ಹಳೆಯ ಪತ್ರಿಕೆಗಳ ಸಂಗ್ರಹ ಪ್ರದರ್ಶನಕ್ಕೆ ಸಚಿವ ತಂಗಡಗಿ ಚಾಲನೆ
ಕೊಪ್ಪಳ 12: ರಾಷ್ಟ್ರೀಯ ಅಂತರಾಷ್ಟ್ರೀಯ ನಾಡಿನ ಹಳೆಯ ಪತ್ರಿಕೆಗಳು ಯಾವ ಯಾವ ಪತ್ರಿಕೆಗಳು ಯಾವಾಗ ಪ್ರಾರಂಭ ಗೊಂಡಿದೆ ಅದರ ಸಂಸ್ಥಾಪಕರು ಸಂಪಾದಕರು ಯಾರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಉಳ್ಳ ಹಳೇ ಪತ್ರಿಕೆ ಗಳ ಸಂಗ್ರಹದ ಪ್ರದರ್ಶನ ವನ್ನು ಕೊಪ್ಪಳದಲ್ಲಿ ಇತ್ತೀಚಿಗೆ ಜರುಗಿದ ಕರ್ನಾಟಕ ಕಾರ್ಯನಿರತಪ್ಪ ಸಂಘದ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರದರ್ಶನ ಗೊಳಿಸಲಾಯಿತು.ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಉದ್ಘಾಟನೆ ನೆರವೇರಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು, ಪತ್ರಿಕೆ ಸಂಗ್ರಹ ಗೊಳಿಸಿದ ಕೊಪ್ಪಳದ ಕಾನೂನು ಮಾಪನ ಇಲಾಖೆಯ ನೀರೀಕ್ಷಕ ಎಂ ಬದಿಯುದ್ದೀನ್ ಅಹಮದ್ ನವೀದ್ ರವರು ಸಂಗ್ರಹ ಗೊಳಿಸಿದ್ದರು ಅಲ್ಲದೆ ಅವರೇ ಸ್ವಾರಚಿತ ಬರೆದ ಇಂಗ್ಲಿಷ್ ಉರ್ದು ಮತ್ತು ಕನ್ನಡ ಭಾಷೆಯಲ್ಲಿನ ನುಡಿಮುತ್ತುಗಳ ಪ್ರದರ್ಶನ ವಿಶೇಷವಾಗಿ ಜರಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು,ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪತ್ರಕರ್ತರ ಎಲ್ಲರೂ ವೀಕ್ಷಣೆ ಮಾಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸೆಲಹೆಗಾರ ಕೆ ವಿ ಪ್ರಭಾಕರ್, ಶಾಸಕ ಕೆ ರಾಘವೇಂದ್ರ ಹಿಟ್ನಾಳ, ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ್ ಹಳ್ಳಿಕೇರಿ, ರಾಜ್ಯ ಕಾರ್ಯಕಾರಿ ಸದಸ್ಯ ಸಾಧಿಕ್ ಅಲಿ ಸೇರಿದಂತೆ ಸಂಗ್ರಹಕಾರ ಬದಿಯುದ್ದೀನ್ ಅಹಮದ್ ನವೀದ ಮತ್ತು ಅವರ ಸಹೋದರರಾದ ಮೊಹಮ್ಮದ್ ಏಜಾಜ್ ಅಹಮದ್ ಇಮ್ತಿಯಾಜ್ ಮತ್ತು ವಿಕಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.