ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಚಿವ ಎಚ್‌. ಕೆ. ಪಾಟೀಲ ಚಾಲನೆ ಅಭ್ಯರ್ಥಿಗಳ ಆಸಕ್ತಿ, ಶಿಕ್ಷಣಕ್ಕನುಗುಣವಾಗಿ ಉದ್ಯೋಗ ಆರಿಸಿಕೊಳ್ಳಲು ಅವಕಾಶ

Minister H. for the district level huge job fair. K. Patil drive allows candidates to choose jobs ac

ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಚಿವ ಎಚ್‌. ಕೆ. ಪಾಟೀಲ ಚಾಲನೆ ಅಭ್ಯರ್ಥಿಗಳ ಆಸಕ್ತಿ, ಶಿಕ್ಷಣಕ್ಕನುಗುಣವಾಗಿ ಉದ್ಯೋಗ ಆರಿಸಿಕೊಳ್ಳಲು ಅವಕಾಶ 

ಗದಗ 01 : ಅಭ್ಯರ್ಥಿಗಳ ಆಸಕ್ತಿ ಹಾಗೂ ಶಿಕ್ಷಣಕ್ಕನುಗುಣವಾಗಿ ಉದ್ಯೋಗ ಪಡೆಯಲು ಎರಡು ದಿನಗಳ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ನಿರುದ್ಯೋಗ ಯುವಜನತೆ ಪಡೆಯಿರಿ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಹೇಳಿದರು.ನಗರದ ಶ್ರೀ ಕೆ ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇವರ ಸಹಯೋಗದೊಂದಿಗೆ ಸಂಕಲ್ಪ ಯೋಜನೆಯಡಿ ಆಯೋಜಿಸಲಾದ ಎರಡು ದಿನಗಳ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ -2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ನಮ್ಮ ನೀರೀಕ್ಷೆಗೂ ಮೀರಿ 64 ಕ್ಕೂ ಅಧಿಕ ಸಂಸ್ಥೆಯ ಉದ್ಯೋಗದಾತರು ಆಗಮಿಸಿದ್ದು ಅಭ್ಯರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಸಚಿವರು ಕರೆ ನೀಡಿದರು.ಗದಗ ಜಿಲ್ಲೆಯ ಯುವ ಜನತೆ ಆಧುನಿಕ ಕೃಷಿ, ಆಹಾರ ತಯಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಅವರಿಗೆ ಉದ್ಯೋಗದಾತರು ಕೆಲಸ ನೀಡಿದಲ್ಲಿ ನಿಮ್ಮ ಸಂಸ್ಥೆ ಅಭಿವೃದ್ಧಿಗೆ ಹೆಚ್ಚು ಸಹಕಾರಿ ಆಗಲಿದೆ ಎಂದರು.ಗದಗ ಜಿಲ್ಲೆಯಲ್ಲಿ ಯುವಕರು ಅನೇಕರು ದೊಡ್ಡ ದೊಡ್ಡ ಪ್ರತಿಷ್ಠಿತ ಕಂಪನಿಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಸಾಧನೆ ಮಾಡಿದ್ದರೆ. ಹುಲಕೋಟಿಯ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಕಲಿತ ವಿಧ್ಯಾರ್ಥಿಗಳಲ್ಲಿ 250 ಕ್ಕೂ ಅಧಿಕ ಜನರು ಅಮೇರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಹೆಮ್ಮೆ ಎಂದರು.ಹಾಕಿ ಕ್ರೀಡೆಯಲ್ಲಿ ಐದು ಯುವಕರು ಅಂತರಾಷ್ಟ್ರೀಯ ಹಾಕಿಯಲ್ಲಿ ಪಾಲ್ಗೊಂಡು ಹೆಮ್ಮೆ ತಂದಿದ್ದಾರೆ. ಅದರಂತೆ ಕ್ರಿಕೇಟಿಗ ಸುನೀಲ್ ಜೋಷಿ, ಪುಟ್ಬಾಲ್, ಕುಸ್ತಿಯಲ್ಲಿ ಅಗಾದ ಸಾಧನೆ ಮಾಡಿದ್ದಾರೆ. ಅಲ್ಲದೇ ಸಿಎ ಪರೀಕ್ಷೆಯಲ್ಲಿ 4 ಜನ ಒಮ್ಮೇಲೆ ತೇರ್ಗಡೆ ಹೊಂದಿದ್ದಾರೆ. ಹಾಗೂ ಪ್ರತಿಷ್ಠಿತ ಕಂಪನಿ ಇಸ್ರೋದಲ್ಲಿ ಗದಗಿನ ಇಂಜೀನೀಯರಗಳು ಕಾರ್ಯ ನಿರ್ವಹಣೆ ಮಾಡಿ ಸಾಧನೆ ಮಾಡಿದ್ದಾರೆ ಎಂದರು.