ಜುಗೂಳ ಗ್ರಾಮಕ್ಕೆ ಸಚಿವ ವಿ.ಸೋಮಣ್ಣಾ ಭೇಟಿ

ಲೋಕದರ್ಶನ ವರದಿ

ಕಾಗವಾಡ 04: ಪ್ರಕೃತಿ ವಿಕೋಪದಿಂದ ಕೃಷ್ಣಾ ನದಿಗೆ ಮಹಾಪೂರ ನೀರು ಬಂದು ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು. ಸರಕಾರಿ ಅಧಿಕಾರಿಗಳು ಸರ್ವೇ  ಮಾಡಿ 400 ಮನೆಗಳು ಕೈಬಿಟ್ಟಿದ್ದು ತಿಳಿದುಬಂದಿದೆ. ಈ ಎಲ್ಲ ಮನೆಗಳು ಸೇರ್ಪಡೆಗೊಳಿಸಿ ಇನ್ನೂ ಕೆಲ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವ ಆದೇಶ ರಾಜ್ಯದ ವಸತಿಖಾತೆ ಸಚಿವ ವಿ.ಸೋಮಣ್ಣಾ ಜುಗೂಳದಲ್ಲಿ ಅಧಿಕಾರಿಗಳಿಗೆ ನೀಡಿದರು.

ಸೋಮವಾರರಂದು ಜುಗೂಳ ಗ್ರಾಮದ ಶ್ರೀ ಗಜಾನನ ಮಂದಿರದಲ್ಲಿ ಗ್ರಾಮದ ಜನರ ಸಭೆ ಹಮ್ಮಿಕೊಂಡಿದ್ದರು.ವಸತಿಖಾತೆ ಸಚಿವ ವಿ.ಸೋಮಣ್ಣಾ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಜುಗೂಳ, ಮಂಗಾವತಿ, ಶಹಾಪುರ ಮೂರು ಗ್ರಾಮಗಳು ಸೇರಿ 1,500 ಮನೆಗಳು ಜಲಾವೃತ್ತಗೊಂಡಿವೆ. ಈ ಸರ್ವೇ ಕಾಮಗಾರಿ ಕೊನೆಗೊಂಡ ಬಳಿಕ ಇದರಲ್ಲಿ 400 ಮನೆಗಳು 'ಏ' ಗುಂಪಿನಿಂದ ತೆಗೆದು ಹಾಕಿದ್ದರು. ಇದರಿಂದ ಕೆಲ ದಿನಗಳಿಂದ ಜುಗೂಳ ಗ್ರಾಮದಲ್ಲಿ ಅಧಿಕಾರಿಗಳ ಮೇಲೆ ಆರೋಪವಾಗುತ್ತಿತ್ತು.ಇಲ್ಲಿಯ ಓರ್ವ ಗ್ರಾಮ ಸ್ಥವಿಷ ಪ್ರಾಶನ ಮಾಡಿದ್ದನು. ಇಲ್ಲಿಯ ಸರ್ವೇ  ಕಾಮಗಾರಿ ವಿಕೋಪಕ್ಕೆ ತಲುಪಿತ್ತು.

ಗ್ರಾಮಕ್ಕೆ ಸಚಿವರು ಭೇಟಿ ನೀಡಿದಾಗ ಎಲ್ಲರು ವಾದಮಾಡುವ ಸ್ಥಿತಿಯಲ್ಲಿದ್ದರು.ಅಷ್ಟರಲ್ಲಿ ಸಚಿವ ವಿ.ಸೋಮಣ್ಣಾ ಇವರು ಇಲ್ಲಿಗೆ ನಡೆದ ಸರ್ವೇಯಲ್ಲಿಯ ಎಲ್ಲ ಮನೆಗಳಿಗೆ 5 ಲಕ್ಷ ಅನುದಾನ ನೀಡುವ ಬಗ್ಗೆ ಸಿಇಓ ಡಾ.ರಾಜೇಂದ್ರ, ಚಿಕ್ಕೋಡಿ ಎಸಿ ರವೀಂದ್ರ ಕರಲಿಂಗಣ್ಣವರ ಮತ್ತು ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಇವರಿಗೆ ರಾಜ್ಯದ ಮುಖ್ಯಮಂತ್ರಿಗಳು ಯಾವುದೇ ಕುಟುಂಬಗಳಿಗೆ ಸಂಕಷ್ಟವಾಗದಂತೆ ನೋಡಿಕೊಳ್ಳಲು ಆದೇಶ ನೀಡಿದ್ದಾರೆ. ಅದರಂತೆ ನಾನು ನಿಮಗೆ ಆದೇಶ ನೀಡುತ್ತೇನೆ ಎಂದು ಸಚಿವರು ಹೇಳಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ತ ಸಚೇತಕ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಡಿಕೆಎಸ್ಎಸ್ ಸಕ್ಕರೆ ಕಾರ್ಖಾನೆ ಸಂಚಾಲಕ ಅಣ್ಣಾಸಾಹೇಬ ಪಾಟೀಲ ಇವರು ಸಚಿವರಿಗೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಸಚಿವರು ಕುಸಿದಿರುವ ಮನೆಗಳಿಗೆ ಮತ್ತು ರೈತನ ಬೆಳೆ ಹಾನಿಗೆ ಸರಕಾರ ಸ್ಪಂದಿಸಿದ್ದು, ಎಲ್ಲರಿಗೆ ನ್ಯಾಯ ನೀಡುತ್ತೇವೆ ಎಂದು ಹೇಳಿದರು.

