ನಾನೆಂದೂ ಪ್ರಶಸ್ತಿ ಅರಸಿ ಹೋಗಿಲ್ಲ : ಬಿಇಓ ಅಂಬಿಗೇರ

ನಾನೆಂದೂ ಪ್ರಶಸ್ತಿ ಅರಸಿ ಹೋಗಿಲ್ಲ : ಬಿಇಓ ಅಂಬಿಗೇರ I have never sought awards: BEO Ambigera

ಶಿಗ್ಗಾವಿ 11  : ನಾನೆಂದೂ ಪ್ರಶಸ್ತಿ ಅರಸಿ ಹೋಗಿಲ್ಲ ನನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ನನ್ನ ಕಾರ್ಯವನ್ನು ಗುರುತಿಸಿ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡಿದ ಸರ್ಕಾರಿ ನೌಕರರ ಸಂಘಕ್ಕೆ ನನ್ನ ಧನ್ಯವಾದ ಅರ​‍್ಿಸುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ ಹೇಳಿದರು.  ಪಟ್ಟಣದ ಅಂಬೇಡ್ಕರ್ ಆಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿಗ್ಗಾವಿ ಶಾಖೆಯ ನೇತೃತ್ವದಲ್ಲಿ ನಡೆದ ಹಾವೇರಿ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ತಾಲೂಕನ್ನು ಸತತ ನಾಲ್ಕು ವರ್ಷಗಳಿಂದ ಮುನ್ನಡೆಸುತ್ತಿರುವ ಸಮಯದಲ್ಲಿ ತಾಲೂಕನ್ನು ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಇಡೀ ವಿಭಾಗಕ್ಕೆ ದ್ವಿತೀಯ ಸ್ಥಾನ ತರುವಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೆ ಈ ಪ್ರಶಸ್ತಿ ಸಮರೆ​‍್ಣ ಮಾಡುತ್ತೇನೆ ಎಂದರು. 

ತಾಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅರುಣ್ ಹುಡೇದಗೌಡ್ರ ಮಾತನಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂದ ಪ್ರಶಸ್ತಿ ಅವರ ಕರ್ತವ್ಯ ಶ್ರದ್ಧೆಗೆ ಒಲಿದ ಪ್ರತಿಫಲ ನಿರಂತರವಾಗಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಶ್ರಮಕ್ಕೆ ಸಂದ ಕಾಣಿಕೆ ಎಂದರು. ರಾಜ್ಯ ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಮನಿಯಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಅಧ್ಯಕ್ಷ ಸಂಜೀವ ಪೂಜಾರ, ಪ್ರಧಾನ ಕಾರ್ಯದರ್ಶಿ ಖಾದರ್ ಅಲಿ ನದಾಫ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಚ್ ಡಿ ಕುಂಕೂರ, ಉಪಾಧ್ಯಕ್ಷ ಝಬಿವುಲ್ಲಾ ಗಂಗನಕೋಟಿ,ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್ ಸಾಗರ, ಪ್ರಧಾನ ಕಾರ್ಯದರ್ಶಿವಿರೂಪಾಕ್ಷ ಕಾಮನಹಳ್ಳಿ,ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಶಕೀಲ ಅಹ್ಮದ ಚುಹೆ,ಕಾರ್ಯದರ್ಶಿ ಮಹಮ್ಮದ್ ಜಾಫರ್ ನದಾಫ್‌ ಲಿಪಿಕಾ, ಬೋಧಕೇತರ ಸಂಘದ ಜಿಲ್ಲಾ ಅಧ್ಯಕ್ಷ ಆರ್ ವಿ ಬೊಂಗಾಳೆ ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.