ಉದ್ಯೋಗ ಮೇಳದಲ್ಲಿ ಈವರೆಗೆ 6243 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ನೋಂದಣಿ ನಡೆದಿದೆ. ಉದ್ಯೋಗದಾತರಿಂದ 21 ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅವುಗಳು ಜಿಲ್ಲೆಯ ಯುವಕರಿಗೆ ದೊರೆಯಲಿ ಎಂದರು.ಉದ್ಯೋಗ ಮೇಳದ ಉದ್ದೇಶ ಈಡೇರಿಕೆಗಾಗಿ ವೈಜ್ಞಾನಿಕವಾಗಿ ಶ್ರಮವಹಿಸಿದ ಜಿಲ್ಲಾಧಿಕಾರಿ ಸಿ ಎಲ್ ಶ್ರೀಧರ್ ಹಾಗೂ ಎಲ್ಲ ಯೋಜನೆಗಳ ಸುಲಿ ಸ್ಥಿತಿಗೊಳಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರಿಗೆ ಸಚಿವ ಎಚ್ ಕೆ ಪಾಟೀಲ ಅವರು ಪ್ರಶಂಸಿಸಿದರು.ಅಭ್ಯರ್ಥಿಗಳಾದ ಬೀಮಾಂಬಿಕಾ, ಪ್ರಶಾಂತ ಮಾಚೇನಹಳ್ಳಿ, ಮಂಜುಳಾ ಕಟಗಲಿ ಹಾಗೂ ಆನಂದ ಸಿದ್ನಿಕೊಪ್ಪ ಅವರುಗಳಿಗೆ ಇದೇ ಸಂದರ್ಬದಲ್ಲಿ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ಅವರು ಸಂಸ್ಥೆಗಳಿಂದ ಉದ್ಯೋಗ ಪಡೆದ ಆಪರ್ ಪತ್ರಗಳನ್ನು ವಿತರಿಸಿದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಎಸ್‌.ವಿ. ಸಂಕನೂರ ಪಾಲ್ಗೊಂಡು ಮಾತನಾಡಿ, ಗದಗನಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಕ್ಕಾಗಿ ಜಿಲ್ಲಾಡಳಿತ, ಸರ್ಕಾರ ಹಾಗೂ ಸಚಿವರಾದ ಎಚ್ ಕೆ ಪಾಟೀಲ ಅವರಿಗೆ ಅಭಿನಂದನೆಗಳು ಎಂದರು.ನಿರುದ್ಯೋಗ ಸಮಸ್ಯೆ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿಯೂ ಇದೆ. ಇದರ ನಿವಾರಣೆಗಾಗಿ ಸರ್ಕಾರ ಪ್ರಯತ್ನಿಸುತ್ತಿದೆ. ಅಭ್ಯರ್ಥಿಗಳು ಕೇವಲ ಸರ್ಕಾರಿ ನೌಕರಿ ಮೇಲೆ ಅವಲಂಬನೆಯಾಗದೆ ಖಾಸಗಿ ಹಾಗೂ ಸ್ವಾವಲಂಬಿ ಉದ್ಯೋಗಿಗಳಾಗಲು ಕರೆ ನೀಡಿದರು.ಕೌಶಲ್ಯ ಅಭಿವೃದ್ಧಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಯತ್ನ ಆಗಬೇಕಿದೆ ಇದನ್ನರಿತ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎನ್‌ಇಪಿ ಶಿಕ್ಷಣ ನೀತಿ ಜಾರಿಗೊಳಿಸಿದರು. ಜೊತೆಗೆ ಯುವಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿಯೇ ಪ್ರತ್ಯೇಕವಾಗಿ ಕೌಶಲ್ಯಾಭಿವೃದ್ಧಿ ಇಲಾಖೆ ಆರಂಭಿಸಿದರು ಎಂದರು.ಕೇಂದ್ರ ಸರ್ಕಾರ ಸ್ಕೀಲ್ ಇಂಡಿಯಾ, ಸ್ಟಾರ್ಟ್‌ ಅಪ್ ಇಂಡಿಯಾ ಸೇರಿದಂತೆ ಹಲವಾರು ಯೋಜನೆಗಳ ಜಾರಿ ಮೂಲಕ ಉದ್ಯಮಿಗಳಾಗಲು ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಗ್ರಾಮೀಣ ಯುವಜನರಲ್ಲಿರಲ್ಲಿ ಕೌಶಲ್ಯ ಹಾಗೂ ಕಮ್ಯುನಿಕೇಶನ್ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟರು.ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಗದಗ ಬೆಟಗೇರಿನಗರ ಸಭೆಯ ನೂತನ ಅಧ್ಯಕ್ಷ ಕೃಷ್ಣ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ, ಸಿದ್ದು ಪಾಟೀಲ, ಕೃಷ್ಣಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿ.ಪಂ.ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ಜಿಲ್ಲಾ ಕೌಶಲ್ಯಾಬಿವೃದ್ಧಿ ಅಧಿಕಾರಿ ಡಾ.ಮಲ್ಲೂರ ಬಸವರಾಜ ಹಾಜರಿದ್ದರು.