ಗದಗ 05: ಕರ್ನಾಟಕದ ರಾಜಧಾನಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾಥರ್ಿಗಳು ಕೊವಿಡ್-19 ಲಾಕಡೌನ ನಿಂದಾಗಿ ಎದುರಿಸುತ್ತಿದ್ದ ಆಹಾರ ಸಮಸ್ಯೆ ಕುರಿತು ಅಸ್ಸಾಂ ರಾಜ್ಯದ ಸಚಿವರು ಹಾಗೂ ಸಂಸ್ಕಾರ ಭಾರತಿ ಸಂಸ್ಥೆ ಪ್ರದೀಪ ದ್ವಿವೇದಿ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಸಚಿವರು ತಮ್ಮ ಕಚೇರಿ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿ ಆ ವಿದ್ಯಾರ್ಥಿಗಳು ಇರುವಲ್ಲಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ತಲುಪಿಸಲು ಸೂಚಿಸಿ ಅದನ್ನು ಕಾರ್ಯಗತವಾಗಿರುವುದನ್ನು ಖಚಿತಗೊಳಿಸಿಕೊಂಡಿದ್ದಾರೆ. ಇದರಿಂದ ತಮ್ಮ ರಾಜ್ಯ ಮತ್ತು ಕುಟುಂಬಗಳಿಂದ ದೂರವಿರುವ ಆ ವಿದ್ಯಾಥರ್ಿಗಳ ಆಹಾರ ಸಮಸ್ಯೆ ದೂರವಾಗಿದ್ದು ಸಚಿವರ ತಕ್ಷಣದ ಸ್ಪಂದನೆಯಿಂದ ಅವರುಗಳ ಕುಟುಂಬಗಳು ಸಮಾಧಾನದಿಂದ ಇರುವಂತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವರ ಆಪ್ತ ಕಾರ್ಯದಶರ್ಿಗಳು ತಿಳಿಸಿದ್ದಾರೆ.