ಸದ್ಭಾವನಾ ದಿನಾಚರಣೆ: ಸರ್ವಧರ್ಮ ಪ್ರಾರ್ಥನೆ

ಸದ್ಭಾವನಾ ದಿನಾಚರಣೆ: ಸರ್ವಧರ್ಮ ಪ್ರಾರ್ಥನೆ  Sadbhavana Diwas Celebration: All-Faith Prayer

ಲೋಕದರ್ಶನ ವರದಿ 

ತಾಳಿಕೋಟಿ  22: ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಎನ್‌ಎಸ್‌ಎಸ್, ವೈಆರ್ಸಿ, ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳ ಸಹಯೋಗದಲ್ಲಿ ಆ. 20ರಂದು ಸದ್ಭಾವನಾ ದಿನಾಚರಣೆ ಹಾಗೂ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಅವರ ದೂರದೃಷ್ಟಿ ಹಾಗೂ ರಾಷ್ಟ್ರೀಯ ಏಕತೆಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶಗಳ ಭೇದವಿಲ್ಲದೆ ರಾಷ್ಟ್ರೀಯ ಏಕತೆ, ಶಾಂತಿ, ಕೋಮು ಸೌಹಾರ್ದತೆ ಹಾಗೂ ಪರಸ್ಪರ ಸದ್ಭಾವನೆ ಬೆಳೆಸುವುದು ದಿನಾಚರಣೆಯ ಉದ್ದೇಶ ಎಂದು ತಿಳಿಸಲಾಯಿತು.  

ವಿದ್ಯಾರ್ಥಿಗಳಿಂದ ಹಿಂದೂ, ಬೌದ್ಧ, ಇಸ್ಲಾಂ ಸೇರಿದಂತೆ ವಿವಿಧ ಧರ್ಮಗಳ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ರೇಂಜರ್ಸ್‌ ಅಧಿಕಾರಿ ಡಾ. ಸುಜಾತ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ರೋವರ್ಸ್‌ ಅಧಿಕಾರಿ ಡಾ. ಅಶೋಕ ರಾಠೋಡ ಅವರ ನೇತೃತ್ವದಲ್ಲಿ ಸದ್ಭಾವನಾ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರಾಚಾರ್ಯ ಡಾ. ದಯಾನಂದ ಮೂಗಡ್ಲಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿನಿಧಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.