ಸವದತ್ತಿ 31: ಸವದತ್ತಿ ತಾಲೂಕಿನ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್‌ಅಣ್ಣ ಜಾರಕಿಹೊಳಿಯವರು ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯರವರು ಹೇಳಿದರು.
ಅವರು ಪಟ್ಟಣದ ಭಗೀರಥ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಬರುತಕ್ಕಂತಹ ಅವರಾದ ಸದಾಶಿವಘಢ ರಾಷ್ಟ್ರೀಯ ರಾಜ್ಯ ಹೆದ್ದಾರಿ 34, ವ್ಯಾಪ್ತಿಯಲ್ಲಿ ಬರುವ ಸವದತ್ತಿ ಪಟ್ಟಣದ ಭಗೀರಥ ವೃತ್ತದಿಂದ ಕರಿಕಟ್ಟಿ ಕ್ರಾಸ್ಬಸ ಬಸವೇಶ್ವರ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ 6 ಕೋಟಿಯ ವೆಚ್ಚದ ಕಾಮಗಾರಿಗೆ ಸಚಿವ ಸತೀಶ ಜಾರಕಿಹೊಳಿಯವರು ಚಾಲನೆ ನೀಡಿದ ಬಳಿಕ ನಡೆದಸಭೆಯಲ್ಲಿ ಮಾತನಾಡಿದರು.
ನಂತರ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು. ಸವದತ್ತಿ ತಾಲೂಕಿನ ಅಭಿವೃದ್ಧಿಗಾಗಿ ಶಾಸಕ ವಿಶ್ವಾಸವೈದ್ಯ ರವರು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆಶಯದಂತೆ ಅನುದಾನವನ್ನು ನೀಡಿ ಸವದತ್ತಿಯ ಅಭಿವೃದ್ಧಿಗೆ ಸಹಕಾರ ನೀಡುವೆ. ಆದರಿಂದ ಸವದತ್ತಿ ಸಾರ್ವಜನಿಕರು ವಿಶ್ವಾಸ್ವೈದ್ಯರವರಿಗೆ ಹಾಗೂ ನಮ್ಮ ಸರ್ಕಾರಕ್ಕೆ ಸಹಕಾರ ನೀಡಬೇಕು. ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಸೌದತ್ತಿ ತಾಲೂಕನ್ನು ಸಾಕಷ್ಟು ಅಭಿವೃದ್ಧಿ ಪಡಿಸುವ ವಿಚಾರವನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ರಾಜಶೇಖರವಿ ಕಾರದಗಿ, ಮಾಜಿ ಶಾಸಕ ಆರ್.ವಿ ಪಾಟೀಲ್, ಚಂದ್ರುಪೂಜೆರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲುಜಕಾತಿ, ಬಸವರಾಜ ಅತ್ತಿಗೇರಿ, ಬಸವರಾಜ ಹಂಪಣ್ಣವರ, ಮಲಿಕಸಾಬ ಬಗವಾನ, ಶಿವಾನಂದ ಹೂಗಾರ ಉಮೇಶಬಾಳಿ, ಪುರಸಭೆಯ ಸದಸ್ಯರು ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.