ಎಚ್ಐವಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸಚಿವ ಪಾಟೀಲ ಕರೆ

ಲೋಕದರ್ಶನ ವರದಿ

ಜವಿಜಯಪುರ 01: ಎಚ್ಐವಿ ಸೋಂಕಿತರೊಂದಿಗೆ ಮಾನವೀಯ ಮೌಲ್ಯಗಳೊಂದಿಗೆ ವತರ್ಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಸುಂದರ ಬದುಕನ್ನು ಕಟ್ಟಿಕೊಳ್ಳಲು ನಾವು ಅವರಿಗೆ ನೆರವಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶಿವಾನಂದ ಪಾಟೀಲ ಜನತೆಗೆ ಕರೆ ನೀಡಿದರು.

ಕನರ್ಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೋಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ನಗರದ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ನಿಮ್ಮ ಎಚ್ಐವಿ ಸ್ಥಿತಿ ತಿಳಿಯಿರಿ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತದಲ್ಲಿ 1986ರಿಂದ ಪ್ರಚಲಿತಕ್ಕೆ ಬಂದ ಏಡ್ಸ್ ಕಾಯಿಲೆಯು ದೇಶವ್ಯಾಪಿ ವಿಸ್ತರಿಸಿತು. ಆದರೆ ಸೇವಾ ಮನೋಭಾವದ ವೈದ್ಯರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಿವಿಧ ಸಂಘ-ಸಂಸ್ಥೆಗಳು, ಸೋಂಕಿತರೊಂದಿಗೆ ನಿಂತು ಅವರಲ್ಲಿ ಆತ್ಮವಿಶ್ವಾಸ ತುಂಬಿ, ಕಾಲಬದ್ಧ ಚಿಕಿತ್ಸೆ ನೀಡುತ್ತಾ ಜೊತೆ-ಜೊತೆಗೆ ಎಚ್ಐವಿ ಕುರಿತು ವಿವಿಧ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸ್ತುತ ಗಣನೀಯ ಪ್ರಮಾಣದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣಲು ಕಾರಣೀಭೂತರಾಗಿದ್ದಾರೆ. ಅವರು ಬಹಳ ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಅಪಾಯಕ್ಕೊಡ್ಡಿ ಸೋಂಕಿತರೊಂದಿಗೆ ಬೆನ್ನೆಲುಬಾಗಿ ನಿಂತ ಸಂಗತಿ ಶ್ಲಾಘನೀಯವಾಗಿದೆ ಎಂದರು. 

2003-04 ರಲ್ಲಿ ಎಸ್.ಎಂ.ಕೃಷ್ಣರವರ ಆಡಳಿತಾವಧಿಯಲ್ಲಿ ಕೆಸೆಫ್ ಸೊಸೈಟಿ ಮೊಟ್ಟ ಮೊದಲ ಬಾರಿಗೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದರ ಮೂಲಕ ಏಡ್ಸ್ ತಡೆ ಜಾಗೃತಿ ಕಾರ್ಯಕ್ರಮಗಳು ಆರಂಭಗೊಂಡವು. ಅಂದಿನಿಂದ ನಿರಂತರವಾಗಿ ಈ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು, 2030ರ ವೇಳೆಗೆ ಏಡ್ಸ್ ಮುಕ್ತ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

ಏಡ್ಸ್ ನಿಯಂತ್ರಣದಲ್ಲಿ ಕನರ್ಾಟಕ ದೇಶದ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ಇದಕ್ಕೆ ಇಲ್ಲಿನ ವೈದ್ಯರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರ ಶ್ರಮವೇ ಕಾರಣ. ಇದುವರೆವಿಗೂ ಆರೋಗ್ಯ ಕನರ್ಾಟಕ ಮತ್ತು ಆಯುಷ್ಮಾನ ಭಾರತ ಯೋಜನೆಗಳಲ್ಲಿ ಎಚ್ಐವಿ ಸೋಂಕಿತರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿರಲಿಲ್ಲ. ಆದರೆ ಈಗ ಆ ಯೋಜನೆಗಳಲ್ಲೂ ಸಹ ಎಚ್ಐವಿಗೆ ಸಂಬಂಧಿಸಿದ ಚಿಕಿತ್ಸೆಗೆ ಅವಕಾಶವಿದೆ ಎಂದು ಅವರು ಇದೇ ಸಂದರ್ಭಧಲ್ಲಿ ತಿಳಿಸಿದರು. 

ಇದೇ ಸಂದರ್ಭದಲ್ಲಿ ರಕ್ತ ಸಂಗ್ರಹಣಾ ವಿತರಣಾ ವಾಹನಗಳನ್ನು ಲೋಕಾರ್ಪಣೆಗೊಳಿಸಿದ ಅವರು, ರಾಜ್ಯದಲ್ಲಿ ಬೆಳಗಾವಿ ಮತ್ತು ವಿಜಯಪುರದಲ್ಲಿ ತಲಾ ಒಂದು ರಕ್ತದ ಮೊಬೈಲ್ ವ್ಯಾನ್ಗಳನ್ನು ಆರಂಭಿಸಲಾಗಿದ್ದು, ರಕ್ತದ ಅಗತ್ಯವಿರುವವರಿಗೆ ಶೀಘ್ರ ಅನುಕೂಲವಾಗಲಿದೆ. ರಕ್ತದಾನದಿಂದ ಜೀವನ ದಾನ ಮಾಡಬಹುದು ಆದ್ದರಿಂದ ರಕ್ತದಾನ ಮಾಡುವಂತೆ ಮನವಿ ಮಾಡಿದರು. 

