ಕೊಪ್ಪಳಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ: ನಗರಸಭೆಯಲ್ಲಿ ಸನ್ಮಾನ
ಕೊಪ್ಪಳ 04: ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಖಾತೆ ಸಚಿವರಾದ ಬಿ ಝೆಡ್ ಜಮೀರ್ ಅಹಮದ್ ಖಾನ್ ರವರು ಹುಬ್ಬಳ್ಳಿಗೆ ತೆರಳುವ ಮಾರ್ಗ ರವಿವಾರದಂದು ಕೊಪ್ಪಳಕ್ಕೆ ಭೇಟಿ ನೀಡಿ ಮುಸ್ಲಿಂ ಶಾದಿ ಮಹಲ್ದಲ್ಲಿ ಜರುಗಿದ ಮುಫ್ತಿ ಮೌಲಾನ ಮಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ರವರ ಕುಟುಂಬದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನೂತನ ವಧು ವರರಿಗೆ ಶುಭ ಕೋರಿದ ಬಳಿಕ ಅವರನ್ನು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ನೇತೃತ್ವದ ತಂಡ ಅವರನ್ನು ನಗರಸಭೆಗೆ ಆಹ್ವಾನಿಸಿ ಸಭಾಂಗಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಅವರನ್ನು ಸ್ವಾಗತಿಸಿ ಸನ್ಮಾನ ಮಾಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯ ವಿರೂಪಾಕ್ಷಪ್ಪ ಮೂರನಾಳ ,ಸಮಾಜದ ಮುಖಂಡ ಕೆಎಂ ಸೈಯದ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್, ನಾಟಕ ಅಕಾಡೆಮಿ ಸದಸ್ಯ ಚಾಂದ್ ಪಾಷಾ ಕಿಲ್ಲೆದಾರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.