ದಿ.11ರಿಂದ 18ರವರೆಗೆ ಸಚಿವ ಜಾರಕಿಹೊಳಿ ಪ್ರವಾಸ

    ಗೋಕಾಕ: ಪೌರಾಡಳಿತ ಹಾಗೂ ಬಂದು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ರಮೇಶ ಜಾರಕಿಹೊಳಿ ಅವರು ಜಿಲ್ಲೆಯಲ್ಲಿ ದಿ.11ರಿಂದ 18ರವರೆಗೆ ಪ್ರವಾಸ ಕೈಕೊಳ್ಳಲಿದ್ದು ಅದರ ವಿವರ.

ದಿ. 11 ಮತ್ತು 12ರಂದು ಗೋಕಾಕದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ. ಮತ್ತು ಸಾರ್ವಜನಿಕರ ಭೇಟಿ ಮಾಡಿ ಇಲ್ಲಿಯೇ ವಾಸ್ತವ್ಯ ಮಾಡುವರು.

ದಿ. 13ರಂದು ಮುಂಜಾನೆ ಗೋಕಾಕದಿಂದ ಹೊರಟು 10-30ಕ್ಕೆ ಅಥಣಿಯಲ್ಲಿ ಡಾ. ಬಿ.ಆರ್.ಅಂಬೇಡಕರ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ರಡರಟ್ಟಿ, ಸತ್ತಿ, ತೇಲಸಂಗ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಂದ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.

ದಿ. 14ರಂದು ಗೋಕಾಕದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ. ಮತ್ತು ಸಾರ್ವಜನಿಕರ ಭೇಟಿ ಮಾಡಿ ಇಲ್ಲಿಯೇ ವಾಸ್ತವ್ಯ ಮಾಡುವರು.

ದಿ. 15ರಂದು ಗೋಕಾಕದಿಂದ ಹೊರಟು ಬೆಳಗಾವಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.

ದಿ. 16 ಮತ್ತು 17ರಂದು ಗೋಕಾಕದಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿ. ಮತ್ತು ಸಾರ್ವಜನಿಕರ ಭೇಟಿ ಮಾಡಿ ಇಲ್ಲಿಯೇ ವಾಸ್ತವ್ಯ ಮಾಡುವರು.

ದಿ. 18ರಂದು 10 ಗಂಟೆಗೆ ಗೋಕಾಕದಿಂದ ಹೊರಟು 11-30 ಗಂಟೆಗೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಗೆ ಭೇಟಿಯಾಗುವರು. ನಂತರ ಗೋಕಾಕಕ್ಕೆ ಹಿಂತಿರುಗಿ ವಾಸ್ತವ್ಯ.

ದಿ. 19ರಂದು ಗೋಕಾಕದಿಂದ ಹೊರಟು 12-30ಕ್ಕೆ ವಿಜಾಪೂರದಲ್ಲಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಯಂಕಾಲ ಹುಬ್ಬಳ್ಳಿ ಆಗಮಿಸಿ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.