ಬೆಂಗಳೂರು, ಏ 9, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಯಶವಂತಪುರದ ಎಪಿಎಂಸಿ ಯಾರ್ಡ್ನ ಗೇಟ್ ನಂ 1 ರಲ್ಲಿ ಸ್ಥಾಪಿಸಿರುವ ಸೋಂಕು ನಿವಾರಕ ಸುರಂಗವನ್ನು ಇಂದು ಉದ್ಘಾಟಿಸಿದರು. ನಾನಾ ಜಿಲ್ಲೆಗಳಿಂದ ಹೊರ ರಾಜ್ಯಗಳಿಂದ ರೈತರು, ಲಾರಿ ಚಾಲಕರು, ಕ್ಲೀನರ್ಗಳು, ಹಾಗೂ ಎಪಿಎಂಸಿ ಯಾರ್ಡ್ನಲ್ಲಿ ಕಾರ್ಯ ನಿರ್ವಹಿಸುವ ವರ್ತಕರು ಓಡಾಡುತ್ತಿರುತ್ತಾರೆ. ಹಾಗಾಗಿ ಇಲ್ಲಿ ಕೊರೋನ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಅದನ್ನು ತಡೆಯಲು ಸೋಂಕುನಿವಾರಕ ಸುರಂಗವನ್ನು ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸದಾಸ್ಮಿತ ಫೌಂಡೇಷನ್ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಅವರು ಸೋಂಕುನಿವಾರಕ ಸುರಂಗವನ್ನು ಸ್ಥಾಪಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇದು ತುಂಬಾ ಒಳ್ಳೆಯ ವ್ಯವಸ್ಥೆಯಾಗಿದೆ. ಇದೊಂದೇ ಯಂತ್ರ ಸಾಕಾಗುವುದಿಲ್ಲ. ಇನ್ನೂ ಎರಡು ಮೂರು ಎಪಿಎಂಸಿ ಯಾರ್ಡ್ಗಳಿಗೆ ಈ ಯಂತ್ರಗಳ ಅವಶ್ಯಕತೆಯಿದೆ ಹಾಗಾಗಿ ಸಚಿವರು, ನಿರ್ದೇಶಕರ ಜೊತೆ ಮಾತನಾಡಿ ಯಂತ್ರ ಅಳವಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಪಿಎಂಸಿಗೆ ಬರುವ ಲಾರಿ ಡ್ರೈವರ್ ಗಳು , ಕ್ಲೀನರ್ ಗಳು, ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಜೊತೆಗೆ ಕೊರೋನ ಮಹಾಮಾರಿ ಹರಡದಂತೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.ಇದಕ್ಕೂ ಮೊದಲು ಇಂದು ಬೆಳಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಅವರು ನಂದಿನಿ ಲೇಔಟ್ ನಲ್ಲಿ ವಾಸವಾಗಿರುವ ಬಡವರಿಗೆ ಉಚಿತ ಆಹಾರದ ಕಿಟ್ ಗಳನ್ನು ವಿತರಿಸಿದರು. ಅದರ ಜೊತೆಗೆ ಜನರಿಗೆ ಮಾಸ್ಕ್ ಗಳನ ವಿತರಣೆ ಮಾಡಿ ಕೊರೋನದಿಂದ ಪಾರಾಗಲು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದರು.ಇನ್ನೂ ಇದೇ ಸಂದರ್ಭದಲ್ಲಿ ನಂದಿನಿ ಬಡಾವಣೆಯ ನಾಯ್ಯ ಬೆಲೆ ಅಂಗಡಿಗೆ ಭೇಟಿ ಪಡಿತರ ವಿತರಣೆಯನ್ನು ಪರಿಶೀಲಿಸಿದರು.