ಸೇತುವೆ ನಿರ್ಮಾಣ ಸ್ಥಳ ಸಚಿವ ಸತೀಶ ಜಾರಕಿಹೋಳಿಯವರಿಂದ ವೀಕ್ಷಣೆ
ಬೀಳಗಿ 16: ತಾಲೂಕಿನ ಬೂದಿಹಾಳ ಎಸ್.ಎಚ್-ಅನಗವಾಡಿ ಗ್ರಾಮದ ನಡುವಿನ ಸೇತುವೆ ನಿರ್ಮಿಸುವ ಸ್ಥಳ ವೀಕ್ಷಣ ಮಾಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ವೀಕ್ಷಣೆ ಮಾಡಿದರು. ಅವರ ಜೊತೆಯಲ್ಲಿ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಇದ್ದರು.
ಸೇತುವೆ ನಿರ್ಮಿಸುವ ಕುರಿತು ಮನ್ನಿಕೇರಿ ಆಯ್‌ಬಿಯಲ್ಲಿ ಮಾಧ್ಯಮವದರು ಕೇಳಿದ ಪಶ್ನೆಗೆ ಉತ್ತರಿಸಿದ ಅವರು, ತಾಲೂಕಿನ ಬೂದಿಹಾಳದಲ್ಲಿ ಸೇತುವೆ ನಿರ್ಮಿಸುವುದರಿಂದ ಈ ಭಾಗದಲ್ಲಿ ಬರುವ ಹಳ್ಳಿಗಳಿಗೆ ಸಂಚಾರಕ್ಕೆ ಹೆಚ್ಚು ಅನುಕೂಲ ಆಗಲಿದೆ ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೀರಾ ಅಂತಾ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ನೋಡಿ ರಾಜ್ಯದ ಎಲ್ಲ ಇಂತಹ ಸೇತುವೆ ನಿರ್ಮಾಣ ಬಗ್ಗೆ ಬೇಡಿಕೆಗಳು ಬಂದಿವೆ. ಅತೀ ಮುಖ್ಯವಾಗಿ ಅವಶ್ಯ ಇದ್ದಲ್ಲಿ ಸೇತುವೆ ನಿರ್ಮಾಣ ಮಾಡಬೇಕಾಗುತ್ತದೆ. ರಾಜ್ಯ ತುಂಬೆಲ್ಲ ಪ್ರವಾಸ ಮಾಡಿ ಸ್ಥಳ ವಿಕ್ಷಣೆ ಮಾಡಿದ ಮೇಲೆ ಗೊತ್ತಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಅವಶ್ಯ ಇದೆಯೋ ಅಥವಾ ಇಲ್ಲ್ಲ ವೆನ್ನುವುದನ್ನು ಅದನ್ನು ನೋಡಿ ಮೊದಲ ನೇಯ ಹಾಗೂ ಎರಡನೇ ಆಧ್ಯತೆ ಕೊಡಬೇಕಾಗುತ್ತದೆ. ನಿಮ್ಮ ಭಾಗದಲ್ಲಿ ಅವಶ್ಯ ಬಿದ್ದರೆ ಮಾತ್ರ ಮಾಡಲಾಗುವುದು ಎಂದರು.
ಮೊನ್ನೆ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ 11 ಜನರು ಪ್ರಾಣವನ್ನೆ ಕಳೆದುಕೊಂಡಿದ್ದರಿಂದ ಇದರಿಂದ ಸರಕಾರಕ್ಕೆ ಮುಜುಗರಾಗಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ ಪ್ರಶ್ನೆಗೆ ಕಾಲ್ತುಳಿದ 11 ಜನರು ಸಾವನ್ನಪ್ಪಿದ ವಿಷಯದಲ್ಲಿ ಸರಕಾರ ಫೆಲೀವರ್ ಆಗಿದ್ದು ನಿಜ. ರಾಜ್ಯದ ಜನತೆ ಮಾತನಾಡುವಂತೆ ಆಗಿದ್ದು ಇದರಿಂದ ಇಡೀ ರಾಜ್ಯಕ್ಕೆ ಮುಜಗುರಾಗಿದ್ದು ನಿಜ ಮುಂದೆ ಈ ರೀತಿಯಾಗದಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಈಗಾಗಲೇ ಎರಡು ವರ್ಷದಲ್ಲಿ ಬೀಳಗಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಇನ್ನೂ ಅನುದಾನ ಕೊಡಲಾಗುವುದು. ಬೂದಿಹಾಳದಲ್ಲಿ ಸೇತುವೆ ನಿರ್ಮಾಣ ಮಾಡುವುದರಿಂದ ಸಂತ್ರಸ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದಾಗ ಇದನ್ನು ಮುಂದೆ ನೋಡೋಣ ಎಂದರು.
ಬೀಳಗಿ ಕ್ರಾಸ್ ಹತ್ತಿರದ ಶ್ರೀರಾಮ ಮಂದಿರಕ್ಕೆ ಸಚಿವ ಸತೀಶ ಜಾರಕಿಹೊಳಿ ಬೇಟಿ ನೀಡಿ ದೇವರ ದರ್ಶನ ಪಡೆದರು.
ಶಾಸಕ ಜೆ.ಟಿ.ಪಾಟೀಲ, ಲೋಕೋಪಯೋಗಿ ಇಲಾಖೆ ವಿಭಾಗ ಕಾರ್ಯನಿರ್ವಾಹಕ ಇಂಜನೀಯರ್ ಎಇಇ ಜಿ ಆರ್.ದೇಶಪಾಂಡೆ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಪಪಂ ಸದಸ್ಯರಾದ ರಾಜು ಭೋರ್ಜಿ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ, ಶ್ರೀಶೈಲ ಅಂಟಿನ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 