಿಲ್ಲಾ ಕೇಂದ್ರದಲ್ಲಿ 90 ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಈ ರೀತಿ ವಿಳಂಬ ನೀತಿ ಅನುಸರಿಸಿದರೆ ಹೇಗೆ ?ಕೊಡಲೇ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರು ಮಧ್ಯ ಪ್ರವೇಶ ಮಾಡಿಪೌರ ಕಾರ್ಮಿಕರರಿಗೆ ನ್ಯಾಯ ಒದಗಿಸಿಕೊಡಬೇಕು. ಸುಮಾರು 10-15 ವರ್ಷಗಳಿಂದ ದುಡಿಯುವ ಕಾರ್ಮಿಕರ ಪರವಾಗಿ ಮತ್ತೊರ್ವ ಸಚಿವ ಬಿಸಿ ಪಾಟೀಲ ಹಾಗೂ ಸ್ಥಳೀಯ ಶಾಸಕ ನೆಹರು ಓಲೇಕಾರ ಅವರು ಸರ್ಕಾರ ದ ಮಟ್ಟದಲ್ಲಿ ಸೂಕ್ತ ಕ್ರಮಕೈಗೊಂಡು ಅಧಿಕಾರಿಗಳಿಗೆ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸುವಂತಾಗಬೇಕಾಗಿದೆ. ಕೊಡಲೇ ಜನಪ್ರತಿನಿಧಿಗಳು ಕಾರ್ಮಿಕರ ನೇಮಕಾತಿ ಬೇಡಿಕೆ ಈಡೇರಿಕೆಗೆ ಸ್ಪಂಧಿಸಿ ಅವರ ಪರವಾಗಿ ನಿಲ್ಲಬೇಕು.ಇನ್ನೂ ವಿಳಂಬ ಧೋರಣೆಯಿಂದ ನಗರಸಭೆ ಕಾರ್ಯವೈಖರಿಯಲ್ಲಿ ಏರುಪೇರುಂಟಾಗಬಹುದು. ಜಿಲ್ಲಾಧಿಕಾರಿಗಳು ಈ ನೇಮಕಾತಿ ಪ್ರಕ್ರಿಯೆಗೆ ಮುಂದಾಗಬೇಕು. ಇನ್ನು ವಿಳಂಬ ಕಂಡು ಬಂದರೆಡಿಎಸ್ಎಸ್ ಸಂಘಟನೆ ಸುಮ್ಮೆನೆ ಇರುವುದಿಲ್ಲ. ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಉಡಚಪ್ಪ ಮಾಳಗಿ ಜನಪ್ರತಿನಿಧಿಗಳಿಗೆ ಆಗ್ರಹಿಸಿದ್ದಾರೆ.