ಶೀಘ್ರದಲ್ಲಿ ರೈತರಿಗೆಗಿಫ್ಟ್: 

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ರೈತರ ಪರಚಿಂತನೆ ಮಾಡುವ ನೇತಾರರು ಆಗಿರುವ ಬೆಳೆ ಹಾನಿ ಗಂಭೀರವಾಗಿ ತೆಗೆದುಕೊಂಡಿದ್ದು. ಹೆಚ್ಚಿನ ಅನುದಾನ ನೀಡುವ ಉದ್ದೇಶ ಅವರದಾಗಿದೆ. ಅಲ್ಲದೇ ಶೀಘ್ರದಲ್ಲಿ ರೈತರಿಗೆ ಒಂದು ಗಿಫ್ಟ್ ನೀಡಲಿದ್ದಾರೆ ಎಂದು ಸಚಿವರ ವಿ.ಸೋಮಣ್ಣಾ ಹೇಳಿದಾಗ ರೈತರು ಖುಷಿಯಿಂದ ಚಪ್ಪಾಳೆ ತಟ್ಟಿದರು.

ಯಡಿಯೂರಪ್ಪಾ ಪರ ಎಲ್ಲರು ಇರಬೇಕು:

ಸಚಿವ ವಿ.ಸೋಮಣ್ಣಾ ಇವರು ಜುಗೂಳ ಗ್ರಾಮದಲಿ ್ಲರೈತರಿಗೆ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಾ ಅವರ ಬೇಡಿಕೆಗಳು ಈಡೆಯರಿಸಿದರು. ಆಗ ಸಚಿವರು ಬಿ.ಎಸ್.ಯಡಿಯೂರಪ್ಪಾ ಇವರು ನಿಮ್ಮ ಪರವಾಗಿ ಇಷ್ಟೇಲ್ಲಾ ಮಾಡುವಾಗ ನೀವು ಯಾರ ಪರ ಇರುವಿರಿ ಎಂದು ಪ್ರಶ್ನಿಸಿ, ಜನರು ನಿಮ್ಮ ಪರಯಿದ್ದೇವೆ ಎಂದು ಹೇಳುವರೆಗೆ ಸುಮ್ಮನಾಗಲಿಲ್ಲಾ.

ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ, ಅಥಣಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪನ್ನವರ, ಕಾಗವಾಡ ತಾಪಂಕಾರ್ಯನಿವರ್ಾಹಕ ಅಧಿಕಾರಿ ಈರಣಗೌಡರ ಏಗಣಗೌಡರ, ಉಪತಹಸೀಲ್ದಾರ ವಿಜಯ ಚೌಗುಲೆ ಇವರು ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಕಾಸಾಹೇಬ ಪಾಟೀಲ, ಗ್ರಾಪಂ ಆಧ್ಯಕ್ಷ ಸಂಜಯ ಮಿಣಚೆ, ಮಾಜಿ ಎಪಿಎಂಸಿ ಆಧ್ಯಕ್ಷ ಅನೀಲ ಕಡೋಲೆ, ಸುಧಾಕರ ಗಣೇಶವಾಡಿ, ವಿಜಯ ಮಿಣಚೆ, ಉಮೇಶ ಪಾಟೀಲ, ಅವಿನಾಶ ಪಾಟೀಲ, ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.