ನವದೆಹಲಿ,ಸೆಪ್ಟೆಂಬರ್ 18 ದೇಶದ ಗಡಿಗಳ ಇತಿಹಾಸ ಬರೆಯುವ ಕೆಲಸ ಪ್ರಾರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ.
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಅಧಿಕಾರಿಗಳು, ಗೃಹ ವ್ಯವಹಾರಗಳ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳ ಸಭೆಯ ನಂತರ ಈ ತೀಮರ್ಾನಕ್ಕೆ ಬಂದಿದ್ದಾರೆ. ಎಂದು ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆ ಬುಧವಾರ ತಿಳಿಸಿದೆ.
ಈ ಕಾರ್ಯ ಗಡಿಗಳ ವಿವಿಧ ಅಂಶಗಳನ್ನು ಒಳಗೊಂಡಿದ್ದು ಇವುಗಳ ಪೈಕಿ ಗಡಿಗಳನ್ನು ತಯಾರಿಸುವುದು ಮತ್ತು ನಿಮರ್ಿಸುವುದು ಮತ್ತು ಸ್ಥಳಾಂತರಿಸುವುದು ಭದ್ರತಾ ಪಡೆಗಳ ಪಾತ್ರ; ಗಡಿಪ್ರದೇಶದ ಜನರ ಪಾತ್ರ, ಜನಾಂಗೀಯತೆ, ಸಂಸ್ಕೃತಿ ಮತ್ತು ಅವರ ಜೀವನದ ಸಾಮಾಜಿಕ-ಆರ್ಥಿಕ ಅಂಶಗಳನ್ನು ಒಳಗೊಂಡಿದ್ದು, ಇದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಭಾರತೀಯ ಗಡಿಗಳ ಇತಿಹಾಸ ಬರೆಯುವ ಮಹತ್ವವನ್ನು ಸಚಿವ ಸಿಂಗ್ ಒತ್ತಿಹೇಳಿದರು, ಇದು ಸಾಮಾನ್ಯವಾಗಿ ಸಾರ್ವಜನಿಕರಿಗೆ ಮತ್ತು ನಿದರ್ಿಷ್ಟವಾಗಿ ಅಧಿಕಾರಿಗಳಿಗೆ ಗಡಿಗಳ ಬಗ್ಗೆ ಉತ್ತಮ ತಿಳುವಳಿಕೆ ನೀಡಲು ಸಹಾಯ ಮಾಡಲಿದೆ ಎಂದು ಅವರು ಪುನರುಚ್ಚರಿಸಿದರು.
ಸಚಿವರು ವಿವಿಧ ಸಲಹೆಗಳನ್ನು ಸ್ವಾಗತಿಸಿದರು ಮತ್ತು ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಜ್ಞರನ್ನು ಸಂಪರ್ಕಿಸುವಂತೆಯೂ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ರಾಷ್ಟ್ರೀಯ ಗಡಿ, ಮತ್ತು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅರಿವು ಮೂಡಿಸುವ ಮೊದಲ ಯೋಜನೆಯಾಗಿದೆ.