ಸಣ್ಣ ನೀರಾವರಿ ಇಲಾಖೆ ಕಛೇರಿ ಕಟ್ಟಡ ನಿರ್ಮಾಣಕ್ಕೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ

ಸಣ್ಣ ನೀರಾವರಿ ಇಲಾಖೆ ಕಛೇರಿ ಕಟ್ಟಡ ನಿರ್ಮಾಣಕ್ಕೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ  Minister Laxman Savadi performs groundbreaking ceremony for the construction of the Minor Irrigation


ಅಥಣಿ 22: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 1ಕೋಟಿ ವೆಚ್ಚದ ಉಪ ವಿಭಾಗದ ಕಛೇರಿ ನಿರ್ಮಾಣ ಕಾಮಗಾರಿಗೆ ಸಹಕಾರ ಸಚಿವ, ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಿದರು.  ಸಹಕಾರ, ತೋಟಗಾರಿಕೆ, ಸಣ್ಣ ನೀರಾವರಿ ಸೇರಿದಂತೆ ಅನೇಕ ಸರಕಾರಿ ಇಲಾಖೆಗಳ ಸ್ಥಳೀಯ ಕಛೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಿರ್ವಹಿಸುತ್ತಿದ್ದು, ಈ ಎಲ್ಲ ಕಛೇರಿಗಳಿಗೆ ಗೈರಾಣ ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದ ಅವರು ಈ ನಿವೇಶನಗಳಲ್ಲಿಯೇ ಇಲಾಖೆಗಳಿಗೆ ಹಂತ ಹಂತವಾಗಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ ಎಂದರು.  

ಸಣ್ಣ ನೀರಾವರಿ ಇಲಾಖೆಯ ಪ್ರವೀಣ ಪಾಟೀಲ, ಗುತ್ತಿಗೆದಾರ ರಮೇಶ ಗಾಣಿಗೇರ, ಸಂತೋಷ ಗಾಣಿಗೇರ, ಪುರಸಭಾ ಸ್ಥಾಯಿ ಸಮೀತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ಮಲ್ಲೇಶ ಹುದ್ದಾರ, ದೀಲೀಪ ಲೋಣಾರೆ, ಮಲ್ಲಿಕಾರ್ಜುನ ಬುಟಾಳಿ, ವೀಲೀನರಾಜ ಯಳಮೇಲಿ, ರಾಜಶೇಖರ ಗುಡೋಡಗಿ, ಕಲ್ಲೇಶ ಮಡ್ಡಿ, ಬಸವರಾಜ ಹಳ್ಳದಮಳ, ಧುರೀಣರಾದ ಶಿವಾನಂದ ದಿವಾನಮಳ, ಅರುಣ ಯಲಗುದ್ರಿ, ಸುರೇಶ ವಾಡೇದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳಾದ ವೀರಣ್ಣಾ ವಾಲಿ, ಮಲ್ಲಿಕಾರ್ಜುನ ಮಗದುಮ್, ಡಾ.ಬಸಗೌಡ ಕಾಗೆ, ಪ್ರವೀಣ ಹುಣಸಿಕಟ್ಟಿ, ಶಬ್ಬೀರ ಪಾರ್ಥನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.