ಉತ್ತರ ಕನರ್ಾಟಕ ಭಾಗದಲ್ಲಿ 82 ಸಂಘ-ಸಂಸ್ಥೆಗಳು ಏಡ್ಸ್ ಸೋಂಕಿತರ ನೆರವಿಗೆ ಹಾಗೂ ಏಡ್ಸ್ ಕುರಿತ ಜನ ಜಾಗೃತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಸೋಂಕಿತ ಮಕ್ಕಳಿಗೆ ಆಶ್ರಯ ನೀಡಿ, ಒಳ್ಳೆಯ ಭವಿಷ್ಯ ನಿಮರ್ಾಣಕ್ಕೆ ಬದ್ಧವಾಗಿವೆ. ಎಲ್ಲರಲ್ಲೂ ಎಚ್ಐವಿ ಸೋಂಕಿನ ಕುರಿತು ಜಾಗೃತಿ ಮಾಡಬೇಕು. ಸೋಂಕಿತರನ್ನು ದೂರವಿಡದೆ ಸಮಾಜದಲ್ಲಿ ಒಂದಾಗಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು. 

ಇದೇ ಸಂದರ್ಭದಲ್ಲಿ ಸೋಂಕಿತರಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಹೆರಿಗೆ ಮಾಡಿದ ವೈದ್ಯರುಗಳನ್ನು ಸೋಂಕಿತರಿಗೆ ಬೆನ್ನೆಲುಬಾಗಿ ನಿಂತು, ಆಶ್ರಯ ನೀಡಿದ ವಿವಿಧ ಸಂಘ-ಸಂಸ್ಥೆಗಳನ್ನು ಆರೋಗ್ಯ ಸಹಾಯಕರನ್ನು ಸನ್ಮಾನಿಸಲಾಯಿತು. ರಕ್ತ ಸಂಗ್ರಹಣಾ ವ್ಯಾನ್ಗಳ ಕೀ ಹಸ್ತಾಂತರಿಸಲಾಯಿತು. ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ವಿದ್ಯಾಥರ್ಿನಿಯರು ಆರಂಭಿಸಿದ ಮಹಿಳಾ ಧ್ವನಿ ಪತ್ರಿಕೆ ಹಾಗೂ ಅಕ್ಕ ವಿವಿ ವಾಹಿನಿಯನ್ನು ಸಚಿವರು ಉದ್ಘಾಟಿಸಿದರು. ಐಇಸಿ ಮಳಿಗೆಗಳನ್ನು ಹಾಗೂ ಐಇಸಿ ಸಾಮಗ್ರಿಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಪ್ರಭಾಕರ್ರಾವ್ ಅವರು ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಶ ಕಿಶೋರ ಸುರಳಕರ, ಜಿಲ್ಲಾ ಏಡ್ಸ್ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಈರಣ್ಣ ಧಾರವಾಡಕರ, ಡಾ.ಸಂಪತ್ ಗುಣಾರಿ, ಡಾ.ಹೊಸಮನಿ ಸೇರಿದಂತೆ ಆರೋಗ್ಯ ಇಲಾಖೆ ರಾಜ್ಯ ಮಟ್ಟದ ಅಧಿಕಾರಿಗಳು, ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು, ಆರೋಗ್ಯ ಸಹಾಯಕರು, ವಿವಿಧ ಕಾಲೇಜ್, ನಸರ್ಿಂಗ್ ವಿದ್ಯಾಥರ್ಿಗಳು ಇತರರು ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ ಸ್ವಾಗತಿಸಿದರು. ಕನರ್ಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿದರ್ೇಶಕಿ ಡಾ.ಶಮ್ಲಾ ಇಕ್ಬಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ಹಳ್ಳಿ, ಭಾರತಿ ಕುಮಿ, ವನಿತಾ ಪ್ರಾಥರ್ಿಸಿದರು. ಗದಗನ ಅರುಣೋದಯ ಕಲಾತಂಡದಿಂದ ತತ್ವಪದ ಹಾಗೂ ಜನಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ರವಿ ಕಿತ್ತೂರ ನಿರೂಪಿಸಿದರು. 

ಜಿಲ್ಲಾಡಳಿತದಿಂದ ಇಂದು  ಕನಕದಾಸರ ಜಯಂತಿ 

ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿಸೆಂಬರ 2 ರಂದು ನವನಗರದ ಕಲಾಭವನದಲ್ಲಿ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 9.30 ಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಚಾಲನೆ ನೀಡಲಾಗುವುದು. ಮೆರವಣಿಗೆ ಜಿಲ್ಲಾಡಳಿತದ ಆವರಣದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ನವನಗರದ ಕಲಾಭವನಕ್ಕೆ ಮುಕ್ತಾಯಗೊಳ್ಳಲಿದೆ. ನಂತರ 11ಕ್ಕೆ ಕಲಾಭವನದಲ್ಲಿ ಜರಗುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಣ್ಣ ಚರಂತಿಮಠ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ, ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಭಾಗವಹಿಸುವರು. ತುಮಕೂರು ಜಿಲ್ಲೆಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅತಿಥಿ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.